ಮೊಬೈಲ್‌ ಬ್ಲಾಸ್ಟ್ – ಕ್ಷಣಾರ್ಧದಲ್ಲಿಯೇ ಉಳಿದ ಜೀವ

Suddi Sante Desk

ಹುಬ್ಬಳ್ಳಿ –

ಮೊಬೈಲ್ ಫೋನ್ ಬಳಕೆದಾರರೇ ಎಚ್ಚರ ಎಚ್ಚರ.ಇಟ್ಟಲ್ಲಿಯೇ ಬ್ಲಾಸ್ಟ್ ಆಗಿತಿವೆ ಮೊಬೈಲ್ ಗಳು ಹೌದು ಇಂಥದೊಂದು ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಮಧಿರಾ ಕಾಲೊನಿಯಲ್ಲಿ ಈ ಒಂದು ಘಟನೆ ನಡೆದಿದ್ದು ಸ್ವಲ್ಪದರಲ್ಲೇ ಯುವಕನೊಬ್ಬ ದುರಂತದಿಂದ ಪಾರಾಗಿದ್ದಾರೆ.ದಯಾನಂದ ಎಂಬುವರು ತಮ್ಮ ಮನೆಯಲ್ಲಿಯೇ ಈ ಒಂದು ಅವಘಡ ನಡೆದಿದೆ‌‌.

ಫೋನ್ ಚಾರ್ಜಿಂಗ್ ಹಾಕದಿದ್ರೂ ಬ್ಲಾಸ್ಟ್ ಆಗಿದೆ ಮೊಬೈಲ್ ಫೋನ್.ಮಧ್ಯಾನದವರೆಗೆ ಸರಿಯಾಗಿಯೇ ಇದ್ದ ಮೊಬೈಲ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದೆ.ದಯಾನಂದ ಕೊಟ್ಯಾನ್ ಎಂಬುವವರಿಗೆ ಸೇರಿದ ಜಿಯೋನಿ ಮೊಬೈಲ್‌.2ವರ್ಷದ ಹಿಂದೆ ಖರೀದಿಸಿದ್ದರು.

ಕೆಲ ನಿಮಿಷಗಳ ಹಿಂದಷ್ಟೆ ದಯಾನಂದ ಅವರ ಪುತ್ರಿ ಫೋನೊನಲ್ಲಿ ಮಾತನಾಡುತ್ತಿದ್ದರು.ಮಾತು ಮುಗಿಸಿ ಫೋನ್ ಟೇಬಲ್ ಮೇಲುಟ್ಟ ಕೆಲವೇ ನಿಮಿಷದಲ್ಲಿ ಮೊಬೈಲ್ ಬ್ಲಾಸ್ಟ್ ಆಗಿದೆ.ಎರಡು ವರುಷಗಳಿಂದ ಸರಿಯಾಗಿದ್ದ ಮೊಬೈಲ್ ಇಂದು ಏಕಾಏಕಿಯಾಗಿ ಬ್ಲಾಸ್ಟ್ ಆಗಿದೆ.ಮಧಿರಾ ಕಾಲೋನಿಯಲ್ಲಿರುವ ದಯಾನಂದ ಅವರ ಮನೆ‌.
ಯಲ್ಲಿ ಈ ಒಂದು ಅವಘಡ ನಡೆದಿದೆ.ಸ್ವಲ್ಪದರಲ್ಲೇ ದೊಡ್ಡ ಪ್ರಮಾಣದ ಅವಘಟವೊಂದು ತಪ್ಪಿದೆ.ಇನ್ನೂ ಭಾರಿ ಅನಾಹುತದಿಂದ ಯುವಕ ಕೂಡಾ ಪಾರಾಗಿದ್ದಾನೆ.

ಬ್ಯಾಟರಿ, ಫೋನ್ ಸುಟ್ಟು ಕರಕಲಾಗಿದ್ದು ಗಾಬರಿಗೊಂಡ ದಯಾನಂದ ಕೊಟ್ಯಾನ ಕುಟುಂಬದವರು ಸ್ವಲ್ಪದರಲ್ಲೇ ಸಾವಿನ ದವಡೆಯಿಂದ ಪಾರಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.