ಅಳ್ನಾವರ –
ಮುಸ್ಲಿಂ ಸಮುದಾಯದ ಯುವಕರು ಸೇರಿಕೊಂಡು ಹಣವನ್ನು ಸಂಗ್ರಹ ಮಾಡಿ ಸರ್ಕಾರಿ ಶಾಲೆಯೊಂದಕ್ಕೆ ಹೊಸ ರೂಪ ನೀಡಿದ ಚಿತ್ರಣವೊಂದು ಧಾರವಾಡ ದಲ್ಲಿ ಕಂಡು ಬಂದಿದೆ.ಹೌದು ಧಾರವಾಡದ ಅಳ್ನಾವರ ತಾಲ್ಲೂಕಿನ ಕಾಶೇನಟ್ಟಿ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಉರ್ದು ಶಾಲೆಗೆ ಎಸ್‌ಡಿಎಂಸಿ ಸದಸ್ಯರು ಹಾಗೂ ಮುಸ್ಲಿಂ ಸಮಾಜದ ಯುವಕರು ₹ 60 ಸಾವಿರ ಸಂಗ್ರಹಿಸಿ ಶಾಲೆಗೆ ಬಣ್ಣ ಹಚ್ಚಿದ್ದಾರೆ.

ಶಾಲೆಯ ಮೂರು ಕೊಠಡಿ ಹಾಗೂ ಕಾಂಪೌಂಡ್‌ಗೆ ಬಣ್ಣ ಹಚ್ಚಿದ್ದಾರೆ ಮತ್ತು ಅಡುಗೆ ಕೊಠಡಿ ದುರಸ್ತಿ ಮಾಡಿದ್ದಾರೆ. ಮೈದಾನ ಸಮತಟ್ಟು ಮಾಡಿ ಆಟವಾಡಲು ಮಣ್ಣು ಹಾಕ ಲಾಗಿದ್ದು ಎಸ್‌ಡಿಎಂಸಿ ಅಧ್ಯಕ್ಷ ಬಾಬಾಜಾನ ಕಂಬಳಿ, ಸಮಿತಿಯ ಸರ್ವ ಸದಸ್ಯರು,ಯುವಕರಾದ ದಸ್ತಗೀರ ಹುನಸೀಕಟ್ಟಿ,ಇಮಾಮಸಾಬ ಮುಕಾಸಿ,ನದಿಮ ಕಿತ್ತೂರ, ರಾಜೇಸಾಬ ಮುಜಾವರ ಈ ಕಾರ್ಯಕ್ಕೆ ಕೈಜೊಡಿಸಿ ಇತರರಿಗೆ ಮಾದರಿಯಾಗಿದ್ದಾರೆ.