ಸಿಡಿದೆದ್ದ KGRPSTA ಧಾರವಾಡ ಜಿಲ್ಲಾಧ್ಯಕ್ಷರು – ಶಿಕ್ಷಕರ ಸಮಸ್ಯೆ ಗಳಿಗೆ ಸ್ಪಂದಿಸದ ಸಂಘಟನೆ ನಾಯಕರಿಗೆ ಅಕ್ಬರಅಲಿ ಸೋಲಾಪೂರ ರವರ ಸಂದೇಶ ವೈರಲ್…..

Suddi Sante Desk

ಧಾರವಾಡ –

ನನ್ನೆಲ್ಲ ಶಿಕ್ಷಕರಿಗೆ ಶುಭರಾತ್ರಿ……ಒಂದು ಸಮಯದಲ್ಲಿ ಹಲವಾರು ತೊಂದರೆ ಅನುಭವಿಸುತ್ತಿರುವ ಶಿಕ್ಷಕರಿಗೆ ಸವಾಲಾಗಿರುವ ಸಮಸ್ಯೆಗಳಿಗೆ ಯಾರೊಂದೂ ಬಗೆ ಹರಿಸುವ ಗೋಜಿಗೆ ಹೋಗುತ್ತಿರಲಿಲ್ಲ.ಅಂತಹ ಸಮಯದಲ್ಲಿ ಫಿನಿಕ್ಸನಂತೆ ಹುಟ್ಟಿಕೊಂಡಿದ್ದೆ ಗ್ರಾಮೀಣ ಸಂಘಟನೆ. ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನರ ನೇತೃತ್ವದಲ್ಲಿ ಕೆಲವೆ ದಿನಗಳಲ್ಲಿ ರಾಜ್ಯದಲ್ಲಿ ಹೋರಾಟದ ಸಂಚಲನ ಮೂಡಿಸಿ ವಗಾ೯ವಣೆ ಸಮೇತ ಎಲ್ಲ ಸಮಸ್ಯೆಗಳು ಒಂದೊಂದೊರಂತೆ ಪರಿಹಾರವಾದವು.

ಆ ನಂತರ ನಿಟ್ಟುಸಿರು ಬಿಟ್ಟ ಶಿಕ್ಷಕರಿಗೆ ಮತ್ತೆ ವಗಾ೯ವಣೆ ಸಂಕಷ್ಟ ಎದುರಾಯಿತು.ಸಧ್ಯ ಎರಡು ವಷ೯ಗಳಿಂದ ಕಾಡುತ್ತಲಿದೆ.ಎರಡು‌ ವಷ೯ಗಳಿಂದ ವಗಾ೯ವಣೆ ಆಗದೆ ಹಲವಾರು ಕಾರಣಗಳು ಹುಟ್ಟಿ ಕೊಂಡವು.ನಿರಂತರ ಸಮಸ್ಯೆಯಾಗಿ ಉಳಿಯುವುದಕ್ಕೆ ಯಾರು? ಕಾರಣರು ಶಿಕ್ಷಕರ ಮೇಲಿನ ಅಪಾರ ಪ್ರೀತಿ,ವಿಸ್ವಾಸ ಹೊಂದಿರುವ ಶಿಕ್ಷಕ ನಾಯಕರೆ,ಶಿಕ್ಷಕ ಪ್ರತಿನಿಧಿಗಳೆ, ಶಿಕ್ಷಣ ಇಲಾಖೆ,ಇಲ್ಲಾ ಸಾಮಾಜಿಕ ಜವಾಬ್ದಾರಿ ಹೊತ್ತ ನಾಯಕರೆ ಇದಕ್ಕೆಲ್ಲಾ ಯಾರು?ಹೊಣೆ ಎಂಬುದೆ ಇಲ್ಲಿವರೆಗೆ ಅಥ೯ವಾಗದೇ ನಿಗೂಢವಾಗಿ ಉಳಿದಿದೆ.

ಮಕ್ಕಳು,ಪೋಷಕರು,ಹಿರಿಯರು,ಕುಟುಂಬ ವಂಚಿತ ರಾಗುತ್ತಿರುವುದಕ್ಕೆ ಹಿಡಿ ಶಾಪ ಹಾಕುತ್ತಿರುವುದು ತಪ್ಪಿಲ್ಲ.ಯಾವಾಗ ಯಾರ ಶಾಪ ತಟ್ಟುವುದು ಗೊತ್ತಿಲ್ಲ ವೆಂದು ಸಾವ೯ಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಶಿಕ್ಷಕ ಸಂಘಟನೆಗಳ ಮೌನ ತುಂಬಾ ಅನುಮಾನ ಹುಟ್ಟಿಕೊಳ್ಳುತ್ತಿವೆ ಎಂಬುದು ಶಿಕ್ಷಕರ ವಾದ. ಗ್ರಾಮೀಣ ಶಿಕ್ಷಕರ ಸಂಘ ಯಾವತ್ತೂ ಭರವಸೆ ಕಳೆದುಕೊಳ್ಳದೆ ನಿರುತ್ಸಾಹ ತೋರುತ್ತಿರು ವುದು ಯಾಕೆ ? ಮೌನವಾಗಿದ್ದೀರಿ ! ಎಂಬ ಪ್ರಶ್ನೆಗಳು ಸಂಘದ ನಾಯಕರಿಗೆ ಕೇಳುತ್ತಿರುವುದು ಖೇದಕರ ವಿಚಾರ. ಮಾನ್ಯತೆ ಪಡೆದ ಶಿಕ್ಷಕರ ಸಂಘನೆಯ ಹಣೆ ಪಟ್ಟಿ ಕಟ್ಟಿಕೊಂಡವರ ಪರಿಸ್ಥಿತಿ ಯಂತೂ ಹೇಳತೀರದು.ಅವರ ಮಾತು ಎಲ್ಲಿಯೂ ಯಾರು ?ಕೇಳುತ್ತಿಲ್ಲ.ಬೇಲಿ ಎದ್ದು ಹೊಲ ಮೇಯ್ದಂ ತಾಗಿದೆ ಶಿಕ್ಷಕರ ಪರಿಸ್ಥಿತಿ.ನ್ಯಾಯಾ ಎಲ್ಲಿದೆಯೋ ಅಣ್ಣಾ......! ಎಂದು ಹಾಡುತ್ತಾ ಶಾಲೆ,ಮನೆಯ ಸುತ್ತ ಬೆಸತ್ತು ಗಿರಕಿ ಹೊಡಿಯುತ್ತಾ ಹುಚ್ಚರಂತಾದ ಶಿಕ್ಷಕರಿಗೆ ವಗಾ೯ವಣೆ ಯಾವಾಗ ಪ್ರಾರಂಭವಾಗುತ್ತದೆ ಗೊತ್ತಿಲ್ಲ. ಗಗನ ಕುಸುಮವಾದ ವಗಾ೯ವಣೆ ಬೇಗ ಪ್ರಾರಂಭ ವಾಗಲಿ,ಶಿಕ್ಷಕರಿಗೆ ನ್ಯಾಯ ದೇವತೆ ಕಣ್ಣು ತೆರೆದು ನೋಡಲಿ ಎಂಬುದೆ ಈ ಬಡ ಧ್ವನಿ ಇಲ್ಲದ ಶಿಕ್ಷಕ ನಾಯಕನ ಅಳಲು, ಶಾಯಿ ಮುಗಿದು ಹೋಗುವ ಮುನ್ನ ಒಂದಿಷ್ಟು ನ್ಯಾಯ ಸಿಗಬಹುದೆ ಎಂದು ನಾವು ನೀವೆಲ್ಲ ಕಾದು ನೋಡೋಣ.... ಧಾರವಾಡದಿಂದ. ಇದನ್ನು ಯಥಾವತ್ತಾಗಿ ಬರವಣಿಗೆ ಯನ್ನು ಹಾಕಲಾಗಿದೆ.

ಅಕ್ಬರಅಲಿ ಸೋಲಾಪೂರ
ಜಿಲ್ಲಾ ಅಧ್ಯಕ್ಷರು
KGRPSTA ಧಾರವಾಡ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.