ಧಾರವಾಡ –
ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆ ಹಾಗೂ ಗ್ರಾಮೀಣ ಭತ್ಯೆ ಹಾಗೂ ಇತರ ಬೇಡಿಕೆಗಳ ಕುರಿತು ಹೋರಾಟಕ್ಕೆ ಸಿದ್ಧರಾಗಿ ಎಂದು ಗ್ರಾಮೀಣ ಶಿಕ್ಷಕರ ಸಂಘಗಳು ಕರೆ ಕೊಟ್ಟಿದ್ದಾರೆ
ಈ ವಾರದಲ್ಲಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡದೆ ಇದ್ದರೆ ಉಗ್ರ ಹೋರಾಟ ಅಮರಣಾಂತ ಉಪವಾಸ ಅಹೋರಾತ್ರಿ ಧರಣಿಗೆ ಸಿದ್ಧರಾಗಲು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರುಗಳಿಗೆ ಕರೆ ನೀಡಿದ ಗ್ರಾಮೀಣ ಪ್ರೌಢಶಾಲಾ ಹಾಗೂ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ ಹಾಗೂ ಪವಾಡೆಪ್ಪ ಈ ವಾರದಲ್ಲಿ ವರ್ಗಾವಣೆ ಪ್ರಾರಂಭ ಮಾಡಬೇಕು ಇಂದು ನಡೆದ ಸರ್ಕಾರಿ ನೌಕರರ ಸಂಘದ ಸಭೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆ ಇಬ್ಭಾಗವಾಯಿತು ಕೇವಲ ಭಾಷಣಕ್ಕೆ ಹಾಗೂ ಮನವಿಗ ಳಿಗೆ ಸೀಮಿತವಾಗಿದೆ ಅದೇ ರಾಗ ಅದೇ ಹಾಡು ಹಳೆಯ ಪದ್ಧತಿಯನ್ನೇ ಮುಂದುವರಿಸಿದ್ದಾರೆ
ರಾಜ್ಯದ ಶಿಕ್ಷಕರು ಈ ಸಭೆಯಲ್ಲಿ ಏನಾದರೂ ಹೋರಾಟಕ್ಕೆ ಕರೆ ನೀಡುವ ತೀರ್ಮಾನ ಆಗುವುದು ಎಂಬ ಆಶಾಭಾವನೆ ಯಲ್ಲಿದ್ದರು ಅದು ಆಗಲಿಲ್ಲ ತಮ್ಮ ಪ್ರತಿಷ್ಠೆಗೆ ಜಿದ್ದಾಜಿದ್ದಿಗೆ ಬಿದ್ದ ಸಂಘದ ನಾಯಕರು ಇದರಲ್ಲಿ ಶಿಕ್ಷಕರ ವರ್ಗಾವಣೆ ಮತ್ತೆ ವಿಳಂಬ ಆಗುತ್ತದೆ ಅದಕ್ಕಾಗಿ ನ್ಯಾಯಾಲಯದ ತೀರ್ಪು ಏನೇ ಇರಲಿ ಕಡ್ಡಾಯ ಹೆಚ್ಚುವರಿ ವರ್ಗಾವಣೆ ಬಿಟ್ಟು ಸಾಮಾನ್ಯ ವರ್ಗಾವಣೆ ಪ್ರಾರಂಭ ಮಾಡಲಿ ಗ್ರಾಮೀಣ ಸಂಘದ ರಾಜ್ಯಾಧ್ಯಕ್ಷರು ಅಶೋಕ ಸಜ್ಜನ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾದ ಪವಾಡೆಪ್ಪ ಜಂಟಿ ಹೇಳಿಕೆ ನೀಡಿ ವರ್ಗಾವಣೆಯಿಲ್ಲದೆ ಶಿಕ್ಷಕರು ಮಾನಸಿಕವಾಗಿ ದೈಹಿಕವಾಗಿ ಕಣ್ಣೀರು ಹಾಕುತ್ತಿ ದ್ದಾರೆ ತೊಂದರೆಯಲ್ಲಿದ್ದಾರೆ ಇದನ್ನು ಗಂಭೀರವಾಗಿ ಯಾರು ಪರಿಗಣಿಸುತ್ತಿಲ್ಲ ಹೀಗಾಗಿ ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ ಈ ವಾರದಲ್ಲಿ ವರ್ಗಾವಣೆ ಪ್ರಾರಂಭ ಮಾಡದೆ ಇದ್ದರೆ ಉಗ್ರ ಹೇೂರಾಟಕ್ಕೆ ಕರೆ ನೀಡಲಾಗುವುದೆಂದು ಗ್ರಾಮೀಣ ಪ್ರೌಢಶಾಲಾ, ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಜಂಟಿ ಹೇಳಿಕೆ ನೀಡಿದ್ದಾರೆ