ಪುಣೆ –
ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅಕ್ರಮ ಆರೋಪ ಕುರಿತು IAS ಅಧಿಕಾರಿಯೊಬ್ಬರನ್ನು ಬಂಧನ ಮಾಡಿ ವಶಕ್ಕೆ ತೆಗೆದು ಕೊಂಡು ವಿಚಾರಣೆ ಮಾಡುತ್ತಿರುವ ಘಟನೆ ಮಹಾರಾಷ್ಟ್ರ ದ ಪುಣೆಯಲ್ಲಿ ನಡೆದಿದೆ.ಹೌದು ಮಹಾರಾಷ್ಟ್ರದಲ್ಲಿ 2020 ನೇ ಸಾಲಿನ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಸುಶೀಲ್ ಖೋಡ್ ವೆಕರ್ ಅವರನ್ನು ಠಾಣೆ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿ ದ್ದಾರೆ.ಇದರೊಂದಿಗೆ ಬಂಧಿತರ ಸಂಖ್ಯೆ 13ಕ್ಕೆ ಏರಿದೆ. ಪೊಲೀಸರ ಪ್ರಕಾರ, ಟಿಟಿಟಿ-2020 ಪರೀಕ್ಷೆಯಲ್ಲಿ ಹಣ ಕ್ಕಾಗಿ ಸುಮಾರು 7,800 ಅಭ್ಯರ್ಥಿಗಳ ಅಂಕಗಳನ್ನು ತಿರುಚಲಾಗಿರುವ ಆರೋಪ ಕೇಳಿ ಬಂದಿದೆ

ಇದಕ್ಕೂ ಮೊದಲು ಮಹಾರಾಷ್ಟ್ರ ಪರೀಕ್ಷಾ ಮಂಡಳಿಯ ಆಯುಕ್ತ ತುಕಾರಾಂ ಸುಪೆ ಜಿಎ ಸಾಫ್ಟ್‌ವೇರ್ ಸಂಸ್ಥೆಯ ಪ್ರಿತೀಶ್ ದೇಶ್‌ಮುಖ್,ಶಿಕ್ಷಣ ಇಲಾಖೆಯ ಕನ್ಸಲ್ಟಂಟ್ ಅಭಿಷೇಕ್ ದೇಶ್‌ಮುಖ್ ಸೇರಿ 12 ಜನರನ್ನು ಬಂಧಿಸಲಾ ಗಿತ್ತು.ಅಲ್ಲದೆ, ₹ 4 ಕೋಟಿಗೂ ಅಧಿಕ ನಗದು, ಚಿನ್ನಾಭ ರಣ ಜಪ್ತಿ ಮಾಡಲಾಗಿದೆ.