ಹೈದರಾಬಾದ್ –
ಕಾನೂನು ಬಾಹಿರವಾಗಿ ನಡೆದ ಕೋಳಿ ಪಂದ್ಯದಲ್ಲಿ ಕೋಳಿಯೇ ಅದರ ಮಾಲೀಕನ ಪ್ರಾಣ ತೆಗೆದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇದೀಗ ಕೋಳಿ ಮತ್ತು ಕೋಳಿಪಡೆ ಆಯೋಜಕ ಜೈಲು ಕಂಬಿ ಎಣಿಸುವಂತಾಗಿದೆ.
ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಕಾಳಗದಲ್ಲಿ ಪಾಲ್ಗೊಳ್ಳುತ್ತಿದ್ದ ಹುಂಜವೊಂದು ಕಾಲಿಗೆ ಹಾಕಿದ್ದ ಹರಿತವಾದ ಚಾಕುವಿನಿಂದ ಮಾಲೀಕನ ಕುತ್ತಿಗೆ ಕೊಯ್ದು ಕೊಲೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಜಗಳಕ್ಕೆ ಸಿದ್ಧವಾಗಿದ್ದ ಕೋಳಿಯ ಕಾಲುಗಳಿಗೆ ಹರಿತವಾದ ಚಾಕು ಕಟ್ಟಲಾಗಿತ್ತು. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಕೋಳಿಯ ಕಾಲುಗಳಿಗೆ ಹಾಕಿದ್ದ ಚೂಪಾದ ಚಾಕು ಮಾಲೀಕನ ಕುತ್ತಿಗೆ ಕೊಯ್ದಿದೆ.
ತೆಲಂಗಾಣದ ಕರೀಂನಗರ ಜಿಲ್ಲೆಯ ಲೋಥನೂರ್ ನಲ್ಲಿ 16 ಜನರ ಗುಂಪು ಅಕ್ರಮವಾಗಿ ಕೋಳಿ ಜಗಳದ ಜೂಜು ಆಯೋಜಿಸಿದ್ದರು. ಗಾಯಗೊಂಡ ಮಾಲೀಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮಾಲೀಕ ರಸ್ತೆ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಲಾಗಿದೆ. ಇನ್ನೂ ಅಕ್ರಮವಾಗಿ ಕೋಳಿ ಜಗಳದ ಜೂಜು ಆಯೋಜಿಸಿದ್ದ ಇತರ 15 ಮಂದಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ಯೆಲ್ಲಮ್ಮ ದೇವಸ್ಥಾನದಲ್ಲಿ ಫೆಬ್ರವರಿ 22ರಂದು ಕೋಳಿಪಡೆ ಆಯೋಜಿಸಲಾಗಿತ್ತು. ಪೊಲೀಸರಿಗೆ ತಿಳಿಯದಂತೆ ಕದ್ದು ಮುಚ್ಚಿ ಈ ಕೆಲಸವನ್ನು ಮಾಡಲಾಗುತ್ತಿತ್ತು. ನಾನಾ ಊರುಗಳಿಂದ ಜನರು ಕೋಳಿ ತೆಗೆದುಕೊಂಡು ಕೋಳಿ ಜಗಳ ಮಾಡಿಸಲು ಮತ್ತು ನೋಡಲು ಬಂದಿದ್ದರು. ತನುಗುಲ್ಲಾ ಸತೀಶ್(45) ಹೆಸರಿನ ವ್ಯಕ್ತಿಯೂ ತನ್ನ ಕೋಳಿಯೊಂದಿಗೆ ಪಡೆಗೆ ಬಂದಿದ್ದ.