ಬೆಂಗಳೂರು –
ರಾಜ್ಯದ ಶಾಲೆಗಳಲ್ಲಿ ಸಧ್ಯ ಎಷ್ಟು ಕೋವಿಡ್ ಪ್ರಕರಣ ಗಳಿವೆ ಎಷ್ಟು ಮಕ್ಕಳಲ್ಲಿ,ವಿದ್ಯಾರ್ಥಿಗಳಲ್ಲಿ ಕರೋನಾ ಕಾಣಿಸಿಕೊಂಡಿದೆ ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತವಾದ ಮಾಹಿತಿಯನ್ನು ಪ್ರಕಟ ಮಾಡಿದೆ. ಹೌದು ಕರ್ನಾಟಕದ ಸಾರ್ವಜನಿಕ ಶಿಕ್ಷಣ ಆಯುಕ್ತರ ಕಚೇರಿ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಇದುವರೆಗೆ ಕರ್ನಾಟಕದಾದ್ಯಂತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 130 ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಚಿಕ್ಕಮಗಳೂರಿನ ಜವಾಹರ ನವೋದಯ ವಿದ್ಯಾಲಯ ವಸತಿ ಶಾಲೆಯಲ್ಲಿ ಗರಿಷ್ಠ 92 ಪ್ರಕರಣಗಳು ವರದಿಯಾ ಗಿವೆ. ಈ ನಡುವೆ, ಕೇರಳದ ಗಡಿಯಲ್ಲಿರುವ ಚಾಮರಾಜ ನಗರ ಜಿಲ್ಲೆಯಲ್ಲಿ 7 ಮತ್ತು ಕೊಡಗು ಜಿಲ್ಲೆಯಲ್ಲಿ 11 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.ಸೋಮವಾರ 9 ವಿದ್ಯಾರ್ಥಿಗಳಿಗೆ ಕೊವಿಡ್ ಪಾಸಿಟಿವ್ ದೃಫಟ್ಟಿರುವುದ ರಿಂದ ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜನ್ನು ಸೀಲ್ ಮಾಡಲಾಗಿದೆ.
ಕೇರಳದಿಂದ ಹಿಂತಿರುಗಿದ ಎಂ.ವಿ.ಕಾವೂರಿನ ಶೆಟ್ಟಿ ಕಾಲೇಜಿನ 173 ವಿದ್ಯಾರ್ಥಿಗಳನ್ನು ಪರೀಕ್ಷಿಸಲಾಗಿದೆ. ಆರಂಭದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಪತ್ತೆಯಾಯಿತು.ನಂತರ ಇನ್ನೂ ನಾಲ್ಕು ವಿದ್ಯಾರ್ಥಿಗಳಲ್ಲಿ ಕೊವಿಡ್ ಸೋಂಕು ದೃಢಪಟ್ಟಿತು ಎಂದಿದ್ದಾರೆ ಸೋಮವಾರ ಇನ್ನೂ ಇಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಎಲ್ಲಾ ಸೋಂಕಿತ ವಿದ್ಯಾರ್ಥಿಗ ಳನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಪ್ರಾಥಮಿಕ ಸಂಪರ್ಕಗಳನ್ನು ಸಹ ಟ್ರ್ಯಾಕ್ ಮಾಡಲಾಗಿದೆ. ಸೋಂಕಿತ ವಿದ್ಯಾರ್ಥಿಗಳನ್ನು ಕೋವಿಡ್ -19 ಗಾಗಿ ಮರು ಪರೀಕ್ಷೆ ಮಾಡಲಾಗುವುದು.
ವಿದ್ಯಾರ್ಥಿಗಳ ಸ್ವ್ಯಾಬ್ ಮಾದರಿಗಳನ್ನು ಸಹ ಜೀನೋ ಮಿಕ್ ಪರೀಕ್ಷೆಗೆ ಕಳುಹಿಸಲಾಗಿದೆ.ಈಗಾಗಲೇ ಚಿಕ್ಕಮಗ ಳೂರಿನ ವಸತಿ ಶಾಲೆಯಲ್ಲಿ 92 ಕೋವಿಡ್-19 ಪ್ರಕರಣ ಗಳು ವರದಿಯಾಗಿವೆ.ಹೆಚ್ಚುತ್ತಿರುವ COVID-19 ಕ್ಲಸ್ಟರ್ ನ ಹರಡುವಿಕೆಯನ್ನು ಎದುರಿಸಲು ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸ್ವ್ಯಾಬ್‌ಗಳನ್ನು ಸಂಗ್ರಹಿಸಲಾಗಿದೆ.ಹಾಗೇ, ಶಾಲಾ- ಕಾಲೇಜುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಖಡಕ್ ಸೂಚನೆ ಯನ್ನು ನೀಡಲಾಗಿದೆ.