ಕಲಘಟಗಿ –
ಶಾಲಾ ಕಾಲೇಜು ವಿದ್ಯಾರ್ಥಿನಿಗಳನ್ನು ಚುಡಾಯಿಸು ತ್ತಿದ್ದರು ಎಂಬ ಒಂದು ಕಾರಣಕ್ಕಾಗಿ ಕಲಘಟಗಿ ಯಲ್ಲಿ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಮತ್ತು ಸಿಬ್ಬಂದಿ ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ತಮ್ಮ ಮಕ್ಕಳ ಮೇಲೆ ಇನ್ಸ್ಪೆಕ್ಟರ್ ಮತ್ತು ಟೀಮ್ ಹಲ್ಲೆ ಮಾಡಿ ದ್ದಾರೆ ಎಂದು ಆಕ್ರೋಶಗೊಂಡಿದ್ದಾರೆ.

ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಹುಡುಗರ ಪೋಷಕರು ಮತ್ತು ಸಂಬಂಧಿಕರು ಪೊಲೀಸ್ ಠಾಣೆಗೆ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಿದರು

ವಿನಾಕಾರಣ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಅಸಮಾಧಾನಗೊಂಡ ಸಾರ್ವಜನಿಕರು ಠಾಣೆ ಎದುರಿಗೆ ಪ್ರತಿಭಟನೆ ಮಾಡಿದರು

ಮನಬಂದಂತೆ ಹಲ್ಲೆ ಮಾಡಿರುವ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದು ಠಾಣೆಯ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಿದರು


ನೂರಾರು ಜನರು ಕಳೆದ ಒಂದು ಘಂಟೆಯಿಂದ ಪ್ರತಿಭಟನೆ ಮಾಡತಾ ಇದ್ದಾರೆ
ಕೂಡಲೇ ಹಲ್ಲೆ ಮಾಡಿರುವ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಯನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದ್ದಾರೆ ಇನ್ನೂ ಕೆಲವರು ದೂರು ನೀಡಲು ಮುಂದಾಗಿದ್ದು ಏನೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು