ಹೈದರಾಬಾದ್ –
ತೆಲುಗು ನಟರಾದ ಜೂನಿಯರ್ ಎನ್‌ಟಿಆರ್- ರಾಮ್ ಚರಣ್ ಅಭಿನಯದ ‘ಆರ್‌ಆರ್‌ಆರ್’ ಸಿನಿಮಾದ ಬಗ್ಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪ್ರಶ್ನೆಯೊಂದನ್ನು ಕೇಳ ಲಾಗಿದೆ.ಹೌದು ಇದೀಗ ಪ್ರಶ್ನೆ ಪತ್ರಿಕೆಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾ ನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ರಾಜಮೌಳಿ ನಿರ್ದೇಶ ನದ ‘ಆರ್‌ಆರ್‌ಆರ್’ ಸಿನಿಮಾ ಮಾರ್ಚ್ 24ರಂದು ವಿಶ್ವ ದಾದ್ಯಂತ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

₹1,100 ಕೋಟಿಗೂ ಹೆಚ್ಚು ಗಳಿಕೆ ಕಾಣುವ ಮೂಲಕ ಹಲವು ದಾಖಲೆಗಳನ್ನು ಬರೆದಿದೆ.ಚಿತ್ರ ಬಿಡುಗಡೆಯಾಗಿ 50 ದಿನ ಕಳೆದರೂ ಸಿನಿಮಾದ ಬಗ್ಗೆ ಇರುವ ಹವಾ ಮಾತ್ರ ಕಡಿಮೆಯಾಗಿಲ್ಲ.ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ‘ಆರ್‌ಆರ್‌ಆರ್’ ಸಿನಿಮಾ ಕುರಿತು ಪ್ರಶ್ನೆಯೊಂದನ್ನು ಕೇಳಲಾಗಿದೆ.ನೀವು ‘ಆರ್‌ಆರ್‌ಆರ್’ ಸಿನಿಮಾ ಹಾಗೂ ಕೋಮರಂ ಭೀಮ್ ಪಾತ್ರದಲ್ಲಿ ಎನ್‌ಟಿ ಆರ್ ಅವರ ಅಭಿನಯವನ್ನು ನೋಡಿದ್ದೀರಿ.ಚಿತ್ರದ ಯಶಸ್ಸಿನ ಬಳಿಕ ನಿಮಗೆ ಪ್ರತಿಷ್ಠಿತ ಟಿವಿ ವಾಹಿನಿಯಲ್ಲಿ ಎನ್‌ಟಿಆರ್ ಅವರನ್ನು ಸಂದರ್ಶನ ಮಾಡಲು ಅವಕಾಶ ಸಿಕ್ಕಿದೆ ಎಂದು ಊಹಿಸಿಕೊಳ್ಳಿ ಎಂದು ಪ್ರಶ್ನೆ ಕೇಳಲಾಗಿದೆ. ಚಿತ್ರದ ಸ್ವರೂಪ,ನಿರ್ದೇಶಕರೊಂದಿಗೆ ನಟನ ಬಾಂಧವ್ಯ, ಚಿತ್ರ ಕಥೆ,ಸಹ ನಟರ ಪಾತ್ರ,ಸಿನಿಮಾದ ಪ್ರಭಾವ ಈ ವಿಚಾ ರಗಳ ಆಧಾರದ ಮೇಲೆ ಎನ್‌ಟಿಆರ್ ಕುರಿತು ಸಂದರ್ಶನ ಬರೆಯಿರಿ ಎಂದು ಸೂಚಿಸಲಾಗಿದೆ.ಎನ್‌ಟಿಆರ್ ಅಭಿಮಾ ನಿಗಳು ಈ ಪ್ರಶ್ನೆಪತ್ರಿಕೆಯ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.