ಬೆಂಗಳೂರು –
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.ಬೆಳ್ಳಂಬೆಳಗ್ಗೆ ರೌಡಿಗಳ ನಿವಾಸದ ಮೇಲೆ ದಾಳಿ ಮಾಡಿದ ಪೊಲೀಸರು ಅಪಾರ ಪ್ರಮಾಣದ ಹಣ ಮಾರ ಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಮತ್ತು ಅಡ್ಡೆಗಳ ಮೇಲೆ ಸಿಸಿಬಿ ದಾಳಿ ನಡೆಸಿ ಅವರನ್ನು ನಿದ್ದೆಗೆಡಿಸಿ ಹೆಡೆಮುರಿಕಟ್ಟಿದ್ದಾರೆ.ರೌಡಿ ಜೋಸೆಫ್ ಅಲಿಯಾಸ್ ಬಬ್ಲಿ ಹತ್ಯೆ ಹಿಂದೆ ರೌಡಿಗಳ ದೊಡ್ಡ ಗ್ಯಾಂಗ್ ಇರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.ಈ ಹಿನ್ನೆಲೆಯಲ್ಲಿ ಪ್ರಕರಣ ಹೆಚ್ಚಿನ ತನಿಖೆ ಯನ್ನು ಸಿಸಿಬಿ ರೌಡಿ ಸ್ಕ್ವಾಡ್ ಗೆ ವಹಿಸಲಾಗಿದೆ.

ಸಿಸಿಬಿ ಅಧಿಕಾರಿ ಕುಖ್ಯಾತ ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗಾ, ಸೈಕಲ್ ರವಿ, ಸೈಲೆಂಟ್ ಸುನೀಲಾ ಮತ್ತು ಜೆ.ಸಿ.ಬಿ ನಾರಾಯಣ ಮತ್ತು ಸಹಚರರು ಸೇರಿದಂತೆ 45 ಮನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ಇತ್ತೀಚೆಗೆ ರೌಡಿ ಬಬ್ಲಿ ಬ್ಯಾಂಕ್ ಗೆ ಪತ್ನಿ, ಮಗು ಜೊತೆಗೆ ಬಂದಾಗ ರೌಡಿ ಗ್ಯಾಂಗ್ ದಾಳಿ ಮಾಡಿತ್ತು. ಪತ್ನಿ, ಮಗು ಮತ್ತು ಬ್ಯಾಂಕ್ ಗ್ರಾಹಕರು ಬೆಚ್ಚಿ ಬಿದ್ದಿದರು. ಕೃತ್ಯದ ಬಳಿದ ಹಂತಕರು ರಸ್ತೆಯಲ್ಲಿ ಲಾಂಗ್ ಮಚ್ಚು ಬೀಸಿ ಸಂಭ್ರಮಿಸಿದ್ದರು.

ಈ ವಿಡಿಯೋ ವೈರಲ್ ಆಗಿತ್ತು ಇದೆಲ್ಲದರ ನಡುವೆ ಈಗ ಸಿಸಿಬಿ ಪೊಲೀಸರು ರೌಡಿಗಳ ಮನೆಯ ಮೇಲೆ ದಾಳಿ ಮಾಡಿ ಶಾಕ್ ನೀಡಿದ್ದಾರೆ.