ಚಿಕ್ಕೋಡಿ –
ಜಾತಿಯತೆ ಮಾಡುವ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾವಣೆ ಮಾಡಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಕರನ್ನು ಕೊಡಿ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಲಿಗೆ ಬಿದ್ದು ದಲಿತ ಸಮುದಾಯದ ಮುಖಂಡರು ಪ್ರತಿಭಟನೆ ಮಾಡಿದ ಘಟನೆ ಚಿಕ್ಕೋಡಿ ಯಲ್ಲಿ ನಡೆದಿದೆ.
ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಪ್ರತಿಭಟನೆಯ ಚಿತ್ರಣವಿದು
ಕಳೆದ ಅಗಷ್ಟ 15 ರ ಸ್ವಾತಂತ್ರ್ಯ ದಿನದಂದು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಭಾವಚಿತ್ರ ಪೂಜೆ ಮಾಡಿ ಎಂದು ಇಲ್ಲಿಯ ಶಾಲಾ ಮುಖ್ಯಾಧ್ಯಾಪಕಿ ಅನುಪಮಾ ಎಂ ಟಿ ಇವರಿಗೆ ನಮ್ಮ ದಲಿತ ಸಂಘಟನೆ ಯಿಂದ ಪ್ರತಿಭಟಿಸಿ ತಾಕೀತು ಮಾಡಿದ್ದರು
ನಮ್ಮ ಪ್ರತಿಭಟನೆಗೆ ಸ್ಪಂದಿಸಿ ಮುಖ್ಯ ಶಿಕ್ಷಕಿ ಮಾಡಿದ ತಪ್ಪಿಗಾಗಿ ಕ್ಷೇತ್ರ ಶಿಕ್ಷಣಾದಿಕಾರಿಗಳು ಬೇರೆ ಶಾಲೆಗೆ ಇವರನ್ನು ವರ್ಗಾವಣೆ ಮಾಡಿದ್ದರು.ಆದರೆ ಕೆಲ ಕೆಲಸಕ್ಕೆ ಬಾರದ ವ್ಯಕ್ತಿಗಳ ಜೊತೆಗೂಡಿ ರಾಜಕೀಯ ಬಳಸಿ ಮತ್ತೆ ಇದೆ ಶಾಲೆಗೆ ಈ ಶಿಕ್ಷಕಿ ಹಾಜರಾಗಿದ್ದಾರಂತೆ
ಅನುಪಮಾ ಶಿಕ್ಷಕಿ ನಮ್ಮ ಗ್ರಾಮದ ಶಾಲೆಗೆ ಬಂದಾಗಿಲಿಂದ ದಲಿತ ಮಕ್ಕಳಿಗೆ ಜಾತಿಯತೆಯ ಬೀಜ ಬಿತ್ತುವುದಲ್ಲದೆ ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ. ಪಾಲಕರು ಪ್ರಶ್ನಿಸಿದರೆ ಉಡಾಪೆ ಮಾತುಗಳನ್ನಾಡುತ್ತಾರೆ ಎಂದು ಮದಿಹಳ್ಳಿ ಗ್ರಾಮದ ಗ್ರಾಮಸ್ಥರು ದಿಢಿರಣೆ ಪ್ರತಿಭಟನೆ ಮೂಲಕ ನಮಗೆ ಈ ಶಿಕ್ಷಕಿ ಬೇಡ ಎಂದು ಪಟ್ಟು ಹಿಡಿದಿದ್ದಾರೆ.
ಶಿಕ್ಷಕಿ ವಿರುದ್ದ ಸಿಡಿದ್ದೆದ್ದ ಪಾಲಕ ಮತ್ತು ದಲಿತ ಪರ ಸಂಘಟನೆಗಳು ಕೂಡಲೆ ಅನುಪಮಾ ಶಿಕ್ಷಕಿಯನ್ನು ಅಮಾನತು ಮಾಡಬೇಕು ಎಂದು ಘೋಷಣೆ ಮೂಲಕ ಪ್ರತಿಭಟಿಸಿದರು.
ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾವಣೆ ಆದೇಶ ಹೊರಡಿಸಿ ಪ್ರತಿಭಟನೆ ತಿಳಿಗೊಳಿಸಿದರು.