ಧಾರವಾಡ –
ಹುಬ್ಬಳ್ಳಿಯ ನವನಗರದಲ್ಲಿನ ವಕೀಲರು ಮತ್ತು ಪೊಲೀಸರ ನಡುವಿನ ತಿಕ್ಕಾಟ ಯಾಕೋ ಮುಗಿಯುಂತಹ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ಈ ಒಂದು ಪ್ರಕಣದಲ್ಲಿ ನವನಗರ ಪೊಲೀಸ್ ಠಾಣೆ ಇನಸ್ಪೇಕ್ಟರ್ ಪ್ರಭು ಸೂರಿನ್ ರನ್ನು ವರ್ಗಾವಣೆ ಮಾಡಿ ವಕೀಲ ವಿನೋದ ಪಾಟೀಲರ ಕೈಗೆ ಬೇಡಿ ಹಾಕಿದ ಪೊಲೀಸ್ ಪೇದೆಯೊಬ್ಬರನ್ನು ಅಮಾನತು ಮಾಡಲಾಗಿದೆ. ಇಷ್ಟೇಲ್ಲ ಬೆಳವಣಿಗೆ ನಡೆದರು ಕೂಡಾ ವಕೀಲರಿಗೆ ಸಮಾಧಾನವಾಗಿಲ್ಲ.ಇನಸ್ಪೇಕ್ಟರ್ ಪ್ರಭು ಸೂರಿನ್ ಮೇಲೆ ಕೂಡಲೇ ಪ್ರಕರಣ ದಾಖಲು ಮಾಡಬೇಕು ಬಂಧನ ಮಾಡಿ ವಿಚಾರಣೆ ಮಾಡಬೇಕೆಂದು ಪಟ್ಟು ಹಿಡಿದಿರುವ ಹುಬ್ಬಳ್ಳಿ ಧಾರವಾಡ ನ್ಯಾಯವಾದಿಗಳು ಇಂದು ಪೈನಲ್ ಸಭೆ ಮಾಡಲಿದ್ದಾರೆ.
ಈಗಾಗಲೇ ಈ ಒಂದು ವಿಚಾರು ಕುರಿತಂತೆ ಸಭೆಯ ಮೇಲೆ ಸಭೆ ಮಾಡಿ ಇಂದು ಮಧ್ಯಾಹ್ನ 2 ಘಂಟೆಯವರೆಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಡೇಡ್ ಲೈನ್ ನೀಡಿದ್ದರು.ಈವರೆಗೆ ಯಾವುದೇ ಸೂಚನೆ ಮಾಹಿತಿಗಳು ಬಾರದ ಹಿನ್ನಲೆಯಲ್ಲಿ ಈಗಾಗಲೇ ನಿನ್ನೇ ಮಾತನಾಡಿದಂತೆ ಇಂದು ಧಾರವಾಡ ಜಿಲ್ಲೆಯ ಎಲ್ಲಾ ತಾಲ್ಲೂಕು ಗಳ ನ್ಯಾಯವಾದಿಗಳ ಅಧ್ಯಕ್ಷರೊಂದಿಗೆ ಸಭೆ ಮಾಡಲಿದ್ದಾರೆ. ಧಾರವಾಡ ಜಿಲ್ಲೆಯ ವಕೀಲರ ಸಂಘದ ಅಧ್ಯಕ್ಷರು ಹುಬ್ಬಳ್ಳಿ ಧಾರವಾಡ ಸೇರಿದಂದೆ ಜಿಲ್ಲೆಯ ನ್ಯಾಯವಾದಿಗಳೊಂದಿಗೆ ಸಂಘದ ಕಚೇರಿಯಲ್ಲಿ ಸಭೆ ಮಾಡಲಿದ್ದಾರೆ. ವಕೀಲ ವಿನೋದ ಪಾಟೀಲ ಕೈಗೆ ಬೇಡಿ ಹಾಕಿ ಅಮಾನುಷವಾಗಿ ನಡೆದುಕೊಂಡ ಪೊಲೀಸ್ ಇನಸ್ಪೇಕ್ಟರ್ ಪ್ರಭು ಸೂರಿನ್ ಮೇಲೆ ಕೂಡಲೇ ಪ್ರಕರಣ ದಾಖಲಿಸಬೇಕು ಬಂಧನ ಮಾಡಿ ವಿಚಾರಣಗೆ ಮಾಡಬೇಕು ಹಾಗೇ ಇವರೊಂದಿಗೆ ಅನುಚಿತವಾಗಿ ನಡೆದುಕೊಂಡ ಪೊಲೀಸ್ ಸಿಬ್ಬಂದಿಗಳ ಮೇಲೂ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ಅವರ ಮೇಲೂ ವಿಚಾರಣೆ ಮಾಡುವಂತೆ ನ್ಯಾಯವಾದಿಗಳು ಪಟ್ಟು ಹಿಡಿದಿದ್ದಾರೆ.ಆದರೆ ಇವೆಲ್ಲವುಗಳ ಬೇಡಿಕೆಗೆ ಪಟ್ಟು ಹಿಡಿದಿರುವ ವಕೀಲರ ನಿರ್ಧಾರದಿಂದ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದಾರಿ ಕಾಣದಂತಾಗಿದೆಯಂತೆ. ಹೇಗಾದರೂ ಮಾಡಿ ಈ ಒಂದು ಪ್ರಕರಣವನ್ನು ರಾಜೀ ಸಂಧಾನ ಮಾಡಿ ಮುಗಿಸಬೇಕೆಂದು ಪೊಲೀಸ್ ಹಿರಿಯ ಅಧಿಕಾರಿಗಳು ತೆರೆ ಮರೆಯಲ್ಲಿ ಏನೇಲ್ಲಾ ಕಸರತ್ತನ್ನು ಮಾಡಿದರೂ ಸಾಧ್ಯವಾಗುತ್ತಿಲ್ಲ.ಇವೆಲ್ಲದರ ನಡುವೆ 2 ಘಂಟೆಯವರೆಗೆ ಗಡುವು ನೀಡಿರುವ ವಕೀಲರು ಮತ್ತೇ ಸಭೆ ಮಾಡಿ ಮುಂದಿನ ಹೋರಾಟದ ಪ್ಲಾನ್ ಮಾಡಲಿದ್ದು ಇತ್ತ ಈ ಒಂದು ನಿರ್ಧಾರದಿಂದ ಪೊಲೀಸ್ ಹಿರಿಯ ಅಧಿಕಾರಿಗಳು ದಾರಿ ಕಾಣದಂತಾಗಿದೆ ಎಂದುಕೊಂಡು ಕೈಕಟ್ಟಿ ಕುಳಿತಿದ್ದಾರೆ.