ದಾವಣಗೆರೆ –
ಹರಿಹರ ತಾಲೂಕಿನ ಉಕ್ಕಡಗಾತ್ರಿ ತೀರ್ಥಕ್ಷೇತ್ರಕ್ಕೆ ಹೋಗಿದ್ದ ಇಬ್ಬರು ಯುವತಿಯರು ನೀರುಪಾಲಾಗಿದ್ದಾರೆ ಹೌದು ನೀರಿನಲ್ಲಿ ಸ್ನಾನ ಮಾಡಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ ಯುವತಿಯರು.
ಹುಚ್ಚವನಹಳ್ಳಿ ಗ್ರಾಮದ ರಾಧಮ್ಮ ಮಕ್ಕಳಾದ ವಿ ಚೈತ್ರ (19 ವರ್ಷ) ವಿ ಪುಷ್ಪಾವತಿ (16) ಸಾವಿಗೀಡಾದವರಾಗಿ ದ್ದಾರೆ.ಹೊಳೆಯಲ್ಲಿ ಸ್ನಾನ ಮಾಡಲು ನೀರಿನಲ್ಲಿ ಇಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಂತರ ಅಲ್ಲಿಯೇ ಮೃತರಾಗಿದ್ದಾರೆ.
ರಾಧಮ್ಮ ಮಾತು ಬಾರದ ವಿಕಲಚೇತನ ಮಗಳು ಚೈತ್ರ ಹಾಗೂ ಸಣ್ಣ ಮಗಳು ಪುಷ್ಪವತಿ.ಉಕ್ಕಡಗಾತ್ರಿ ಉಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ ಯಾಗಿದ್ದು ಸಧ್ಯ ಈ ಒಂದು ಕುರಿತು ದೂರು ದಾಖಲಾಗಿದೆ