ಕೋಲ್ಕತ –
ಕಳ್ಳತನ ಪ್ರಕರಣದ ತನಿಖೆಗೆಂದು ಪಶ್ಚಿಮ ಬಂಗಾಳ ಕ್ಕೆ ಭೇಟಿ ನೀಡಿದ ಸಮಯದಲ್ಲಿ ಅವರನ್ನೆ ಕಳ್ಳರೆಂ ದು ತಿಳಿದು ಹಿಗ್ಗಾ ಮುಗ್ಗಾ ಥಳಿಸಿ ಕೊಲೆ ಮಾಡಿರುವ ಘಟನೆ ಬಂಗಾಳದಲ್ಲಿ ನಡೆದಿದೆ.ಹೌದು ಬಿಹಾರದ ಪೊಲೀಸ್ ಅಧಿಕಾರಿಯನ್ನು ಗ್ರಾಮಸ್ಥರ ಗುಂಪೊಂ ದು ಹಿಗ್ಗಾಮುಗ್ಗಾ ಥಳಿಸಿ ಕೊಲೆ ಮಾಡಿದ್ದಾರೆ. ಇಂಥ ದೊಂದು ಅಮಾನವೀಯ ಘಟನೆ ಬಂಗಾಳದ ಉತ್ತರ ದಿನಾಜ್ಪುರದಲ್ಲಿ ನಡೆದಿದೆ.
ಹೌದು ಬಿಹಾರದ ಕಿಶಾನ್ಗಂಜ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅಶ್ವಿನ್ ಕುಮಾರ್ ಮೃತ ದುರ್ದೈವಿಗಳಾಗಿದ್ದಾರೆ. ಈ ಗ್ರಾಮದಲ್ಲಿನ ಗುಂಪೊಂದು ಅಶ್ವಿನ್ ಅವರನ್ನು ಹಿಡಿದು ಥಳಿಸಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.ಅಶ್ವಿನ್ ಅವರು ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಡ್ ಮಾಡಲು ಗ್ರಾಮಕ್ಕೆ ಬಂದಿದ್ದಾಗ ಈ ಒಂದು ಘಟನೆ ನಡೆದಿದೆ.
ಅಶ್ವಿನ್ ಅವರು ಖದೀಮನಿಗಾಗಿ ಹುಡುಕಾಡುವಾಗ ಅವರಿಗೆ ಸ್ಥಳೀಯ ಪೊಲೀಸರ ನೆರವು ಸಿಗಲಿಲ್ಲ. ಹೀಗಾಗಿ ಏಕಾಂಗಿಯಾಗಿ ಕಾರ್ಯಾಚರಣೆಗೆ ಇಳಿದಿ ದ್ದೇ ಅವರಿಗೆ ಮುಳುವಾಗಿದೆ.ಇನ್ನೂ ಸದ್ಯ ಈ ಒಂದು ಘಟನೆ ಸಂಬಂಧ ಓರ್ವ ಆರೋಪಿಯನ್ನು ಪಂಜಿಪರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಪ್ರಮುಖವಾಗಿ ಅಶ್ವಿನ್ ಅವರು ಉತ್ತರ ದಿನಾಜ್ಪುರದ ಗ್ರಾಮಕ್ಕೆ ಅಶ್ವಿನ್ ಭೇಟಿ ನೀಡಿದಾಗ ಗ್ರಾಮಸ್ಥರು ಅಶ್ವಿನ್ ಮೇಲೆ ದಂಡ ಮತ್ತು ಕಲ್ಲುಗ ಳಿಂದ ದಾಳಿ ಮಾಡಿದ್ದಾರೆ. ಗಂಭೀರವಾಗಿ ಗಾಯ ಗೊಂಡಿದ್ದ ಅವರನ್ನು ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಮೃತಪ ಟ್ಟಿದ್ದಾರೆ.