This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Education Newsಧಾರವಾಡ

ಸಿದ್ದವಾಯಿತು ಹೆಚ್ಚುವರಿ ಶಿಕ್ಷಕರ ಪಟ್ಟಿ – ಮಕ್ಕಳ ಸಂಖ್ಯೆ ಕುಸಿತದ ಪರಿಣಾಮವಾಗಿ ರಾಜ್ಯಾಧ್ಯಂತ ಎಷ್ಟು ಇದ್ದಾರೆ ಹೆಚ್ಚುವರಿ ಶಿಕ್ಷಕರು ಗೊತ್ತಾ


ಬೆಂಗಳೂರು

ರಾಜ್ಯಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರು ಹೆಚ್ಚುವರಿ ಶಿಕ್ಷಕರಾಗಿದ್ದಾರೆ.ಹೌದು ಈ ಒಂದು ಅಂಶವನ್ನು ಇಲಾಖೆ ಪತ್ತೆ ಮಾಡಿದ್ದು ವರ್ಗಾವ ಣೆಯ ಹೊಸ ನೀತಿಯ ಅನ್ವಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಿದ್ದು ಮಕ್ಕಳು ಕಡಿಮೆ ಇರುವ ಶಾಲೆಗಳಲ್ಲಿನ 10,500 ಶಿಕ್ಷಕರನ್ನು ಹೆಚ್ಚುವರಿ ಎಂದು ಶಿಕ್ಷಣ ಇಲಾಖೆ ಪಟ್ಟಿ ಮಾಡಿದೆ

ಸರ್ಕಾರ ಒಂದರಿಂದ ಐದನೇ ತರಗತಿಯವರೆಗೆ 40 ವಿದ್ಯಾರ್ಥಿಗಳಿಗೆ ಆರರಿಂದ ಎಂಟನೇ ತರಗತಿ ಯವರೆಗೆ 35 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಂತೆ ಅನುಪಾತ ನಿಗದಿ ಮಾಡಿದೆ.ಈ ಅನುಪಾತಕ್ಕೆ ಅನುಗುಣವಾಗಿ ರಾಜ್ಯದ ವಿವಿಧ ಶಾಲೆಗಳಲ್ಲಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯ ವಾಗಿ ಕುಸಿಯುತ್ತಿದೆ

ಎರಡು ವರ್ಷಗಳಿಗೆ ಒಮ್ಮೆ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ಧಪಡಿಸಿ, ಅವರನ್ನು ಅಗತ್ಯವಿರುವ ಇತರೆ ಶಾಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ.ಈ ಬಾರಿ 10,500 ಶಿಕ್ಷಕರು ಹೆಚ್ಚುವರಿಯಾಗಿದ್ದು, ವರ್ಗಾವಣೆಗೂ ಮೊದಲು ಅವರಿಗೆ ಸ್ಥಳ ನಿಯುಕ್ತಿ ಮಾಡಲಾಗುತ್ತಿದೆ.ನಂತರ ಉಳಿಯುವ ಖಾಲಿ ಹುದ್ದೆಗಳಿಗೆ ಕೌನ್ಸೆಲಿಂಗ್‌ ಮೂಲಕ ಸಾಮಾನ್ಯ ವರ್ಗಾವಣೆ ಮಾಡಲಾಗುತ್ತದೆ.

ಒಂದರಿಂದ ಎಂಟನೇ ತರಗತಿಯವರೆಗಿನ ಪ್ರಾಥಮಿಕ ಶಾಲೆಗಳಲ್ಲಿ 1.53 ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.ವರ್ಗಾವಣೆಯ ನೀತಿಯಂತೆ ಶೇ 7ರಷ್ಟು ಶಿಕ್ಷಕರು ವರ್ಗಾವಣೆಗೆ ಅವಕಾಶ ಪಡೆಯುತ್ತಾರೆ. ಅಂದರೆ 10,700 ಶಿಕ್ಷಕರು ಈ ಬಾರಿ ವರ್ಗಾವಣೆಗೆ ಅರ್ಹತೆ ಪಡೆಯಲಿದ್ದಾರೆ. ಅಷ್ಟೇ ಸಂಖ್ಯೆಯ ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News Join The Telegram Join The WhatsApp

 

 

Suddi Sante Desk

Leave a Reply