ಬೆಳಗಾವಿ –
ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾರ ರಿಗೆ ಆಮಿಷ ಒಡ್ಡಲು ತಡರಾತ್ರಿ ಮದ್ಯ ಹಾಗೂ ಮಾಂಸಾ ಹಾರದ ಪಾರ್ಟಿ ಮಾಡಿದ್ದಾರೆ ಎನ್ನಲಾದ ಕೆಲವು ಫೋಟೊ ಹಾಗೂ ವಿಡಿಯೂ ತುಣುಕುಗಳು ಸಾಮಾಜಿಕ ಜಾಲತಾ ಣದಲ್ಲಿ ಹರಿದಾಡುತ್ತಿವೆ.

ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿರುವ ರಾಷ್ಟ್ರೀಯ ಪಕ್ಷವೊಂದರ ಕಚೇರಿ ಆವರಣದಲ್ಲಿ ಈ ಪಾರ್ಟಿ ಮಾಡಲಾಗಿದೆ.ಅಭ್ಯರ್ಥಿಯೇ ಭರ್ಜರಿ ಪಾರ್ಟಿ ಕೊಟ್ಟಿದ್ದಾರೆ.ಹಲವು ಶಿಕ್ಷಕರು ಇದರಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.ಪಕ್ಷದ ಕಚೇರಿಯು ಚಿಕ್ಕೋಡಿ ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿಗೆ ಹೊಂದಿಕೊಂಡೇ ಇದೆ.ಆದರೂ ಪಾರ್ಟಿ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಲಿಲ್ಲ ಎಂಬ ಆರೋಪ ಕೇಳಿಬಂದಿದ್ದು ಮುಂದೇನು ಮಾಡತಾರೆ ಎಂಬೊಂದನ್ನು ಕಾದು ನೋಡಬೇಕು