ಧಾರವಾಡ –
ವಿದೇಶದಿಂದ ಧಾರವಾಡಗೆ ಆಗಮಿಸಿದ ಆಕ್ಸಿಜನ್ ಕಂಟೇನರ್ ಗಳನ್ನು ಧಾರವಾಡದಲ್ಲಿ ಬರಮಾಡಿ ಕೊಳ್ಳಲಾಯಿತು.ಕೇಂದ್ರ ಸರ್ಕಾರದ ಸಹಕಾರ ಅದ ರಲ್ಲೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿರಂತರವಾದ ಪ್ರಯತ್ನ ದಿಂದಾಗಿ ಅರಬ್ ದೇಶಗ ಳಿಂದ ಆಕ್ಸಿಜನ್ ಕಂಟೇನರ್ ಬಂದಿವೆ.

ಕೊರೊನಾ ಮಹಾಮಾರಿ ವಿರುದ್ದ ಹೋರಾಡಲು ಅವಶ್ಯಕವಾಗಿಬೇಕಾಗಿರುವ ಆಕ್ಸಿ ಜನ್ ಪೂರೈಕೆಗೆ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಲ್ಹಾದ ಜೋಶಿ ಸತತ ಪ್ರಯತ್ನದಿಂದ

ಇಂದು ಧಾರವಾಡ, ಹಾವೇರಿ, ಬೆಳ ಗಾವಿ, ಗದಗ ಜಿಲ್ಲೆಗೆ ಆಕ್ಸಿಜನ್ ಪೂರೈಸಲು ಅರಬ್ ದೇಶಗಳಿಂದ 50 ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಕಂಟೇನರ್ ಗಳನ್ನ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಅಮೃತ ದೇಸಾಯಿ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿಗಳಾದ ನಿತೀಶ್ ಪಾಟೀಲ್,ಈರೇಶ ಅಂಚಟಗೇರಿ,ಮಲ್ಲಿಕಾರ್ಜುನ ಪಾಟೀಲ್, ಎಸ್ಪಿ ಸೇರಿದಂತೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು

ಇದೇ ವೇಳೆ ಬೇಲೂರಿನ ಕೈಗಾರಿಕಾ ಪ್ರದೇಶದಲ್ಲಿನ ಆಕ್ಸಿಜನ್ ಯೂನಿಟ್ ನ್ನು ವೀಕ್ಷಿಸಿ ಪರಿಶೀಲನೆ ನಡೆ ಸಿದರು.
