This is the title of the web page
This is the title of the web page

Live Stream

[ytplayer id=’1198′]

November 2024
T F S S M T W
 123456
78910111213
14151617181920
21222324252627
282930  

| Latest Version 8.0.1 |

State News

ಸರ್ಕಾರಿ ಶಾಲಾ ಶಿಕ್ಷಕರಿಗಾಗಿ ಹೊಸದೊಂದು ಯೋಜನೆ ಜಾರಿಗೆ ತರಲು ಮುಂದಾದ ಸಚಿವರು – ಶಿಕ್ಷಕರಿಗೆ ಬೋಧನಾ ಸಂಪನ್ಮೂಲ ಹೆಚ್ಚಿಸಲು ಬರುತ್ತಿದೆ ಯಾಂತ್ರಿಕ ಬುದ್ದಿಮತ್ತೆಯ ತಂತ್ರಜ್ಞಾನ…..

ಸರ್ಕಾರಿ ಶಾಲಾ ಶಿಕ್ಷಕರಿಗಾಗಿ ಹೊಸದೊಂದು ಯೋಜನೆ ಜಾರಿಗೆ ತರಲು ಮುಂದಾದ ಸಚಿವರು – ಶಿಕ್ಷಕರಿಗೆ ಬೋಧನಾ ಸಂಪನ್ಮೂಲ ಹೆಚ್ಚಿಸಲು ಬರುತ್ತಿದೆ ಯಾಂತ್ರಿಕ ಬುದ್ದಿಮತ್ತೆಯ ತಂತ್ರಜ್ಞಾನ…..
WhatsApp Group Join Now
Telegram Group Join Now

ಬೆಂಗಳೂರು

ಸರ್ಕಾರಿ ಶಾಲಾ ಶಿಕ್ಷಕರಿಗೆ ಬೋಧನಾ ಸಂಪನ್ಮೂಲ ಗಳನ್ನು ಯಾಂತ್ರಿಕ ಬುದ್ದಿಮತ್ತೆ (ಎಐ) ತಂತ್ರಜ್ಞಾನದಲ್ಲಿ ಒದಗಿಸುವ ‘ಶಿಕ್ಷ ಕೋಪೈಲಟ್‌’ ಆಯಪ್‌ ಅನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಿಡುಗಡೆ ಮಾಡಿದರು.ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ‘ಶಿಕ್ಷ ಕೋಪೈಲಟ್‌’ ಆಯಪ್‌ ರಚಿಸಲಾಗಿದೆ.

ಶಿಕ್ಷಕರಿಗೆ ಅಗತ್ಯವಾಗಿರುವ ಪಠ್ಯಕ್ರಮ, ಭಾಷೆ, ಸಂದರ್ಭಕ್ಕೆ ಅನುಸಾರವಾಗಿ ಸಮಗ್ರ ಬೋಧನಾ ಸಂಪನ್ಮೂಲ, ಕಲಿಕಾ ಅನುಭವಗಳನ್ನು ರಚಿಸಲು ಈ ಆಯಪ್‌ ಸಹಕಾರಿಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.ಎಐ ತಂತ್ರಜ್ಞಾನವನ್ನು ಶಾಲಾ ಶಿಕ್ಷಣದಲ್ಲಿ ಅಳವಡಿಸುವ ಸಾಧ್ಯತೆಗಳನ್ನು ಪರಿಶೀಲಿಸಿ ಎಂದು ಸೂಚಿಸಿದ್ದರು.ಅವರ ಮಾರ್ಗದರ್ಶನದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯದಂತೆ ಶಿಕ್ಷಣ ಇಲಾಖೆಯಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳು, ಶಿಕ್ಷಕರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದರು.

ಶಿಕ್ಷಣ ಫೌಂಡೇಷನ್‌ ಮತ್ತು ಮೈಕ್ರೊಸಾಫ್ಟ್‌ ರಿಸರ್ಚ್‌ ಇಂಡಿಯಾದ ಸಹಯೋಗದಲ್ಲಿ ‘ಶಿಕ್ಷ ಕೋಪೈಲಟ್‌’ ಆಯಪ್‌ ರಚಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 750 ಶಾಲೆಗಳ ಒಂದು ಸಾವಿರ ಶಿಕ್ಷಕರಿಗೆ ಪ್ರಾಯೋಗಿಕವಾಗಿ ಒದಗಿಸಲಾಗುತ್ತಿದೆ. ಇದರ ಯಶಸ್ವಿ ನಂತರ ಸುಮಾರು ಒಂದು ಲಕ್ಷ ಶಿಕ್ಷಕರಿಗೆ ಸೌಲಭ್ಯ ನೀಡುವ ಯೋಜನೆ ಇದೆ ಎಂದರು.

ಪ್ರಾರಂಭಿಕವಾಗಿ ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ನಾಲ್ಕು ಭಾಷೆಗಳ ಬೋಧನಾ ಸಂಪನ್ಮೂಲಗಳನ್ನು ಈ ಆಯಪ್‌ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ವಿಷಯಗಳಿಗೂ ಅನ್ವಯವಾಗಲಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.’ಪೋಷಕರು ಮಕ್ಕಳನ್ನು ನಿರಂತರವಾಗಿ ಶಾಲೆಗೆ ಕಳುಹಿಸಬೇಕು. ಶೇ 100ರಷ್ಟು ಹಾಜರಾತಿ ಇರುವಂತೆ ನೋಡಿಕೊಳ್ಳಬೇಕು. ಎಲ್ಲ ರೀತಿಯ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಜೀವನಕ್ಕೆ ಅಗತ್ಯವಾದ ಶಿಕ್ಷಣವನ್ನು ಕೊಡಿಸಬೇಕು.

10 ತರಗತಿಯಲ್ಲಿ ಒಂದು ಬಾರಿ ಫೇಲ್‌ ಮತ್ತೆರಡು ಅವಕಾಶ ನೀಡಲಾಗುತ್ತದೆ. ಅದರಲ್ಲೂ ಅನುತ್ತೀರ್ಣ ರಾದರೆ, ಆಲಸ್ಯ ಮಾಡದೆ ಮತ್ತೆ ಕಲಿಕೆ ಮುಂದುವರಿ ಸಬೇಕು’ ಎಂದು ಸಲಹೆ ನೀಡಿದರು.ತರಗತಿಯಲ್ಲಿ ಪಾಠ ಮಾಡುವ ಮುನ್ನ ಅದಕ್ಕೆ ಅಗತ್ಯವಾದ ಸಂಪನ್ಮೂಲ ಹಾಗೂ ಕ್ರಮಗಳನ್ನು ಸಿದ್ಧಪಡಿಸಿಕೊಳ್ಳಲು ಸುಮಾರು 45 ನಿಮಿಷ ಬೇಕಾಗಿತ್ತು.

‘ಶಿಕ್ಷ ಕೋಪೈಲಟ್‌’ ಆಯಪ್‌ ಮೂಲಕ ಒಂದರಿಂದ ಐದು ನಿಮಿಷದಲ್ಲಿ ಬೋಧನ ಸಂಪನ್ಮೂಲ ಸಿದ್ಧವಾ ಗುತ್ತಿದೆ. ಅಲ್ಲದೆ, ಪಠ್ಯಕ್ರಮಕ್ಕೆ ಅಗತ್ಯವಾದ ಹೆಚ್ಚಿನ ಮಾಹಿತಿಯನ್ನೂ ಆನ್‌ಲೈನ್‌ ಮೂಲಕ ಪಡೆದು ಕೊಳ್ಳಬಹುದು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk