ಧಾರವಾಡ –
ಕುಡಿದ ಮತ್ತಿನಲ್ಲಿ ಯುವಕನೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಕಮಲಾಪುರದಲ್ಲಿ ಈ ಒಂದು ಘಟನೆ ನಡೆದಿದೆ.28 ವರುಷದ ಪ್ರವೀಣ ದುಬೆ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.

ಎಲ್ಲರೊಂದಿಗೆ ನಿನ್ನೆ ರಾತ್ರಿ ಚನ್ನಾಗಿ ಮಾತನಾಡಿಕೊಂಡು ಊಟ ಮಾಡಿದ ನಂತರ ಎಲ್ಲರೂ ಮಲಗಿದ ಮೇಲೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಡಿದ ಅಮಲಿನಲ್ಲಿ ಹೀಗೆ ಮಾಡಿಕೊಂಡಿದ್ದಾನಂತೆ.ಇನ್ನೂ ಆತ್ಮಹತ್ಯೆಗೆ ಶರಣಾದ ಇವನ ಬಳಿ ಹುಬ್ಬಳ್ಳಿ ಧಾರವಾಡ ಗಣ್ಯರು ಪೊನ್ ನಂಬರ್ ಗಳ ಎರಡು ಹಾಳೆಗಳು ಪತ್ತೆಯಾಗಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಇನ್ನೂ ವಿಷಯ ತಿಳಿದ ಧಾರವಾಡದ ಉಪನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು. ಸಧ್ಯ ಪ್ರಕರಣ ದಾಖಲು ಮಾಡಿಕೊಂಡಿರು ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

ಒಟ್ಟಾರೆ ಪ್ರವೀಣ್ ದುಬೆ ಯಾತಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಎಂಬ ಕುರಿತು ನಿಖರವಾದ ಕಾರಣವನ್ನು ಉಪನಗರ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.