ಬೆಂಗಳೂರು –
ಎರಡು ಬಾರಿ ತಪ್ಪಿಸಿಕೊಂಡು ಮೂರನೇ ಬಾರಿಗೆ ಬಂಧನವಾದ ಪೊಲೀಸಪ್ಪ – ಇಲಾಖೆಯ ಗೌರವವನ್ನು ಹಾಳು ಮಾಡಿದ ಪೊಲೀಸಪ್ಪ ಮಾಡಿದ ಕೆಲಸ ನೋಡಿದ್ರೆ ನೀವು ಛೀ ಥೂ ಅಂತಿರಾ…..
ಸಾಮಾನ್ಯವಾಗಿ ಪೊಲೀಸರು ಎಂದರೆ ಸಮಾಜದಲ್ಲಿ ದೊಡ್ಡದಾದ ಗೌರವ ಮರ್ಯಾದೆ ಇದೆ ಹೀಗಿರುವಾಗ ಇಲ್ಲೊಬ್ಬ ಪೊಲೀಸಪ್ಪ ಮಾಡಬಾರದ ಕೆಲಸ ಮಾಡಿ ಜೈಲು ಸೇರಿದ್ದಾನೆ ಅಲ್ಲದೇ ತಾನು ಮಾಡಿದ ಕೆಟ್ಟ ಕೆಲಸಕ್ಕೆ ಇಲಾಖೆಯ ಗೌರವವನ್ನು ಹಾಳು ಮಾಡಿದ್ದಾನೆ.
ಹೌದು ಎರಡು ಬಾರಿ ಸಿಕ್ಕಾಕೊಂಡು ಸಸ್ಪೆಂಡ್ ಆದ್ರೂ ಮತ್ತೆ ತನ್ನ ಕಳ್ಳ ಬುದ್ದಿಯನ್ನು ಬಿಡದ ಪೊಲೀಸ್ ಮಹಾಶಯನೊಬ್ಬ ಮೂರನೇ ಬಾರಿಗೆ ಈಗ ಮತ್ತೆ ಅರೆಸ್ಟ್ ಆಗಿದ್ದಾನೆ.ಯಲ್ಲಪ್ಪ ಎಂಬ ಈ ವ್ಯಕ್ತಿ ದರೋಡೆಕಾರರೊಂದಿಗೆ ಸೇರಿ ಬೆಂಗಳೂರಿನ ಹಲವೆಡೆ ಮನೆಗಳ್ಳತನವನ್ನು ಮಾಡಿದ್ದಾನೆ. ಚಂದ್ರಾಲೇಔಟ್, ಚಿಕ್ಕ ಜಾಲ, ಬನಶಂಕರಿ,ಸೇರಿದಂತೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಳ್ಳತನ ಕೇಸ್‌ಗಳಲ್ಲಿ ಭಾಗಿಯಾಗಿದ್ದಾನೆ
ಈತ ಸ್ವತಃ ಬನಶಂಕರಿಯ ಕ್ರೈಂ ವಿಭಾಗದ ಕಾನ್ಸ್ ಟೆಬಲ್ ಆಗಿದ್ದ ಅನ್ನೋದೆ ದುರಾದೃಷ್ಟಕರ ವಿಚಾರ ಆದ್ರೆ ಈ ಬಾರಿ ಜ್ಞಾನಭಾರತಿ ಪೊಲೀಸರ ಕೈಗೆ ಸರಿಯಾಗಿ ಲಾಕ್ ಆಗಿದ್ದಾನೆ. ಶಾಂತಿ, ಸುವ್ಯವಸ್ಥೆ ಕಾಪಾಡಿ ಅಪರಾಧ ತಡಿಬೇಕಾಗಿರೋ ಪೊಲೀಸರೆ ಹೀಗ್ ಮಾಡಿದ್ರೆ ಏನ್ಮಾಡೋದು ಸ್ವಾಮಿ ಎಂಬ ಮಾತುಗಳನ್ನು ಈ ಒಂದು ಘಟನೆ ಯನ್ನು ನೋಡಿದ ರಾಜ್ಯದ ಜನತೆ ಈಗ ಮಾತ ನಾಡಿಕೊಳ್ಳುವಂತಾಗಿದ್ದು ಇಂತವರಿಂದಲೇ ಡಿಪಾರ್ಟ್‌ಮೆಂಟ್‌ಗೂ ಕೂಡಾ ಒಂದು ಕೆಟ್ಟ ಹೆಸರು ಎಂಬಂತಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..