ಮೆಹಬೂಬ್ ನಗರ –
ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಖಾಸಗಿ ಶಾಲಾ ಬಸ್ ಮಳೆ ನೀರಿನಲ್ಲಿ ಸಿಲುಕಿಕೊಂಡ ಘಟನೆ ಆಂದ್ರಪ್ರದೇ ಶದ ಮಹೆಬೂಬ್‌ನಗರದಲ್ಲಿ ನಡೆದಿದೆ.ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದೆ ಇದ ರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.ನಿನ್ನೆ ರಾತ್ರಿ ಸುರಿದ ಮಳೆಗೆ ಮಹೆಬೂಬನಗರ ಮಂಡಲದಕೋಡೂರು ಬಳಿ ರೈಲ್ವೆ ಕೆಳ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಬೆಳಗ್ಗೆ ಖಾಸಗಿ ಶಾಲಾ ಬಸ್ ಸಮೀಪದ ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆತರಲು ಹೊರಟಿತ್ತು. ರಾಮಚಂದ್ರಾ ಪುರ,ಮಾಚನಪಲ್ಲಿ,ಸೂಗೂರಗಡ್ಡ ತಾಂಡಾದಿಂದ ಸುಮಾರು 30 ವಿದ್ಯಾರ್ಥಿಗಳನ್ನು ಹೊತ್ತು ಮಹೆಬೂಬ್ ನಗರಕ್ಕೆ ತೆರಳುತ್ತಿದ್ದ ಶಾಲಾ ಬಸ್ ಕೋಡೂರು ಬಳಿಯ ರೈಲ್ವೆ ಕೆಳ ಸೇತುವೆಯಲ್ಲಿದ್ದ ಮಳೆ ನೀರಿನಲ್ಲಿ ಸಿಲುಕಿಕೊಂ ಡಿದೆ.
ಬಸ್‌ನಲ್ಲಿ ಮಕ್ಕಳು ಕುಳಿತಿದ್ದ ಸೀಟಿನವರೆಗೂ ನೀರು ಬಂದಿದ್ದರಿಂದ ವಿದ್ಯಾರ್ಥಿಗಳು ಆತಂಕಗೊಂಡು ಕಿರು ಚಾಡಿದ್ದಾರೆ.ಹೀಗಾಗಿ ಚಾಲಕ ಬಸ್ ಅನ್ನು ಅಲ್ಲೇ ನಿಲ್ಲಿಸಿ ದ್ದಾನೆ.ಇದನ್ನು ಗಮನಿಸಿದ ಸ್ಥಳೀಯರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕಾಪಾಡಿದ್ದಾರೆ.ಈಗಾಗಲೇ ಬಸ್ 40% ಮುಳುಗಡೆಯಾಗಿದ್ದು ಮುಂದೆ ಹೋಗಿದ್ದರೆ ಸಂಪೂರ್ಣ ನೀರಿನಲ್ಲಿ ಮುಳುಗುತ್ತಿತ್ತು.ನೀರಿರುವುದು ಗೊತ್ತಿದ್ದರೂ ಇಲ್ಲಿಗೆ ಬಂದ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಹಾಗೂ ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.