ಹುಬ್ಬಳ್ಳಿ -ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ವೊಂದು ರಸ್ತೆ ವಿಭಜಕೆ ಗುದ್ದಿದ ಘಟನೆ ನಗರದ ಗೋಕುಲ ರಸ್ತೆಯಲ್ಲಿ ನಡೆದಿದೆ.

ಹೊಸಪೇಟೆ ಯಿಂದ ಗೋವಾಗೆ ಸ್ಪಂಜ್ ತುಂಬಿಕೊಂಡು ಲಾರಿ ಹೊರಟಿತ್ತು.ರಸ್ತೆಯಲ್ಲಿ
ಹೋರಟಿದ್ದ ಟ್ರಕ್ ರಸ್ತೆ ಮಧ್ಯೆ ಬಂದ ಬೈಕ್ ಸವಾರರನನ್ನು ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಚಾಲಕ ಡಿಕ್ಕಿ ಹೊಡೆದಿದ್ದಾನೆ.

ಇನ್ನೂ ಘಟನಾ ಸ್ಥಳಕ್ಕೆ ಆಗಮಿಸಿದ ಪೋಲಿಸ್ ಸಿಬ್ಬಂದಿ ಪರಿಶೀಲನೆ ನಡೆಸಿ ಟ್ರಕ್ ಹೊರೆ ತೆಗೆಯುವ ಕಾರ್ಯ ನಡೆಸಿದ್ದಾರೆ.ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.ಜನದಟ್ಟಾದ ಪ್ರದೇಶದಲ್ಲಿ ಅಪಘಾತವಾಗಿದ್ದು ಯಾವುದೇ ರೀತಿಯ ದೊಡ್ಡ ಪ್ರಮಾಣದ ಅವಘಡವೊಂದು ತಪ್ಪಿದಂತಾಗಿದೆ. ಈ ಕುರಿತು ಗೋಕುಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..