ನವದೆಹಲಿ –
ಈಗಾಗಲೇ ಅಂತಿಮವಾಗಿದ್ದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹೆಸರನ್ನು ಇಂದು ಮರುನಾಮಕರಣ ಮಾಡಲಾಯಿತು. ಕೇಂದ್ರ ಸರ್ಕಾರ ಹುಬ್ಬಳ್ಳಿಯ ರೈಲ್ವೆ ನಿಲ್ದಾಣವನ್ನು ಇಂದಿನಿಂದ ಶ್ರೀ ಸಿದ್ದಾರೂಢ ಸ್ವಾಮಿಜಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಿ ಆದೇಶವನ್ನು ಹೊರಡಿಸಿತು.ಇದನ್ನು ಸ್ವತಃ ಕೇಂದ್ರ ಸಚಿವ ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿಯ ರೇಲ್ವೆ ನಿಲ್ದಾಣಕ್ಕೆ ನಮ್ಮೆಲ್ಲರ ಆರಾಧ್ಯ ದೈವ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಜಿ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಿದ್ದಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಕೇಂದ್ರ ಸರ್ಕಾರದ ರೈಲ್ವೆ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ರೈಲ್ವೆ ಇಲಾಖೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಕೇಂದ್ರ ಸಚಿವ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿಯ ರೇಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ರೇಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವಲ್ಲಿ ಕೇಂದ್ರದ ರೇಲ್ವೆ ರಾಜ್ಯ ಸಚಿವರಾಗಿದ್ದ ದಿವಂಗತ ಶ್ರೀ ಸುರೇಶ್ ಅಂಗಡಿ ಅವರ ಪಾತ್ರವು ಮಹತ್ವದಾಗಿದೆ. ಅವರನ್ನು ಈ ಸಂದರ್ಭದಲ್ಲಿ ಕೃತಜ್ಞೆತೆಯಿಂದ ಸ್ಮರಿಸುತ್ತೇನೆ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಸಚಿವ ಜಗದೀಶ್ ಶೆಟ್ಟರ್ ಧಾರವಾಡ ಜಿಲ್ಲೆಯ ಬಿಜೆಪಿಯ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ,ಅರವಿಂದ ಬೆಲ್ಲದ ,ಅಮೃತ ದೇಸಾಯಿ, ಸಿ ಎಮ್ ನಿಂಬಣ್ಣನವರ ,ಸೇರಿದಂತೆ ಎಲ್ಲಾ ಮುಖಂಡರು ಯುವ ಘಟಕದ ಮುಖಂಡರಾದ ಶಕ್ತಿ ಹಿರೇಮಠ ಕಿರಣ ಉಪ್ಪಾರ ಸೇರಿದಂತೆ ಎಲ್ಲರೂ ಕೂಡಾ ಕೇಂದ್ರ ಸರ್ಕಾರಕ್ಕೇ ತುಂಬು ಹೃದಯದ ಧನ್ಯವಾದಗಳೊಂದಿಗೆ ಅಭಿನಂದನೆಗಳನ್ನು ಹೇಳಿದ್ದಾರೆ.
