ಬೆಂಗಳೂರು –
ವರ್ಗಾವಣೆಯ ವಿಚಾರ ದಲ್ಲಿ ರಾಜ್ಯದ ಶಿಕ್ಷಕರು ಸಂಘಟನೆಯ ನಾಯಕರಿಗೆ ಒಂದು ವಿನಂತಿ ಮಾಡಿಕೊಂಡಿದ್ದಾರೆ ಹೌದು
ಸರ್ ದಯವಿಟ್ಟು ಶಿಕ್ಷಣ ಸಚಿವರಾದ ನಾಗೇಶ್ ರವರ ಗಮನಕ್ಕೆ ತಂದು ತುರ್ತಾಗಿ ಈ ಬಾರಿಯ ಅಧಿವೇಶನದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ನಿಯಮದಲ್ಲಿ ಈ ಒಂದು ತಿದ್ದುಪಡಿ ಮಾಡಿಸಿ ಅನುಕೂಲ ಮಾಡಿಕೊಡಿ
ಪ್ರೌಢಶಾಲಾ ಶಿಕ್ಷಕರಿಗೆ ಪತಿ ಅಥವಾ ಪತ್ನಿ ಕಾರ್ಯನಿರ್ವ ಹಿಸುವ ಆ ತಾಲೂಕಿನಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲದಿದ್ದರೆ ಜಿಲ್ಲೆಯಲ್ಲಿ ಖಾಲಿ ಇರುವ ಯಾವುದಾದರೂ ತಾಲ್ಲೂಕನ್ನು ನೀಡುವಂತೆ ಶಾಸಕರಿಗೆ,ಸಚಿವರಿಗೆ ಹಾಗೂ ಆಯುಕ್ತರ ಗಮನ ಸೆಳೆದು ಮಾಡಿಕೊಡಿ ಎಂದು ಬಹಳಷ್ಟು ಬಾರಿ ವಿನಂತಿ ಮಾಡಿಕೊಂಡರು ವರ್ಗಾವಣೆಯ ಕೌನ್ಸಲಿಂಗ್ ಮುಗಿದ ನಂತರ ಪೇಪರ್ ಸ್ಟೇಟ್ ಮೆಂಟ್ ನೀಡಿದ ನಂತರ ದಯವಿಟ್ಟು ಒಮ್ಮೆಯೂ ವರ್ಗಾವಣೆ ಸಿಗದ ಪತಿ-ಪತ್ನಿ ಸರ್ಕಾರಿ ನೌಕರರಾಗಿರುವ ದಂಪತಿ ಪ್ರಕರಣದ ಶಿಕ್ಷಕರ ಸಂಸಾರ ಕಾಪಾಡಿ.ಒಂದು ವೇಳೆ ಪತಿ ಅಥವಾ ಪತ್ನಿ ಯಾರಾದರೂ ಒಬ್ಬರು ಸರಕಾರಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಕುಟುಂಬವನ್ನೇ ಅಲ್ಲಿಗೆ ವರ್ಗಾಯಿಸಿ ಕೊಳ್ಳಬಹುದು ಆದರೆ ಇಬ್ಬರೂ ಸರ್ಕಾರಿ ನೌಕರರಾಗಿರುವ ಪ್ರಕರಣದ ಶಿಕ್ಷಕರಿಗೆ ಒಮ್ಮೆಯೂ ವರ್ಗಾವಣೆ ಸಿಗದವ ರನ್ನು ಇಲಾಖೆಯ EEDS Software ನಲ್ಲಿ ಮಾಹಿತಿ ಸಂಗ್ರಹಿಸಿ ಅನುಕೂಲವಾಗುವಂತ ಶಿಕ್ಷಣ ಸಚಿವರಿಂದ ಇಲಾಖೆಗೆ ನಿರ್ದೇಶನ ಮಾಡುವಂತೆ
ಪ್ರೌಢಶಾಲೆಗಳು ಒಂದು ತಾಲೂಕಿನಲ್ಲಿ ಕನಿಷ್ಠ 15 ರಿಂದ ಗರಿಷ್ಠ 30 ಸರ್ಕಾರಿ ಪ್ರೌಢಶಾಲೆಗಳು ಇರುವುದೇ ಹೆಚ್ಚು ಇಂತಹ ಸಂದರ್ಭದಲ್ಲಿ . ಈ ಮೊದಲೇ ಜಿಲ್ಲೆಯೊಳಗೆ
ಹೆಚ್ಚುವರಿ ಶಿಕ್ಷಕರ ಹಂಚಿಕೆ ಅವಧಿ ಮುಗಿದ BRP, ECO ರವರಿಗೆ ಸ್ಥಳ ಹಂಚಿಕೆ,ನಂತರ ಶೇಕಡಾ 7ರಷ್ಟು ಕೋರಿಕೆ ವರ್ಗಾವಣೆ ಮಾಡಿದಾಗ ಜಿಲ್ಲೆಯಲ್ಲಿ ಪತಿ ಅಥವಾ ಪತ್ನಿ ಕಾರ್ಯನಿರ್ವಹಿಸುವ ತಾಲೂಕಿನಲ್ಲಿ ಖಾಲಿ ಹುದ್ದೆ ಭರ್ತಿ ಯಾಗಿ ವರ್ಗಾವಣೆ ತೀರ ಅನಿವಾರ್ಯವಾಗಿರುವ ವಿಭಾಗ ದಿಂದ ಹೊರಗಿರುವ ಈ ಪ್ರಕರಣದ ಶಿಕ್ಷಕರಿಗೆ ತದನಂತರ ದಲ್ಲಿ ಕೌನ್ಸ್ ಲಿಂಗ್ ಮಾಡುವುದರಿಂದ ಅನಾನುಕೂಲವಾ ಗುತ್ತದೆ ಎಂಬ ವಾಸ್ತವ ಅಂಶವನ್ನು ಮನವರಿಕೆ ಮಾಡಿಕೊ ಟ್ಟರು ಯಾವುದೇ ಪ್ರಯೋಜನವಾಗಿಲ್ಲ
ಈಗಾಗಲೇ ಕೆಎಟಿ ನಿರ್ದೇಶನದಂತೆ ಪತಿ ಅಥವಾ ಪತ್ನಿ ಕಾರ್ಯನಿರ್ವಹಿಸುವ ತಾಲೂಕಿನಲ್ಲಿ ಖಾಲಿ ಹುದ್ದೆ ಲಭ್ಯವಿಲ್ಲದಿದ್ದರೆ ಅಕ್ಕಪಕ್ಕದ ತಾಲೂಕಿನಲ್ಲಿ ವರ್ಗಾವಣೆಗೆ ಅವಕಾಶ ನೀಡುವುದು ಎಂದು ಆದೇಶವಾಗಿದೆ.
ಎಲ್ಲ ಶಿಕ್ಷಕರು ನ್ಯಾಯಾಲಕ್ಕೆ ಹೋಗುವಷ್ಟು ಆರ್ಥಿಕವಾಗಿ ಸಮರ್ಥರಾಗಿರುವುದಿಲ್ಲ ಆದ್ದರಿಂದ ದಯವಿಟ್ಟು ಈ ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸಿ ವರ್ಗಾವಣೆಯಲ್ಲಿ ಅರ್ಜಿ ಸಲ್ಲಿಸಿ ಪತಿ-ಪತ್ನಿ ಪ್ರಕರಣ ಶಿಕ್ಷಕರಿಗೆ ವರ್ಗಾವಣೆ ಸಿಗದ ವಂಚಿತ ದಂಪತಿ ಪ್ರಕರಣದ ಅವರಿಗೆ ಮತ್ತೊಮ್ಮೆ ಜಿಲ್ಲೆಯ ಒಳಗೆ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿ ಬಡ ಶಿಕ್ಷಕರನ್ನು ದಂಪತಿಗಳು ಒಂದೆಡೆ ಜಿಲ್ಲೆ ಒಳಗಾದರೂ ಬದುಕುವಂತೆ ಅವಕಾಶ ಮಾಡಿಕೊಡಿ
ಪ್ರತಿದಿನ ನಾನು ಮಂಡ್ಯ ಜಿಲ್ಲೆಯಿಂದ ಹೆಗ್ಗಡದೇವನ ಕೋಟೆಯಲ್ಲಿರುವ ಶಾಲೆಗೆ 105 ಕಿಲೋಮೀಟರ್ ದೂರ ಎರಡು ಕಡೆಯಿಂದ 21 0 ಕಿಮಿ ಬಸ್ಸಿನಲ್ಲಿ 6ಗಂಟೆ ಪ್ರಯಾಣ ಮಾಡುತ್ತಿದ್ದೇನೆ.
ತಮ್ಮನಂಬುಗೆಯ
ರಾಮಕೃಷ್ಣೆಗೌಡ ಬಿ ಕೆ
ಸರ್ಕಾರಿ ಆದರ್ಶ ವಿದ್ಯಾಲಯ ಹೆಗ್ಗಡದೇವನಕೋಟೆ