ಧಾರವಾಡ –
ಸಾರಿಗೆ ಬಸ್ ವೊಂದು ಕಾಲುವೆಗೆ ಉರುಳಿ ಬಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡದ ಹಳಿಯಾಳ ರಸ್ತೆಯ ತಪೊವನದ ಬಳಿ ಈ ಒಂದು ಅಪಘಾತ ನಡೆದಿದೆ.

ರಾಣೆಬೆನ್ನೂರಿಂದ ಬೆಳಗಾವಿಗೆ ಹೊರಟಿದ್ದ ಸಾರಿಗೆ ಬಸ್ ವೊಂದು ಉರುಳಿ ಬಿದ್ದಿದೆ. ತಪೋವನ ಬಳಿ ಹೆದ್ದಾರಿಯಲ್ಲಿ ಈ ಒಂದು ಅಪಘಡ ನಡೆದಿದೆ. ನಡೆದಿದೆ

ಹೆದ್ದಾರಿಯಲ್ಲಿ ಏಕಾಏಕಿಯಾಗಿ ಲಾರಿ ಮೈಮೇಲೆ ಬಂದಿತು ಹೀಗಾಗಿ ಅಪಘಾತವಾಗುತ್ತದೆ ಎಂದುಕೊಂಡ ಬಸ್ ಚಾಲಕ ಪಕ್ಕಕ್ಕೆ ತಗೆದುಕೊಂಡಿದ್ದಾರೆ ಆದರೆ ಪೂರ್ಣ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿನ ಕಾಲುವೆಗೆ ಉರುಳಿ ಬಿದ್ದಿದೆ.

ಘಟನೆಯಲ್ಲಿ ಬಸ್ ನಲ್ಲಿದ್ದ ಐವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಯಾರಿಗೂ ಏನು ಆಗಿಲ್ಲ ಇನ್ನೂ ಚಾಲಕನಿಗೆ ಗಾಯಗಳಾಗಿದ್ದು ವಿಷಯ ತಿಳಿದ ಧಾರವಾಡ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.