ಪರೀಕ್ಷೆ ಗೂ ಮುನ್ನವೇ ಪ್ರಾಧ್ಯಾಪಕ ರ ಹುದ್ದೆಯ ಪ್ರಶ್ನೆ ಪತ್ರಿಕೆ ಲೀಕ್ ಸೋರಿಕೆಯಾದ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್…..

Suddi Sante Desk

ಬೆಂಗಳೂರು –

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಡೀಲ್ ನಡೆದಿದೆ ಎಂಬ ಆರೋಪಕ್ಕೆ ಈಗ ಮತ್ತೊಂದು ಪುಷ್ಠಿ ಸಿಕ್ಕಿದೆ.ಹೌದು ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಅಭ್ಯರ್ಥಿಗಳ ಮೊಬೈಲ್ ನಲ್ಲಿ ಹರಿದಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಈ ಹಿಂದೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಡೀಲ್ ನಡೆದಿರುವ ಬಗ್ಗೆ ಅಭ್ಯರ್ಥಿಗಳು ಸಂಶಯ ವ್ಯಕ್ತಪಡಿಸಿದ್ದು ಇದೀಗ ಈ ಒಂದು ಮಾತಿಗೆ ಪ್ರಶ್ನೆ ಪತ್ರಿಕೆ ಲೀಕ್ ಅಗಿದ್ದು ಹತ್ತಾರು ಅನುಮಾನಗಳನ್ನು ಹುಟ್ಟು ಹಾಕಿದೆ

ಇದೀಗ ಪರೀಕ್ಷೆಗೆ ಮೊದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾ ಗಿರುವುದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಅಭ್ಯರ್ಥಿ ಗಳು ಸಾಕ್ಷಿ ಒದಗಿಸಿದ್ದಾರೆ.ಒಂದು ಕಡೆಗೆ ಈಗಾಗಲೆ ಸಹಾ ಯಕ ಪ್ರಾಧ್ಯಾಪಕ ಹುದ್ದೆ ಭರ್ತಿಗೆ 40 ಲಕ್ಷ ರೂ.ಡೀಲ್ ನಡೆಯುತ್ತಿದೆ ಎಂದು ಅಭ್ಯರ್ಥಿಗಳಿಂದ ಆರೋಪ ಕೇಳಿ ಬಂದಿತ್ತು.ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಾವು ಪಾರದರ್ಶಕವಾಗಿ ಮತ್ತು ನ್ಯಾಯೋಚಿತ ವಾಗಿ ಪರೀಕ್ಷೆ ನಡೆಸುತ್ತಿದ್ದೇವೆಂದು ಸ್ಪಷ್ಟನೆ ನೀಡಿತ್ತು. ಆದರೆ ಪರೀಕ್ಷೆ ನಿಗದಿಗೂ ಮೊದಲೇ ಭೂಗೋಳಶಾಸ್ತ್ರದ ಪ್ರಶ್ನೆ ಪತ್ರಿಕೆ ವಾಟ್ಸ್ ಆಪ್ ಮತ್ತು ಸ್ನಾಪ್ ಚಾಟ್ ಗಳಲ್ಲಿ ಸೋರಿಕೆ ಯಾಗಿರುವುದು ಕಂಡು ಬಂದಿದೆ ಎಂದು ಅಭ್ಯರ್ಥಿಗಳು ಆರೋಪಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.

ಮೇ. 14ರಂದು ಬೆಳಗ್ಗೆ 9 ರಿಂದ 12ರ ಅವಧಿಯಲ್ಲಿ ಭೂಗೋಳಶಾಸ್ತ್ರದ ಪರೀಕ್ಷೆ ಆಯೋಜಿಸಿತ್ತು.ಅದೇ ದಿನ ಬೆಳಗ್ಗೆ 8.30ರ ವೇಳೆ ಒಂದು ಪ್ರತ್ಯೇಕ ಮೊಬೈಲ್ ಸಂಖ್ಯೆ ಯಿಂದ ಪ್ರಶ್ನೆಗಳನ್ನು ಬೇರೆ ಬೇರೆ ವಾಟ್ಸ್ ಆಪ್ ಗಳಿಗೆ ರವಾನೆ ಮಾಡಲಾಗಿದೆ.ಈ ರೀತಿ ರವಾನೆಯಾಗಿರುವ 18 ಪ್ರಶ್ನೆಗಳು ಅದೇ ದಿನ ನಡೆದ ಪರೀಕ್ಷೆಯಲ್ಲೂ ಯಥಾವ ತ್ತಾಗಿ ಬಂದಿದೆ. ಇದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ರುವುದು ಸ್ಪಷ್ಟವಾಗಿದೆ.ಅಲ್ಲದೆ ಪರೀಕ್ಷೆ ಬರೆದಿರುವ ನನಗೆ ಮೊದಲ ರ್ಯಾಂಕ್ ಉಳಿದವರಿಗೆ ಮುಂದಿನ ರ್ಯಾಂಕ್ ಗ್ಯಾರೆಂಟಿ ಸಿಗಲಿದೆ ಎಂದು ಪ್ರಶ್ನೆ ಬರೆದ ನಂತರ ಅಭ್ಯರ್ಥಿ ಗಳು ಚಾಟಿಂಗ್ ಮಾಡಿದ್ದಾರೆ.ಇದರಿಂದ ಕೆಇಎ ತುಂಬಾ ಪಾರದರ್ಶಕವಾಗಿ ಪರೀಕ್ಷೆ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿದೆ.ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ತಕ್ಷಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.ಪ್ರಶ್ನೆ ಪತ್ರಿಕೆ ಸಿದ್ಧ ಪಡಿಸಿದವರೇ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಎಂಬ ಅನುಮಾನ ಇದೆ. ಇದರಿಂದ ಸಾಕಷ್ಟು ವರ್ಷದಿಂದ ಪರೀಕ್ಷೆಗೆ ಸಿದ್ಧತೆ ನಡೆಸಿದವರಿಗೆ ಅನ್ಯಾಯವಾಗಿದೆ ತಕ್ಷಣ ತನಿಖೆ ನಡೆಸ ಬೇಕು ಮರು ಪರೀಕ್ಷೆ ಆಯೋಜಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ವಾಣಿಜ್ಯ ವಿಷಯದ ಪ್ರಶ್ನೆ ಪತ್ರಿಕೆಯಲ್ಲೂ ಕೆಲವು ಖಾಸಗಿ ವೆಬ್‌ಸೈಟ್ ನಿಂದ ನೇರವಾಗಿ ಪ್ರಶ್ನೆಗಳನ್ನು ತೆಗೆದು ಪ್ರಶ್ನೆ ಪತ್ರಿಕೆ ರೂಪಿಸಿರುವುದಾಗಿ ಆರೋಪಿಸಿ ಅಭ್ಯರ್ಥಿಗಳು ಈಗಾಗಲೆ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.ಇದೇ ರೀತಿ ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಯಲ್ಲೂ 10ಕ್ಕೂ ಹೆಚ್ಚು ಪ್ರಶ್ನೆಗಳನ್ನು ತಪ್ಪಾಗಿ ಕೇಳಿರುವುದು, ತಪ್ಪಾಗಿ ಅನುವಾದ ಮಾಡಿರುವ ಬಗ್ಗೆಯೂ ಅಭ್ಯರ್ಥಿಗಳು ಪ್ರಾಧಿಕಾರ ಮುಂದೆ ಪ್ರತಿಭಟನೆ ನಡೆಸಿದ್ದರು. ಅಭ್ಯರ್ಥಿಗಳು ದೂರು ದಾಖಲು ಮಾಡುತ್ತಿದ್ದರೂ, ಈವರೆಗೆ ಪ್ರಾಧಿಕಾರದಿಂದ ಅಭ್ಯರ್ಥಿಗ ಳಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.