ಹುಬ್ಬಳ್ಳಿ –
ಹಾವು ಮುಂಗಸಿಯ ಕಾದಾಟವೊಂದು ಹುಬ್ಬಳ್ಳಿಯ ರಾಯನಾಳದಲ್ಲಿ ಕಂಡು ಬಂದಿದೆ. ರಾಯನಾಳ ಗ್ರಾಮದ ಬಸಮ್ಮ ಕಾಲೋನಿಯಲ್ಲಿ ಈ ಒಂದು ಕಾದಾಟವೊಂದು ಕಂಡು ಬಂದಿತು.
ಬಡಾವಣೆಯ ಬಸವರಾಜ ಗುಳಪ್ಪ ಬಡಿಗೇರ ಎಂಬುವರ ಮನೆಯ ಮುಂದೆ ಹಾವು ಮುಂಗುಸಿ ಗಳ ಕಾದಾಟ ನಡೆದಿದೆ. ಮರದಲ್ಲಿದ್ದ ನಾಗರ ಹಾವನ್ನು ನೋಡಿದ ಮುಂಗುಸಿ ಮರದ ಮೇಲೆ ಹತ್ತಿ ಹಾವಿನೊಂದಿಗೆ ಕಾದಾಟಕ್ಕಿಳಿಯಿತು.
ಎರಡು ಬದ್ದ ವೈರಿಗಳು ಎನ್ನೊದಕ್ಕೆ ಈ ಒಂದು ಕಾದಾಟವೇ ಸಾಕ್ಷಿಯಾಗಿದೆ. ಇನ್ನೂ ಬರೊಬ್ಬರಿ ಎರಡು ಮೂರು ಘಂಟೆಗಳ ಕಾಲ ನಡೆದ ಕಾದಾಟವನ್ನು ತಿಳಿದ ರಾಯನಾಳ ಗ್ರಾಮಸ್ಥರು ಜನ ಜಂಗುಳಿಯಾಗಿ ಸೇರಿದರು.
ಸಾಕಷ್ಟು ಪ್ರಮಾಣದಲ್ಲಿ ಸೇರಿದರು ಕೂಡಾ ಹಾವು ಮುಂಗುಸಿ ಹೆದರದೆ ಗಿಡದಲ್ಲಿಯೇ ಕಾದಾಡಿದವು ಯಾರ ಭಯ ಅಂಜಿಕೆ ಇಲ್ಲದೇ ಬದ್ದ ವೈರಿಗಳಿಬ್ಬರ ಕಾದಾಟವನ್ನು ಗ್ರಾಮಸ್ಥರು ನಿಜವಾಗಿಯೂ ಪ್ರತ್ಯಕ್ಷವಾಗಿ ನೋಡಿ ಕೆಲವರು ತಮ್ಮ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡರು.
ಇನ್ನೂ ಮೂರು ಘಂಟೆಗಳ ನಿರಂತರ ಯುದ್ದದಲ್ಲಿ ಕೊನೆಗೂ ಮುಂಗುಸಿ ಗೆದ್ದಿತು. ಗಿಡದಲ್ಲಿಯೇ ಸಾಯಿಸಿ ಗಿಡದಿಂದ ಪಕ್ಷದ ಹೊಲಕ್ಕೆ ಹಾವನ್ನು ತಗೆದುಕೊಂಡು ಹೋಯಿತು .
ಹಾವು ದೇವರ ಹಾವಂತೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿ ಬರುತ್ತಿದ್ದು ಏನೇ ಆಗಲಿ ಹಾವು ಮುಂಗುಸಿ ಕಾದಾಟದಲ್ಲಿ ಮುಂಗುಸಿ ಗೆದ್ದಿತು.ಇನ್ನೂ ಇದೊಂದು ವಿಶೇಷವಾಗಿ ಗ್ರಾಮದಲ್ಲಿ ಕಂಡು ಬಂದಿದ್ದು ಅಚ್ಚರಿಯಾಗಿದೆ ಎಂದು ಹೇಳುತ್ತಿದ್ದಾರೆ ಗ್ರಾಮದ ಹಿರಿಯರಾದ ಬಸವರಾಜ ಹೊಂಬಳ ಅವರು.
ಇನ್ನೂ ರಾಮ ಲಕ್ಷ್ಮಣ ಚಿತ್ರದಲ್ಲಿ ತೊಟ್ಟಿಲಲ್ಲಿ ಮಲಗಿದ ಮಗುವಿನ ಬಳಿ ಬಂದಿದ್ದ ನಾಗರ ಹಾವನ್ನು ಮನೆಯಲ್ಲಿದ್ದ ಮುಂಗುಸಿ ರಕ್ಷಣೆ ಮಾಡಿತ್ತು ಜಗಳದಲ್ಲಿ ಅಲ್ಲೂ ಹಾವು ಗೆಲುವು ಸಾಧಿಸಿತ್ತು ಈಗ ಮತ್ತೆ ಇಲ್ಲೂ ಮುಂಗುಸಿ ಗೆದ್ದಿತು.