ಅಧಿಕಾರ ವಹಿಸಿಕೊಂಡ ನೂತನ BEO – ಶ್ರೀಮತಿ ಲೀಲಾವತಿ ಹಿರೇಮಠ ಅವರನ್ನು ಸ್ವಾಗತ ಮಾಡಿಕೊಂಡ ಬರಮಾಡಿಕೊಂಡ ಶಿಕ್ಷಕ ಬಂಧುಗಳು…..

Suddi Sante Desk

ಬೆಳಗಾವಿ –

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಳಗಾವಿ ದಕ್ಷಿಣ ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯಕ್ಕೆ ಶಿಕ್ಷಣಾಧಿಕಾರಿ ಗಳಾಗಿ ವರ್ಗಾವಣೆಯಾಗಿ ಬಂದು ಅಧಿಕಾರ ವನ್ನು ವಹಿಸಿಕೊಂಡರು.ಹೌದು ದಕ್ಷ, ಪ್ರಾಮಾಣಿ ಕರು,ಸರಳ ಸಜ್ಜನಿಕೆಯ,ಶಿಕ್ಷಕರ ಸಮೂಹದ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಶ್ರೀಮತಿ ಲೀಲಾವತಿ ಎಸ್ ಹಿರೇಮಠ ಹಾಗೂ ಇನ್ನೊಬ್ಬ ಶಿಕ್ಷಣಾಧಿಕಾರಿ ಗಳಾಗಿ ವರ್ಗಾವಣೆ ಹೊಂದಿ ಹಾಜರಾಗಿರುವ ಶ್ರೀಮತಿ ಸುಜಾತಾ ಬಾಳೆಕುಂದ್ರಿ ರವರನ್ನು ಇಂದು ಮಧ್ಯಾಹ್ನ ಕಾರ್ಯಾಲಯ ದಲ್ಲಿ ಶಿಕ್ಷಕರ ಗೆಳೆಯರ ಬಳಗದಿಂದ ಆತ್ಮೀಯವಾಗಿ ಸ್ವಾಗತ ಬಯಸಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅವರ ಮುಂದಿನ ಶೈಕ್ಷಣಿಕ ಬದುಕಿನಲ್ಲಿ ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ಮಾಡಿ ಶೈಕ್ಷಣಿಕಕಾರ್ಯಚಟುವಟಿಕೆಗಳಲ್ಲಿ ಉತ್ತಮ ಕಾರ್ಯ ಮಾಡಿ ಶಿಕ್ಷಕರ ಸಮೂಹದ ಪ್ರೀತಿ ವಿಶ್ವಾಸ ಗಳಿಸುವಂತೆ ಆಶಯವನ್ನು ವ್ಯಕ್ತ ಪಡಿಸಿದರು

ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ರ ಸಂಘದ ಪ್ರದಾನಕಾರ್ಯದರ್ಶಿಗಳಾದ ಮಾಸ್ತಮರಡಿ ಶಾಲೆಯ ಬಸವರಾಜ ಫಕೀರಪ್ಪ ಸುಣಗಾರ,ವಿಜಯನಗರ ಮರಾಠಿ ಶಾಲೆಯ ಕನ್ನಡ ಶಿಕ್ಷಕರಾದ ರುದ್ರಯ್ಯ ಈಶ್ವರಯ್ಯ ಮೇಟ್ಯಾಳ ಮಠ,ಬೆಳಗಾವಿ ನಗರದ ರುಕ್ಮಿಣಿ ನಗರದ ಕನ್ನಡ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ರಾದ ರಾಜೇಂದ್ರ ಗೋಶ್ಯಾನಟ್ಟಿ,ಮುತ್ತೇನಟ್ಟಿ ಶಾಲೆಯ ಮುಖ್ಯ್ಯೊಪಾದ್ಯಾಯರಾದ ಆಯ್ ಜಿ ಕಂಚಿಮಠ, ಶಿಕ್ಷಕರಾದ ವಿ ಎಸ್ ಚವಾಣ್, ಶಿಕ್ಷಕಿ ಸವಿತಾ ಎ ಗುಳೇದ ರವರು ಉಪಸ್ಥಿತರಿದ್ದು ಅಭಿನಂದಿಸಿದರು

ಈ ಸಮಯದಲ್ಲಿ ಶಿಕ್ಷಣಾಧಿಕಾರಿ ಗಳಾದ ಜಿ ಎಸ್ ಕಂಬಳಿ ಮತ್ತು ಪಾಟೀಲ ಮತ್ತು ಸಿಬ್ಬಂದಿ ಗಳು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.