ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕ ವರ್ಗಾವಣೆಯ ನೀತಿಯಿಂದಾಗಿ ತಂದೆ ತಾಯಿ ಬಂಧು ಬಳಗ ಊರು ಹೆಂಡತಿ ಮಕ್ಕಳನ್ನು ಬಿಟ್ಟು ದೂರ ದೂರ ಇರುವ ಶಿಕ್ಷಕರನ್ನು ತಾವು ಬಯಸಿದ ಜಿಲ್ಲೆಗೆ ವರ್ಗಾವಣೆ ಮಾಡುವ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಂದಿಸಿ ತಾವು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾಯಿಸಬೇ ಕೆಂಬ ಶಿಕ್ಷಕರ ಬಹು ವರ್ಷಗಳ ಶಿಕ್ಷಕರ ಬೇಡಿಕೆಯನ್ನು ಪರಿ ಶೀಲಿಸುವಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ.
ಹೌದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಸೇವಾ ವಧಿಯಲ್ಲಿ ಒಂದು ಬಾರಿ ಅವರು ಬಯಸುವ ಜಿಲ್ಲೆಗೆ ವರ್ಗಾಯಿಸುವ ಸಂಬಂಧ ಶಿಕ್ಷಕರ ಅಭಿಪ್ರಾಯ ಸಂಗ್ರಹಿ ಸಲು ಕ್ರಮ ಕೈಗೊಳ್ಳುವಂತೆ ಸಚಿವರು ಇಲಾಖೆಯ ಅಧಿ ಕಾರಿಗಳಿಗೆನಿರ್ದೇಶನ ನೀಡಿದ್ದಾರೆ.
ವರ್ಗಾವಣೆ ಸಂಬಂಧ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಮನವಿ ಮಾಡಿದ್ದರು ಇದರೊಂದಿಗೆ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಪವಾಡೆಪ್ಪ ಮತ್ತು ಮಹೇಶ್ ಮಡ್ಡಿ ನೇತೃತ್ವದಲ್ಲಿ ಶಿಕ್ಷಕರು ಹೋರಾಟ ಮಾಡಿದ್ದರು ಇದರೊಂದಿಗೆ ಸುದ್ದಿ ಸಂತೆ ಕೂಡಾ ನಿರಂತರ ವರದಿಯನ್ನು ಪ್ರಸಾರ ಮಾಡಿತ್ತು ಇದೆಲ್ಲದರ ನಡುವೆ ಈಗ ಸಚಿವರು ಸೂಚನೆ ನೀಡಿದ್ದು ಹೊಸ ಭರವಸೆ ಮೂಡಿಸಿದ್ದು ಶೀಘ್ರದಲ್ಲೇ ಕಾರ್ಯ ಅಗಲಿ ಎಲ್ಲರಂತೆ ಶಿಕ್ಷಕರು ಕೂಡಾ ಸ್ವಂತ ಜಿಲ್ಲೆಗೆ ಹೋಗಿ ಕರ್ತವ್ಯ ಮಾಡಿ ನೆಮ್ಮದಿ ಯಿಂದ ಇರಲಿ ಎಂಬೊಂದು ನಮ್ಮ ಆಶಯ.