ಹುಬ್ಬಳ್ಳಿ –
ಮತಾಂತರ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ ತಾತ್ಕಾಲಿಕ ಸುಖಾಂತ್ಯವಾಗಿದೆ.ಹೌದು ನಿನ್ನೆ ತಡರಾತ್ರಿ ವರೆಗೂ ಹುಬ್ಬಳ್ಳಿಯ ನವನಗರದಲ್ಲಿ ಈ ಒಂದು ಹೋರಾಟ ನಡೆದಿತ್ತು. ಸಿಡಿದೆದ್ದ ಶಾಸಕ ಅರವಿಂದ ಬೆಲ್ಲದ ಹಿಂದೂ ಸಂಘಟನೆಗಳೊಂದಿಗೆ ಹೋರಾಟ ಮಾಡಿ ಸೂಕ್ತ ಕ್ರಮಕ್ಕೆ ಒತ್ತಾಯವನ್ನು ಮಾಡಿದ್ದರು.ಇನ್ನೂ ಇದೇ ವೇಳೆ ಶಾಸಕ ಅರವಿಂದ ಬೆಲ್ಲದ ಮಾತನಾಡಿ ಈಗಾಗಲೇ ದೂರು ನೀಡಿದ್ದರೂ ಅರೆಸ್ಟ್ ಮಾಡದ ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.ಅರೆಸ್ಟ್ ಮಾಡದಿದ್ದರೆ ಪ್ರತಿಭಟನೆ ಕೈಬಿಡಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದರು ಶಾಸಕ ಅಧಿಕಾರಿಗಳು ಕಾನೂನು ಬದ್ಧವಾಗಿ ಕೆಲಸ ಮಾಡಲಿ ಅವರಿಗೆ ಯಾವುದೇ ಜಾತಿ ಇರಲ್ಲ ಎನ್ನುತ್ತಾ ಡಿಸಿಪಿ ಮತಾಂತರಿ ಇರಬಹುದು ಆದರೆ ಮತಾಂತರಿ ಗಳನ್ನು ಬೆಂಬಲಿಸಬಾರದು ಎಂದು ಎಚ್ಚರಿಕೆ ನೀಡಿ ಪೊಲೀಸ್ ಅಧಿಕಾರಿಗಳು ಹಾಗೂ ಡಿಸಿಪಿ ವಿರುದ್ಧ ಹರಿಹಾಯ್ದದ್ದರು ಶಾಸಕ ಅರವಿಂದ ಬೆಲ್ಲದ್
ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ಎದುರು ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಕೆಲವೊತ್ತು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಯಿತು ಹಿಂದೂ ಕಾರ್ಯ ಕರ್ತರು ಅಧಿಕಾರಿ ಕ್ರೈಸ್ತ ಧರ್ಮದವರಿರಬಹುದು. ಅದನ್ನ ಅವರ ಮನೆಯಲ್ಲಿ ಪಾಲನೆ ಮಾಡಲಿ ಕೆಲಸದಲ್ಲಿ ಧರ್ಮದ ಪಾಲನೆ ಮಾಡಬಾರದು ಎಂದು ಪೊಲೀಸ್ ಅಧಿಕಾರಿಗಳಿ ಗೆ ಖಡಕ್ ಎಚ್ಚರಿಕೆ ನೀಡಿದ್ದರು ಶಾಸಕ ಅರವಿಂದ ಬೆಲ್ಲದ್
ಹಿಂದೂ ಸಂಘಟನೆಗಳ ಈ ಒಂದು ಪ್ರತಿಭಟನೆ ತಾತ್ಕಾಲಿಕ ಸುಖಾಂತ್ಯವಾಗಿದೆ.ಪ್ರಕರಣದ ಕುರಿತು ಸುಧೀರ್ಘ ಚರ್ಚೆ ಮಾಡಿದ ಶಾಸಕ ಅರವಿಂದ ಬೆಲ್ಲದ್ ಹಾಗೂ ಹು-ಧಾ ಪೊಲೀಸ್ ಆಯುಕ್ತ ಲಾಭುರಾಂ.ನಂತರ ಶಾಸಕ ಅರವಿಂದ ಬೆಲ್ಲದ ಮಾತನಾಡಿ ಪ್ರಕರಣದ ಕುರಿತಂತೆ ಈಗಾಗಲೇ ಪೊಲೀಸ್ ಆಯುಕ್ತರು ಬಂಧನದ ಭರವಸೆ ನೀಡಿದ್ದಾರೆ ಹೀಗಾಗಿ ಈ ಒಂದು ಹೋರಾಟವನ್ನು ಹಿಂದೆ ತಗೆದುಕೊಳ್ಳಲಾಗಿದೆ ಎಂದರು.
ಹೀಗಾಗಿ ಸಧ್ಯ ಅವರ ಭರವಸೆಯಂತೆಯೇ ನಾವು ಪ್ರತಿಭ ಟನೆಯನ್ನ ಕೈಬಿಡುತ್ತಿದ್ದೇವೆ.ಈ ಪ್ರಕರಣದ ಕುರಿತಂತೆ ರಾಜ್ಯದ ನಾಯಕರ ಗಮನಕ್ಕೂ ತಂದಿದ್ದೇವೆ ಎಂದರು.
ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದಾಗಲೂ ಒಬ್ಬ ಮತಾಂಧ ಆರೋಪಿಯನ್ನ ಬಂಧಿಸು ವಂತೆ ಹೋರಾಟ ಮಾಡುವ ಪರಿಸ್ಥಿತಿ ಬಂದಿದ್ದು ನಮ್ಮ ದೌರ್ಭಾಗ್ಯ ಎಂದರು.
ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ವ್ಯವಸ್ಥೆ ಯ ವಿರುದ್ಧ ಅಸಮಾಧಾನವನ್ನು ಶಾಸಕರು ಮತ್ತು ಹಿಂದೂ ಪರ ಸಂಘಟನೆಯ ನಾಯಕರು ವ್ಯಕ್ತಪಡಿಸಿದರು