ಪಲ್ಟಿಯಾದ ಲಾರಿ ತಪ್ಪಿದ ದೊಡ್ಡ ಪ್ರಮಾಣದ ಅಪಘಾತ
ಧಾರವಾಡ-
ಎದುರಿಗೆ ಬಂದ ಬೈಕ್ ನ್ನು ತಪ್ಪಿಸಲು ಹೋಗಿ ಲಾರಿಯೊಂದು ಪಲ್ಟಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ.ಧಾರವಾಡದ ಹೊರವಲಯದ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಅಪಘಾತ ನಡೆದಿದೆ.

ಹೆದ್ದಾರಿಯ ರಾಜಸ್ಥಾನ ದಾಬಾ ಮುಂದಿನ ಯು ಟರ್ನ್ ನಲ್ಲಿ ಬೈಕ್ ವೇಗವಾಗಿ ಬಂದಿತು .ಅತ್ತ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಲಾರಿ ಇನ್ನೇನು ಬೈಕ್ ಸವಾರನಿಗೆ ಡಿಕ್ಕಿಯಾಗುತ್ತದೆ ಎನ್ನುವಷ್ಟರಲ್ಲಿ ಲಾರಿ ಚಾಲಕ ಅವನನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಲಾರಿ ಪಲ್ಟಿಯಾಗಿದೆ.

ಬಾಂಬೆಯಿಂದ ಬೆಂಗಳೂರಿಗೆ ಬಟ್ಟೆ ನೇಯ್ಗೆಗೆ ದಾರವನ್ನು ತುಂಬಿಕೊಂಡು ಲಾರಿ ಹೋಗುತ್ತಿತ್ತು.ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಚಾಲಕ ಮತ್ತು ಕ್ಲೀನರ್ ಗೆ ಸಣ್ಣ ಪುಟ್ಟ ಪ್ರಮಾಣದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಲಾರಿ ತಮಿಳುನಾಡು ರಾಜ್ಯದ್ದಾಗಿದ್ದು ಇತ್ತ ವಿಷಯ ತಿಳಿದ ಹೆದ್ದಾರಿ ಪೊಲೀಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಗರಗ ಪೊಲೀಸ್ ಠಾಣೆ ಪಿಎಸ್ಐ ಪ್ರಸಾದ್ ಪಣೀಕರ ಸ್ಥಳಕ್ಕೆ ಭೇಟಿಯ ನೀಡಿ ಪರಿಶೀಲನೆ ಮಾಡಿದರು.ಇತ್ತ ಸಂಜೆ ಐದು ಘಂಟೆಯಿಂದ ಸ್ಥಳದಲ್ಲೇ ಹೆದ್ದಾರಿ ಪೊಲೀಸ್ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ.ಸ್ಥಳದಲ್ಲಿಯೇ ಇರುವ ಹೆದ್ದಾರಿ ಪೊಲೀಸ್ ಅಧಿಕಾರಿಗಳಾದ ವಿಶಾಲ ಬಳ್ಳಾರಿ, ಎಸ್ ಎಸ್ ಗೋಲಂದಾಜ ಹಾಗೆ ಎಎಸ್ಐ ಎಸ್ ಸಿ ಗನಲಾಟಿ ರಾತ್ರಿಯಿಡಿ ಹೆದ್ದಾರಿ ಕಾಯುವ ಪರಿಸ್ಥಿತಿ ಎದುರಾಗಿದೆ.

ಹೆದ್ದಾರಿಯ ರಸ್ತೆ ಮಧ್ಯದಲ್ಲಿಯೇ ಲಾರಿ ಬಿದ್ದಿದೆ. ಬಿದ್ದಿರುವ ಲಾರಿಗೆ ಮತ್ತೊಂದು ಅಪಘಾತವಾಗಬಾರದೆಂಬ ಉದ್ದೇಶದಿಂದ ಮೈ ನಡಗುವ ಚಳಿಯಲ್ಲಿಯೇ ಹೆದ್ದಾರಿ ಪೊಲೀಸರು ಕಾಯುತ್ತಿದ್ದಾರೆ.ಬೆಳಿಗ್ಗೆ ಕ್ರೇನ್ ತರಿಸಿ ಮತ್ತೊಂದು ಲಾರಿಗೆ ಲಾರಿಯಲ್ಲಿನ ವಸ್ತುಗಳನ್ನು ಶಿಪ್ಟ್ ಮಾಡಲಿದ್ದಾರೆ.ಇತ್ತ ಗರಗ ಪೊಲೀಸ್ ಠಾಣೆಯಲ್ಲಿ ಬೈಕ್ ಸವಾರನ ಮೇಲೆ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.