ಮಧ್ಯಪ್ರದೇಶ –
ಮಧ್ಯಪ್ರದೇಶದ ಬೆತಲ್ ನಲ್ಲಿ ಶಿಕ್ಷಕನಿಂದ ಅತ್ಯಾಚಾರ ಕ್ಕೊಳಗಾದ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು ಅಕ್ರಮವಾಗಿ ಗರ್ಭಪಾತ ಮಾಡಿಸಲಾಗಿದೆ.ಇನ್ನೂ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯೆ ಸೇರಿ ನಾಲ್ವರು ಪೊಲೀಸರು ಬಂಧಿಸಿದ್ದಾರೆ.ಕಳೆದ ವರ್ಷ ಅಕ್ಟೋಬರ್ 16 ರಂದು ಕೋಚಿಂಗ್ ಸೆಂಟರ್ ನ ನಿರ್ವಾಹಕ ಪ್ರಕಾಶ್ ಭೋಜ್ಕರ್ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ವಿದ್ಯಾರ್ಥಿನಿಗೆ ಆರೋಪಿ ಜೀವ ಬೆದರಿಕೆ ಹಾಕಿದ್ದರಿಂದ ಹೆದರಿದ ಹುಡುಗಿ ಯಾವುದೇ ದೂರು ದಾಖಲಿಸಲಿಲ್ಲ. ಯಾರಿಗೂ ವಿಷಯ ತಿಳಿಸಲಿಲ್ಲ.
ಇನ್ನೂ ಆಕೆ ಗರ್ಭಿಣಿಯಾದ ನಂತರದಲ್ಲಿ ಆರೋಪಿಯ ಪೋಷಕರು ಆಕೆಯನ್ನು ಬೇತಲ್ ನ ಕರುಣಾ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು.ಮಾರ್ಚ್ 22 ರಂದು ಗರ್ಭಪಾತ ಮಾಡಲಾಗಿದೆ.ಪೊಲೀಸರಿಗೆ ವಿಷಯ ತಿಳಿಸಿದ ನಂತರ ಆರೋಪಿ ಮತ್ತು ಗರ್ಭಪಾತ ಮಾಡಿದ ವೈದ್ಯರ ವಿರುದ್ಧ ಆಮ್ಲಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 376 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಹಾಗೂ ಆತನ ಪೋಷಕರಿಬ್ಬರನ್ನೂ ಮೊದಲೇ ಬಂಧಿಸಿದ್ದರು.ಈಗ ಆಸ್ಪತ್ರೆಯ ಮಹಿಳಾ ವೈದ್ಯೆ ವಂದನಾ ಕಾಪ್ಸೆ ಅವರನ್ನೂ ಭ್ರೂಣ ಹತ್ಯೆಯ ಸೆಕ್ಷನ್ 315 ರ ಅಡಿಯಲ್ಲಿ ಬಂಧಿಸಲಾಗಿದೆ.