ಹುಬ್ಬಳ್ಳಿ ಧಾರವಾಡ
ಹುಬ್ಬಳ್ಳಿ ಧಾರವಾಡದಲ್ಲಿ ಅಕಾಲಿಕ ಮಳೆಯ ಅಬ್ಬರ ಜೋರಾಗಿದೆ. ಸಂಜೆ ಒಂದು ಘಂಟೆಗಳ ಕಾಲ ಗುಡುಗು ಸಿಡಿಲಿನೊಂದಿಗೆ ಸುರಿದ ಮಳೆಗೆ ಅವಳಿ ನಗರದ ಜನತೆ ಪರದಾಡಿದರು.

ಒಂದು ಘಂಟೆಗಳ ಕಾಲ ಸುರಿದ ಮಳೆ ಅಕ್ಷರಶಃ ಅವಳಿ ನಗರದಲ್ಲಿ ಜನರನ್ನು ಪರದಾಡುವಂತೆ ಮಾಡಿತು ಮಳೆರಾಯ
ಹುಬ್ಬಳ್ಳಿಯ ಹಲವೆಡೆ ಗಣೇಶ ಪೇಟೆ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತುಕೊಂಡು ಚಿತ್ರಣ ಕಂಡು ಬಂದಿತು.
ಇನ್ನೂ ಇತ್ತ ಧಾರವಾಡದಲ್ಲಿ ಅದೇ ರಾಗ ಅದೇ ಕಥೆ ಎಂಬಂತೆ ಧಾರವಾಡದ ಟೋಲ್ ನಾಕಾ ಬಳಿ ಸಾಕಷ್ಟು ಪ್ರಮಾಣದಲ್ಲಿ ಮತ್ತೆ ನೀರು ನಿಂತುಕೊಂಡು ಚಿತ್ರಣ ಕಂಡು ಬಂದಿತು.

ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ನದಿಯಂತೆ ಹರಿಯುವ ಚಿತ್ರಣ ಕಂಡು ಬಂದಿತು.ಟೋಲ್ ನಾಕದಲ್ಲಿ ರಸ್ತೆಯಲ್ಲಿ ವಾಹನಗಳು ತೇಲಿಕೊಂಡು ಹೋಗಿರುವ ಚಿತ್ರಣ ಕಂಡಿತು
ಒಂದು ಘಂಟೆಯಲ್ಲಿ ಸುರಿದ ಅಕಾಲಿಕ ಮಳೆ ಸಾಕಷ್ಟು ಪ್ರಮಾಣದಲ್ಲಿ ಅವಾಂತರ ಸೃಷ್ಟಿ ಮಾಡಿದ್ದು ಕಂಡು ಬಂದಿತು.
ಒಟ್ಟಾರೆ ಅಕಾಲಿಕ ಮಳೆ ಅವಳಿ ನಗರದ ಜನತೆಯ ಮೇಲೆ ಮತ್ತೆ ಸಾಕಷ್ಟು ಪ್ರಮಾಣದಲ್ಲಿ ನೆಮ್ಮದಿ ಹಾಳು ಮಾಡಿದ್ದು ಇಂದಿನ ಮಳೆಯಿಂದ ಜನರು ಪರದಾಡಿದ್ದು ಕಂಡು ಬಂದಿತು.