ಬೆಂಗಳೂರು –
ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆಯನ್ನು ಹಾಡುವ ಕುರಿತಂತೆ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶವನ್ನು ಮಾಡಿದೆ.ಹೌದು ಇನ್ಮುಂದೆ ರಾಜ್ಯದ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ‘ರಾಷ್ಟ್ರಗೀತೆ’ ಕಡ್ಡಾಯವಾಗಿ ಪ್ರತಿದಿನ ಹಾಡುವಂತೆ ರಾಜ್ಯ ಸರ್ಕಾರವು ಸೂಚನೆ ನೀಡಿ ಅಧಿಕೃತವಾಗಿ ಆದೇಶವನ್ನು ಮಾಡಿದೆ.
ಈ ಹಿಂದೆ ಈ ಕುರಿತಂತೆ ಸಾಕಷ್ಟು ದೂರುಗಳು ಮತ್ತು ಕೆಲವೊಂದಿಷ್ಟು ವಿಚಾರಗಳನ್ನು ರಾಜ್ಯ ಸರ್ಕಾರ ಗಮನಿ ಸಿತ್ತು ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ಎಲ್ಲಾ ಶಾಲೆ ಕಾಲೇಜುಗಳಲ್ಲಿ ‘ರಾಷ್ಟ್ರಗೀತೆ’ ಕಡ್ಡಾಯವಾಗಿ ಹಾಡುವಂತೆ ಆದೇಶವನ್ನು ಮಾಡಿದೆ.ಅಲ್ಲದೇ ಈ ಕುರಿ ತಂತೆ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶವನ್ನು ಹೊರ ಡಿಸಿದೆ.
ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ, ಅನುದಾನಿತ, ಅನುದಾ ನರಹಿತ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತಿ ದಿನ ಸಾಮೂಹಿಕ ಪ್ರಾರ್ಥನೆ ವೇಳೆಯಲ್ಲಿ ವಿದ್ಯಾರ್ಥಿ ಗಳಲ್ಲಿ ರಾಷ್ಟ್ರಗೀತೆ ಹಾಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರದ ಬಗ್ಗೆ ಗೌರವ ಭಾವನೆ ಗಳನ್ನ ಮೂಡಿಸಬೇಕು ಎಂದು ಸೂಚನೆಯನ್ನು ನೀಡಲಾ ಗಿದೆ.