ಹುಬ್ಬಳ್ಳಿ –
ಕಳೆದ ಮೂರು ದಿನಗಳ ಹಿಂದೆ ಹುಬ್ಬಳ್ಳಿಯ ಬೆಳ ಗಲಿ ಕ್ರಾಸ್ ನಲ್ಲಿ ನಡೆದ ರಾಬರಿ ಪ್ರಕರಣವನ್ನು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಬೇಧಿಸಿದ್ದಾರೆ. ಹೌದು ಘಟನೆ ನಡೆದು ಮೂರೇ ದಿನಗಳಲ್ಲಿ ಈ ಒಂದು ದರೋಡೆ ಪ್ರಕರಣವನ್ನು ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಮತ್ತು ಟೀಮ್ ನವರು ಪತ್ತೆ ಹಚ್ಚಿದ್ದಾರೆ.
ಹುಬ್ಬಳ್ಳಿಯಿಂದ ಸಿರಾಜ್ ಮತ್ತು ಇನ್ನೊರ್ವ ಸೇರಿ ಕೊಂಡು ಹೊಲೆದ ಬಟ್ಟೆಗಳನ್ನು ಕೊಡಲು ಬೈಕ್ ತಗೆದುಕೊಂಡು ಹೊರಟಿದ್ದರು. ಹೋಗುವ ದಾರಿ ಮಧ್ಯದಲ್ಲಿ ಅಂದರೆ ಬೆಳಗಲಿ ಕ್ರಾಸ್ ನಲ್ಲಿ ವಾಹನ ಕೈಕೊಟ್ಟ ಪರಿಣಾಮವಾಗಿ ರಸ್ತೆ ಪಕ್ಕದಲ್ಲಿ ಇವರು ಕುಳಿತುಕೊಂಡಿದ್ದರು.ಇವರನ್ನು ನೋಡಿದ ಮೂವ ರು ಇವರ ಬಳಿ ಬಂದು ಇವರನ್ನು ಹೆದರಿಸಿ ಬೆದರಿಸ ಲು ಮುಂದಾದರು.ಈ ಒಂದು ಸಮಯದಲ್ಲಿ ಸಿರಾಜ್ ನಿಗೆ ಸ್ವಲ್ಪು ಚಾಕು ತಗುಲಿ ಗಾಯಗೊಂಡಿ ದ್ದನು. ನಂತರ ಇವರ ಬಳಿ ಇದ್ದ ಹದಿನೈದು ಸಾವಿರ ರೂಪಾಯಿ ಹಣ ಮತ್ತು ಇನ್ನಿತರ ದಾಖಲೆಗಳನ್ನು ಮೂವರು ಖತರ್ನಾಕ್ ಖದೀಮರು ಕಿತ್ತುಕೊಂಡು ಎಸ್ಕೇಪ್ ಆಗಿದ್ದರು.
ಈ ಕುರಿತಂತೆ ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಪ್ರಕ ರಣವನ್ನು ದಾಖಲು ಮಾಡಿಕೊಂಡ ಹುಬ್ಬಳ್ಳಿಯ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್ ಮತ್ತು ಸಿಬ್ಬಂದಿ ಗಳು ಕಾರ್ಯಾಚರಣೆ ಮಾಡಿ ಪ್ರಕರಣ ನಡೆದು ಮೂರೇ ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ದ್ದಾರೆ.
ದರೋಡೆ ಮಾಡಿದ್ದ ಮೂವರು ಹೆದ್ದಾರಿ ದರೋಡೆ ಕೊರರಿಗೆ ಎಡೆಮೂರಿ ಕಟ್ಟಿದ್ದಾರೆ.ಇಬ್ಬರಿಗೆ ಚಾಕು ತೋರಿಸಿ ಏರ್ ಗನ್ ನಿಂದ ಹೆದರಿಸಿ ಅವರ ಬಳಿ ಇದ್ದ ಹಣ ಮತ್ತು ಇನ್ನೀತರ ವಸ್ತುಗಳನ್ನು ದರೋಡೆ ಮಾಡಿದ ಮೂವರನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 105/2021, ಕಲಂ 397 ಸಹಕಲಂ 34 ಐ.ಪಿ.ಸಿ. 1) ಸಿದ್ಧಾರ್ಥ @ ಕಿರಣ ತಂದೆ ಗುರುನಾಥ ನವಲಗುಂದ, ಸೆಟ್ಲಮೆಂಟ್, 2) ಶ್ರೀನಿವಾಸ @ ಶಿನ್ಯಾ ತಂದೆ ತಿರುಪತಿ ವೀರಾಪೂರ, ಸೆಟ್ಲಮೆಂಟ್,3)ಸುಧಾಕರ @ ಸುಧಾ ತಂದೆ ಸುಭಾಷ ಗಬ್ಬೂರ, ಸೆಟ್ಲಮೆಂಟ್, ಮೂವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ದರೋಡೆಗೆ ಬಳಸಿದ್ದ ಒಂದು ಬುಲೆ ಟ್ ಬೈಕ್,ಚಾಕು,ಏರ್ ಗನ್,ಹದಿನೈದು ಸಾವಿರ ರೂಪಾಯಿ,ಎಟಿಎಮ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಎಸ್ಪಿ ಮತ್ತು ಡಿವೈಎಸ್ಪಿ ಇವರ ಮಾರ್ಗದರ್ಶ ನದಲ್ಲಿ ನಡೆದ ಈ ಒಂದು ಕಾರ್ಯಾಚರಣೆಯಲ್ಲಿ ಇನ್ಸ್ಪೇಕ್ಟರ್ ರಮೇಶ್ ಗೋಕಾಕ್ ಅವರೊಂದಿಗೆ ಪಿಎಸ್ಐ ಪ್ರಸಾದ ಪುಣೇಕರ, ಎಎಸ್ಐ ಭರಮನ್ನ ವರ,ಬಿ ಎಸ್ ಹುಬ್ಬಳ್ಳಿ. ಸಿಬ್ಬಂದಿಗಳಾದ ನಾರಾಯ ಣ ಹಿರೇಹೊಳಿ,ಮಾಲತೇಶ ಬಾರಕಿ ಮಂಜುನಾಥ ಹೇಳವರ ನಾನೇಗೌಡ ದಾಬೊಳಿ,ದೀಪಕ,ಚಂದ್ರ ಜರಗನ್ನವರ ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು