ಹುಬ್ಬಳ್ಳಿ –
ಮಾಸ್ಕ್ ಸರಿಯಾಗಿ ಹಾಕಿಲ್ಲವೆಂದು ಕೇಳಿ ದಂಡ ಹಾಕಲು ಮುಂದಾದಾಗ ಯುವಕನೊಬ್ಬ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಳೇಹುಬ್ಬಳ್ಳಿ ಪ್ರದೇಶದ ಇಂಡಿಪಂಪ್ ಬಳಿ ಬೈಕಿನಲ್ಲಿ ಇಜಾಜ ದಿವಾನಲಿ ಎಂಬುವರು ಮನೆಯಿಂದ ಮಂಟೂರ ರಸ್ತೆ ಕಡೆಗೆ ಹೋಗುತ್ತಿದ್ದರು. ಇದನ್ನು ನೋಡಿದ ಹಳೇ ಹುಬ್ಬಳ್ಳಿಯ ಪೊಲೀಸರು ಬೈಕ್ ಸವಾರ ಇಜಾಜ್ ನನ್ನು ಹಿಡಿದು ಯಾಕೇ ಸರಿಯಾಗಿ ಮಾಸ್ಕ್ ಹಾಕಿಲ್ಲ ದಂಡ ತುಂಬಿ ಎಂದು ಹೇಳಿದ್ದಾರೆ. ಇಜಾಜ್ ಮತ್ತು ಪೊಲೀಸರ ನಡುವೆ ಮಾತಿನ ಚಕಮತಿ ಬೆಳೆದು ಕೊನೆಗೆ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾನೆ.ನಂತರ ಇಜಾಜ್ ದಿವಾನಲಿ ಅವನನ್ನು ಕೂಡಲೇ ಹಳೇ ಹುಬ್ಬಳ್ಳಿ ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಿಯೇ ಠಾಣೆ ಮುಂದೆ ಪೊಲೀಸರು ಜಮಾವಣೆಯಾಗಿದ್ದಾರೆ.
ವಿಷಯ ತಿಳಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನಸ್ಪೇಕ್ಟರ್ ಶಿವಾನಂದ ಕಮತಗಿ ಠಾಣೆಗೆ ಆಗಮಿಸಿ ಮಾಹಿತಿಯನ್ನು ಪಡೆದುಕೊಂಡರು. ನಂತರ ಮಾತುಕತೆ ಮಾಡಿ ಪರಸ್ಥಿತಿಯನ್ನು ತಿಳಿಗೊಳಿಸಿ ಕೊನೆಗೆ ಮಾಸ್ಕ್ ಹಾಕಿಕೊಳ್ಳದೇ ಪೊಲೀಸರ ವಿರುದ್ದ ಗಲಾಟೆ ಮಾಡಿಕೊಂಡಿದ್ದ ಇಜಾಜ್ ಗೆ 250 ರೂಪಾಯಿ ಮಾಸ್ಕ್ ದಂಡ ಹಾಕಿ ಕಳಿಸಿಕೊಟ್ಟರು.