ಜಾರ್ಖಂಡ್ –
ಸ್ವಾತಂತ್ರ್ಯ ದೊರೆತು ಎಷ್ಟೋ ಬದಲಾವಣೆ ಗಳಾದರು ಇನ್ನೂ ನಾವುಗಳು ಯಾವ ಪರಿಸ್ಥಿತಿ ಯಲ್ಲಿ ಇದ್ದೇವಿ ಎನ್ನೊದಕ್ಕೆ ಈ ಸುದ್ದಿನೇ ಸಾಕ್ಷಿ. ಹೆರಿಗೆಯ ನಂತರ ತೀರ್ವ ರಕ್ತ ಸ್ರಾವ ಆದ ಕಾರಣ ಸಂಬಂಧಿಕರೇ ಮಹಿಳೆ ಮತ್ತು ಮಗುವನ್ನು ಮಂಚದ ಸಮೇತ ಸುಮಾರು ಏಳು ಕಿಮೀ ದೂರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊತ್ತುಕೊಂಡು ಹೋದರೂ ಸಕಾಲದಲ್ಲಿ ವೈದ್ಯರು ಲಭ್ಯವಿರದ ಕಾರಣ ತಾಯಿ ಮತ್ತು ನವಜಾತ ಶಿಶು ಸತ್ತಿರುವ ಆಘಾತಕಾರಿ ಘಟನೆ ನಡೆದಿದೆ.

ಜಾರ್ಖಂಡ್ ನ ಟಿಸ್ರಿಯ ಬರ್ದೌನಿ ಗ್ರಾಮದ ಲಕ್ಷ್ಮಿಬಥನ್ ಕಾಲೋನಿಯಲ್ಲಿ ಪತಿ ಸುನಿಲ್ ತುಡು ಅವರೊಂದಿಗೆ ವಾಸಿಸುತ್ತಿದ್ದ ಸುರ್ಜಾ ಮರಂಡಿ ಮಗುವಿಗೆ ಜನ್ಮ ನೀಡಿದರು. ‘ಸೂಲಗಿತ್ತಿ ಬೆಳಿಗ್ಗೆ ಮಗುವನ್ನು ಹೆರಿಗೆ ಮಾಡಿದ್ದಳು,ತೀವ್ರ ರಕ್ತಸ್ರಾವ ಆದ ಕಾರಣ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದಳು.ಆದರೆ ರಸ್ತೆಯೇ ಸರಿ ಇರದ ಆ ಊರಿನಲ್ಲಿ ಯಾವುದೇ ವಾಹನ ಓಡಾಡುತ್ತಿರಲಿಲ್ಲ.

ಸಂಬಂಧಿಕರೇ ತಾಯಿ ಮತ್ತು ಮಗುವನ್ನು ಮಂಚದಲ್ಲಿ ಹೊತ್ತುಕೊಂಡು ಹೊರಟರು.ಸಂಜೆ 5 ಗಂಟೆ ಸುಮಾರಿಗೆ ಆಸ್ಪತ್ರೆ ತಲುಪಿದಾಗ, ವೈದ್ಯರು ಆಸ್ಪತ್ರೆಯಲ್ಲಿ ಇರಲಿಲ್ಲ. ಒಬ್ಬ ವೈದ್ಯ ಮೀಟಿಂಗ್ ಎಂದು ರಜೆ ಹಾಕಿದ್ದರೆ, ಇನ್ನೊಬ್ಬ ವೈದ್ಯ ಹೇಳದೇ ರಜೆ ಹಾಕಿದ್ದರು , ವೈದ್ಯರು ಇರುತ್ತಿದ್ದರೆ ತಾಯಿ ಮಗು ಬದುಕುತ್ತಿದ್ದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ.