This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

State Newsಧಾರವಾಡ

ಪತಿಯ ಪರವಾಗಿ ಕಲಘಟಗಿ ಕ್ಷೇತ್ರದಲ್ಲಿ ಮುಂದುವರೆದ ಶ್ರೀಮತಿ ಜ್ಯೋತಿ ನಾಗರಾಜ್ ಛಬ್ಬಿ ಅವರ ಸಂಚಾರ – ದ್ಯಾಮಾಪೂರ ಸೇರಿದಂತೆ ಹಲವೆಡೆ ಸಭೆ ಸಮಾರಂಭ ಮಹಿಳೆಯೊಂದಿಗೆ ಮಾತುಕತೆ ಮನೆ ಮನೆಗೆ ತೆರಳಿ ಕುಕ್ಕರ್ ವಿತರಣೆ

ಪತಿಯ ಪರವಾಗಿ ಕಲಘಟಗಿ ಕ್ಷೇತ್ರದಲ್ಲಿ ಮುಂದುವರೆದ ಶ್ರೀಮತಿ ಜ್ಯೋತಿ ನಾಗರಾಜ್ ಛಬ್ಬಿ ಅವರ ಸಂಚಾರ – ದ್ಯಾಮಾಪೂರ ಸೇರಿದಂತೆ ಹಲವೆಡೆ ಸಭೆ ಸಮಾರಂಭ ಮಹಿಳೆಯೊಂದಿಗೆ ಮಾತುಕತೆ ಮನೆ ಮನೆಗೆ ತೆರಳಿ ಕುಕ್ಕರ್ ವಿತರಣೆ
WhatsApp Group Join Now
Telegram Group Join Now

ಕಲಘಟಗಿ

ಧಾರವಾಡದ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಈಗಲೇ ಕಾಂಗ್ರೇಸ್ ಪಕ್ಷದ ನಾಗರಾಜ ಛಬ್ಬಿ ಅವರ ಮತ್ತು ಟೀಮ್ ನ  ಸಂಚಾರ ಜೋರಾಗಿದ್ದು ಇನ್ನೂ ಕಳೆದ ಕೆಲ ದಿನಗಳಿಂದ ಕ್ಷೇತ್ರದಲ್ಲಿ ಬಿಡುವಿಲ್ಲದೇ ಸುತ್ತಾಡುತ್ತಿರುವ ಇವರೊಂದಿಗೆ ಸಧ್ಯ ಇವರ ಪತ್ನಿ ಕೂಡಾ ಕಾಲಿಗೆ ಚಕ್ರವನ್ನು ಕಟ್ಟಿಕೊಂಡವರಂತೆ ತಮ್ಮ ಬೆಂಬಲಿಗ ರೊಂದಿಗೆ ಪ್ರವಾಸವನ್ನು ಮಾಡುತ್ತಿದ್ದಾರೆ. ಪ್ರತಿ ದಿನ ಒಂದೊಂದು  ಊರುಗಳಿಗೆ ತೆರಳಿ ಸಭೆ ಸಮಾರಂಭ ಮಾಡುತ್ತಾ ಅಲ್ಲಲ್ಲಿ ಕಾರ್ಯಕ್ರಮ ಮಾಡುತ್ತಾ ಗ್ರಾಮಸ್ಥರ ಅದರಲ್ಲೂ ಮಹಿಳೆಯೊಂ ದಿಗೆ ವಿಶೇಷವಾದ ಸಭೆಯನ್ನು ಮಾಡುತ್ತಾ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

ಹೀಗಾಗಿ ಈಗಲೇ ಛಬ್ಬಿ ಮತ್ತು ಟೀಮ್ ನವರ  ಸಂಚಾರ ಕ್ಷೇತ್ರದಲ್ಲಿ ಜೋರಾಗಿದ್ದು ಹೋದಲ್ಲೆಲ್ಲಿ ಉತ್ತಮವಾದ ಸ್ಪಂದನೆ ಜನರಿಂದ ಸಿಗುತ್ತಿದ್ದು ನಾಗರಾಜ ಛಬ್ಬಿ ಅವರೊಂದಿಗೆ ಅವರ ಪತ್ನಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರಿಗೂ ಕಂಡು ಬರುತ್ತಿದ್ದು ಹೀಗಾಗಿ ಪ್ರವಾಸ ಕ್ಷೇತ್ರದಲ್ಲಿ ಜೋರಾಗಿದ್ದು ಇಂದು ಕಲಘಟಗಿಯ ದ್ಯಾಮಾ ಪೂರ ಗ್ರಾಮದಲ್ಲಿ ನಡೆಯಿತು.ಗ್ರಾಮದ ಬಸವೇ ಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರೊಂದಿಗೆ ವಿಶೇಷ ವಾದ ಸಭೆಯನ್ನು ಮಾಡಿದ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ಸಮಸ್ಯೆಗಳನ್ನು ಆಲಿಸಿ ನಂತರ ಅಲ್ಲಿಂದ ಕುಕ್ಕರ್ ವಿತರಣೆಗೆ ಚಾಲನೆ ನೀಡಿ ಗ್ರಾಮದಲ್ಲಿ ಒಂದು ಸುತ್ತು ಸುತ್ತಾಡಿ ಮನೆ ಮನೆಗೆ ತೆರಳಿ ಸಮಸ್ಯೆಗಳನ್ನು ಆಲಿಸುತ್ತಾ ಕೇಳುತ್ತಾ ಕುಕ್ಕರ್ ಗಳನ್ನು ವಿತರಣೆ ಮಾಡಿದರು.

ಹೀಗಾಗಿ ಹೋದಲ್ಲೇಲ್ಲ ಕಲಘಟಗಿ ಕ್ಷೇತ್ರದಲ್ಲಿ ಛಬ್ಬಿ ಪರ ಅಲೆ ಜನ ಬೆಂಬಲ ಕಂಡು ಬರುತ್ತಿದ್ದು ಈಗ ಕಳೆದ ಕೆಲ ದಿನಗಳಿಂದ ಪತಿ ಪರವಾಗಿ ಕಲಘಟಗಿಯಲ್ಲಿ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಮಿಂಚಿನ ಸಂಚಾರವನ್ನು ಮಾಡುತ್ತಿದ್ದಾರೆ. ಚುನಾವಣೆಯ ಮುನ್ನವೇ ಧಾರವಾಡ ಜಿಲ್ಲೆ ಯಲ್ಲಿ ಚುನಾವಣೆಯ ಅಬ್ಬರ ಜೋರಾಗಿದ್ದು ನಾ ಮುಂದು ನೀ ಮುಂದು ಎನ್ನುತ್ತಾ ಈಗಲೇ ಕ್ಷೇತ್ರ ದಲ್ಲಿ ಕಾಂಗ್ರೇಸ್ ಪಕ್ಷದಿಂದ ನಾಗರಾಜ ಛಬ್ಬಿ ಮತ್ತು ಟೀಮ್ ನವರು ಪ್ರಚಾರದೊಂದಿಗೆ ಈಗಲೇ ಮತದಾರರ ಸಮಸ್ಯೆ ಆಲಿಸುತ್ತಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಕಾಂಗ್ರೇಸ್ ಪಕ್ಷದ ಮುಖಂಡ ಯುವ ನಾಯಕ ನಾಗರಾಜ್ ಛಬ್ಬಿ ಅವರು ಈಗಾಗಲೇ ಬಿಡುವಿಲ್ಲದೇ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಡುವಿಲ್ಲದೇ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಸುತ್ತಾಡುತ್ತಾ ಪ್ರವಾಸ ಮಾಡುತ್ತಾ ಸುತ್ತಾಟ ಮಾಡುತ್ತಿದ್ದಾರೆ

ಸಾಲದಂತೆ ಎಲ್ಲೇಂದರಲ್ಲಿ ಸಭೆ ಸಮಾರಂಭ ಮಾಡುತ್ತಾ ಜನರ ಸಂಕಷ್ಟಗಳನ್ನು ಆಲಿಸುತ್ತಿರು ವುದು ಕಂಡು ಬರುತ್ತಿರುವುದರೊಂದಿಗೆ ಅಲ್ಲೇ ಪರಿಹಾರವನ್ನು ಕೂಡಾ ನೀಡುತ್ತಾ ನೆರವಾಗುತ್ತಿ ದ್ದಾರೆ ಇದರೊಂದಿಗೆ ಚುನಾವಣೆಯ ಮುನ್ನವೇ ಕ್ಷೇತ್ರದಲ್ಲಿ ಬಿಡು ಬಿಟ್ಟಿದ್ದು ಕಾಲಿಗೆ ಚಕ್ರವನ್ನು ಕಟ್ಟಿ ಕೊಂಡವರಂತೆ ಬೆಂಬಲಿಗರೊಂದಿಗೆ ಸುತ್ತಾಡುತ್ತಿ ದ್ದಾರೆ.ಇದು ಒಂದು ವಿಚಾರವಾದರೆ ಇನ್ನೂ ಇದರೊಂದಿಗೆ ಈಗ ಪತಿಯ ಪರವಾಗಿ ಇವರ ಪತ್ನಿ ಜ್ಯೋತಿ ನಾಗರಾಜ ಛಬ್ಬಿ ಅಖಾಡಕ್ಕಿಳಿದಿ ದ್ದಾರೆ.ಕ್ಷೇತ್ರದ ಹಲವು ಗ್ರಾಮಗಳಲ್ಲಿ ಈಗಲೇ ಅವರು ಕೂಡಾ ತಮ್ಮ ಬೆಂಬಲಿಗರೊಂದಿಗೆ ಪಕ್ಷಕ ಕಾರ್ಯಕರ್ತರು ಮಹಿಳಾ ಮುಖಂಡರೊಂದಿಗೆ ಅಲ್ಲಲ್ಲಿ ಸಭೆ ಸಮಾರಂಭಗಳನ್ನು ಮಾಡುತ್ತಾ ಇವರು ಕೂಡಾ ಮಹಿಳೆಯರ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.

ಈಗಲೇ ಕ್ಷೇತ್ರದ ಜನರ ಕಣ್ಣೀರು ಹೊರೆಸುತ್ತಾ ನೆರವಾಗುತ್ತಿದ್ದಾರೆ.ಅಲ್ಲದೇ ಪ್ರತಿ ಮನೆಗೂ ತೆರಳಿ ಸಮಸ್ಯೆ ಸಂಕಷ್ಟ ಗಳನ್ನು ಆಲಿಸಿ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಕುಕ್ಕರ್ ಗಳನ್ನು ಪ್ರೀತಿಯಿಂದ ನೀಡುತ್ತಿದ್ದಾರೆ.ನಾಗರಾಜ ಛಬ್ಬಿ ಕೇವಲ ಹೆಸರಿಗೆ ಆಗಲೇ ಬರುವ ಚುನಾವಣೆ ಯಲ್ಲಿ ನಿಮ್ಮ ಯಾವುದೇ ಸಮಸ್ಯೆ ಸಂಕಷ್ಟ ಗೆ ಸದಾ ಕಾಲವೂ ನಿಂತುಕೊಳ್ಳಲಿದ್ದಾರೆ ಎಂಬ ಭರವಸೆಯ ಮಾತುಗಳನ್ನು ಇದರೊಂದಿಗೆ ಹೇಳುತ್ತಾ ಜ್ಯೋತಿ ನಾಗರಾಜ ಛಬ್ಬಿ ಅವರು ತಮ್ಮ ಬೆಂಬಲಿಗರೊಂದಿಗೆ ಈ ಒಂದು ಕಾರ್ಯ ದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿಯೊಂದು ಗ್ರಾಮದಲ್ಲಿ ಮೊದಲು ಪೂಜೆಯನ್ನು ಮಾಡಿ ಸಾರ್ಜಜನಿಕರು ಮತ್ತು ಮಹಿಳೆಯೊಂದಿಗೆ ಶ್ರೀಮತಿ ಜ್ಯೋತಿ ನಾಗರಾಜ ಛಬ್ಬಿ ಅವರು ಸಭೆಯನ್ನು ಮಾಡಿದರು.ಇದೇ ವೇಳೆ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.

ಇನ್ನೂ ಇವರು ಕ್ಷೇತ್ರದಲ್ಲಿ ಹೋದಲ್ಲೇಲ್ಲ ಅಭೂತಪೂರ್ಣವಾದ ಜನಬೆಂಬಲ ಪ್ರೀತಿಯ ಅಕ್ಕರೆಯ ಬೆಂಬಲ ಕಂಡು ಬರುತ್ತಿದ್ದು ಇವ ರೊಂದಿಗೆ ಸಾಕಷ್ಟು ಒಲವು ಕಂಡು ಬರುತ್ತಿರು ವುದು ಕಂಡು ಬರು ತ್ತಿದ್ದು ಜ್ಯೋತಿ ನಾಗರಾಜ ಛಬ್ಬಿ ಅವರೊಂದಿಗೆ ಶಂಕರ, ಹಚಿನನಾಗಿ, ನೇಮಚಂದ್ರ ಪದ್ಮಣವರ, ಚನ್ನಬಸಯ್ಯ ಪೂಜಾರ ಸುಭಾಸ ಮಾಳಂಗಿ, ಸುಭಾಸ ಪದ್ಮಣವರ,ಆನಂದ ದೇಶಪಾಂಡೆ, ಷಣ್ಮುಖ ಗದಗಿನ,ಮಹಾವೀರ ಧಾರವಾಡ, ಮಂಜಯ್ಯ ಪೂಜಾರ,ಸಂಜು ಸಣ್ಣಮನಿ, ವಿನೋದ ಛಬ್ಬಿ,ಸುನಂದಾ ಬಡಿಗೇರ,ಸಂಗಪ್ಪ ಮಕನಾ ಪೂರ,ಮಂಜು ಸೇರಿದಂತೆ ಹಲವರು ಉಪಸ್ಥಿತ ರಿದ್ದರು.

ಸುದ್ದಿ ಸಂತೆ ನ್ಯೂಸ್…..


Google News

 

 

WhatsApp Group Join Now
Telegram Group Join Now
Suddi Sante Desk