ವರ್ಗಾವಣೆ ಸಿಗದೆ ನೊಂದು ಕೊಂಡ ಶಿಕ್ಷಕರ ಮನವಿ ದಯಮಾಡಿ ಸಂಘಟನೆಯ ನಾಯಕರೇ ಒಮ್ಮೆ ಶಿಕ್ಷಕರ ಮನವಿ ನೋಡಿ ಆಲಿಸಿ…..

Suddi Sante Desk

ಬೆಂಗಳೂರು –

ಸನ್ಮಾನ್ಯ ಸಂಘದ ಪದಾಧಿಕಾರಿಗಳಲ್ಲಿ ನಮ್ಮ ದೊಂದು ಕಳಕಳಿಯ ವಿನಂತಿ.ಶಿಕ್ಷಕರು ಹೆಚ್ಚು ನೊಂದಿರುವುದು ವರ್ಗಾವಣೆ ವಿಷಯಕ್ಕೆ.ಯಾವ ಇಲಾಖೆಯಲ್ಲಿಯೂ, ಯಾವ ವಿಭಾಗದಲ್ಲಿಯೂ ಇರದ ಕೆಲವು ನಿಯಮಗಳು ನಮ್ಮ ಇಲಾಖೆಯಲ್ಲಿ ಇವೆ.ಪ್ರತಿ ಬಾರಿಯೂ ವರ್ಗಾವಣೆ ನಿಯಮಗಳು ಬದಲಾವಣೆ ಆಗಿ ನಮಗೆ ವರ್ಗಾವಣೆ ಗಗನಕುಸುಮ ವಾಗಿದೆ.ಇದರ ಮೇಲೆ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆಯ ಬಿಸಿಯನ್ನು ಅನುಭವಿಸಬೇಕು. ಹೆಚ್ಚುವರಿ ವರ್ಗಾವಣೆಯಾದವರಿಗೆ ಕೋರಿಕೆ ವರ್ಗಾವ ಣೆಗೆ ಅವಕಾಶ ನೀಡಲಿಲ್ಲ.

ಇವೆಲ್ಲ ನಿಯಮ ಬದಲಾವಣೆಯ ಬಿಸಿತಟ್ಟುವುದು ನಮಗೆ ಏಕೆ ತಿಳಿಯುತ್ತಿಲ್ಲ.20ವರ್ಷಗಳಾದರೂ ಇನ್ನೂ Out of Division ವರ್ಗಾವಣೆ ಆಗಿಲ್ಲ.ಕುಟುಂಬ ಒಂದು ಕಡೆ ನಾವು ಒಂದು ಕಡೆ.ಅನಾರೋಗ್ಯ ಸಮಸ್ಯೆ ಇದ್ದರೂ ಕೂಡ ವರ್ಗಾವಣೆ ಭಾಗ್ಯ ಇಲ್ಲ.ಮಾನಸಿಕ ನೆಮ್ಮದಿ ಇಲ್ಲ.ಇದು ಕೇವಲ ನನ್ನ ಸಮಸ್ಯೆ ಅಲ್ಲ.ನನ್ನಂತಹ ವರ್ಗಾವಣೆ ವಂಚಿತ ಸಾವಿರಾರು ಶಿಕ್ಷಕರ ಸಮಸ್ಯೆ.ಆದ್ದರಿಂದ ಮಾನ್ಯ ಪದಾಧಿ ಕಾರಿಗಳಲ್ಲಿ ನನ್ನದೊಂದು ಕಳಕಳಿಯ ಮನವಿ.ನಾಳೆ ಬರುವ‌ ಮಾನ್ಯ MLC ಅವರಿಗೂ ಹಾಗೂ ಸರ್ಕಾರಕ್ಕೂ ವರ್ಗಾವಣೆ ಸಮಸ್ಯೆ ಬಗ್ಗೆ ದಯವಿಟ್ಟು ತಿಳಿಸಿ.

ನಿಯಮದ ಪ್ರಕಾರ 10ವರ್ಷಗಳ ಸೇವೆಯನ್ನು ಕಲ್ಯಾಣ ಕರ್ನಾಟಕದಲ್ಲಿ ಪೂರೈಸಿರುವ ಶಿಕ್ಷಕರಿಗೆ ಅಂತರ ವಿಭಾಗ ವರ್ಗಾವಣೆಗೆ ಅವಕಾಶ ಮಾಡಿಸಿ.25%ಖಾಲಿ ಹುದ್ದೆಗಳ ನಿಯಮದಿಂದ ವಿನಾಯಿತಿ ನೀಡಿ ವರ್ಗಾವಣೆ ಆಗುವಂ ತಾಗಲಿ.ನಿಯಮ ಬದಲಾವಣೆ ಮಾಡಿದರೂ ಸುಮಾರು 150 ರಿಂದ 200 ಶಿಕ್ಷಕರು ಮಾತ್ರ ವರ್ಗಾವಣೆ ಆಗುತ್ತಾರೆ ಈಗಲಾದರೂ ನಾವು ಹೊಸ ಆಸೆ ಹೊಸ ಭರವಸೆ ಹೊಸ ಬೆಳಕು ಕಾಣುವಂತಾಗಲಿ.25% ಖಾಲಿ ಹುದ್ದೆಗಳ ನಿಯಮ ಬದಲಾವಣೆ ಮಾಡಿ ಈ ವರ್ಷದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿ ಎಂಬ ಸದಾಶಯ ದೊಂದಿಗೆ ಎಲ್ಲರಿಗೂ ನಮಸ್ಕಾರಗಳು. ಇಂತಿ ನೊಂದುಕೊಂಡ ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರ ಬಳಗ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.