ಜೈಪುರ –
33 ವರ್ಷಗಳ ಕಾಲ ಸರ್ಕಾರಿ ಶಾಲೆ ಯೊಂದರಲ್ಲಿ ಶಿಕ್ಷಕಿ ಯಾಗಿ ಸೇವೆ ಸಲ್ಲಿಸಿ ನಿವೃತ್ತ ರಾದ ತಾಯಿ ಯೊಬ್ಬರಿಗೆ ವಿಶೇಷವಾದ ಕೊಡುಗೆ ಯನ್ನು ಮಗ ನೀಡಿದ್ದಾನೆ ಹೌದು ಹೆತ್ತ ತಾಯಿಗೆ ಮಕ್ಕಳು ನೀಡುವ ಬಹು ದೊಡ್ಡ ಕೊಡುಗೆ ಎಂದರೆ ಅವಳನ್ನು ಪ್ರೀತಿಸುವುದು ಮತ್ತು ಗೌರವಿಸುವುದು ಇದೆಲ್ಲವನ್ನೂ ಮೀರಿ ಅನೇಕರು ತಮ್ಮದೇ ರೀತಿಯಲ್ಲಿ ತಾಯಿ ಮೇಲಿನ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸು ತ್ತಾರೆ.ಇದಕ್ಕೆ ತಾಜಾ ಉದಾಹರಣೆ ರಾಜಸ್ಥಾನದ ಜೈಪುರ್ ದಲ್ಲಿ ಕಂಡು ಬಂದ ಚಿತ್ರಣ
ರಾಜಸ್ಥಾನದ ವ್ಯಕ್ತಿಯೊಬ್ಬ ತನ್ನ ತಾಯಿಗೆ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾನೆ.ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತಹ ಕ್ಷಣವನ್ನು ತನ್ನ ತಾಯಿ ಅನುಭವಿಸುವಂತೆ ಮಾಡಿದ್ದಾನೆ.ಜೀವನದಲ್ಲಿ ಒಮ್ಮೆಯಾ ದರೂ ವಿಮಾನ ಅಥವಾ ಹೆಲಿಕಾಪ್ಟರ್ ಪ್ರಯಾಣ ಮಾಡ ಬೇಕೆಂಬ ಆಸೆ ಬಹುತೇಕರಲ್ಲಿ ಇದ್ದೇ ಇರುತ್ತದೆ.ಇದೊಂದು ಸ್ಮರಣೀಯ ಅನುಭವ ಆ ಅನುಭವವನ್ನು ತಾಯಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಶಿಕ್ಷಕಿ ವೃತ್ತಿಯಿಂದ ನಿವೃತ್ತಿಗೊಂಡ ತನ್ನ ತಾಯಿಯನ್ನು ಪ್ರೀತಿಯ ಪುತ್ರ ಹೆಲಿಕಾಪ್ಟರ್ ಮೂಲಕ ಮನೆಗೆ ಕರೆದು ಕೊಂಡು ಬಂದ ವಿನೂತನ ಕ್ಷಣಕ್ಕೆ ರಾಜಸ್ಥಾನದ ಅಜ್ಮೇರ್ ಸಾಕ್ಷಿಯಾಗಿದೆ.ಪುತ್ರ ಯೋಗೇಶ್ ಚೌಹಾಣ್ ನನ್ನ ತಾಯಿ ಶಿಕ್ಷಕಿಯಾಗಿ ನಿವೃತ್ತಿಗೊಂಡಿದ್ದಾರೆ.ಅವಳಿಗೆ ವಿಶೇಷವಾಗಿ ಏನಾದರೂ ಮಾಡಬೇಕೆಂದುಕೊಂಡೆ.ಬಳಿಕ ಆಕೆಯನ್ನು ಮನೆಗೆ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದೆ.ಆದರೆ ಈ ಸಮಯದಲ್ಲಿ ಇಷ್ಟೊಂದು ಜನಸಂದಣಿ ಅಲ್ಲಿ ಸೇರು ತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ.ಆದರೆ ಇದು ನಮಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದಿದ್ದಾರೆ.
ಶಾಲಾ ಶಿಕ್ಷಕಿ ಸುಶೀಲಾ ಚೌಹಾಣ್ ಅವರು ರಾಜಸ್ಥಾನದ ಅಜ್ಮೀರ್‌ನಲ್ಲಿ ನಿವೃತ್ತರಾದರು.33 ವರ್ಷಗಳ ಸೇವೆಯ ನಂತರ ಪಿಸಂಗನ್‌ನ ಕೇಸರಪುರ ಪ್ರೌಢಶಾಲೆಯಲ್ಲಿ ಸುಶೀಲಾ ಅವರ ಕೊನೆಯ ದಿನವಾಗಿತ್ತು.ಈ ನಿವೃತ್ತಿಯ ದಿನವನ್ನು ಸ್ಮರಣೀಯವಾಗಿಸಲುಅವರ ಮಗ ಯೋಗೇಶ್ ಚೌಹಾಣ್ ತನ್ನ ತಾಯಿಗಾಗಿ ಹೆಲಿಕಾಪ್ಟರ್ ರೈಡ್ ಅನ್ನು ಬುಕ್ ಮಾಡಿದರು.ಹೆಲಿಕಾಪ್ಟರ್ ಮೂಲಕ ತಾಯಿಯನ್ನು ಶಾಲೆಯಿಂದ ಮನೆಗೆ ಕರೆತರಲು ಯೋಗೇಶ್ ಆಡಳಿತ ದಿಂದ ವಿಶೇಷ ಅನುಮತಿಯನ್ನ ಪಡೆದಿದ್ದರು
ಯೋಗೇಶ್ ಚೌಹಾಣ್ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು ಪ್ರಸ್ತುತ ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಶಿಕ್ಷಕಿ ಸುಶೀಲಾ ಚೌಹಾಣ್ ಹೆಲಿಕಾಪ್ಟರ್ ಮೂಲಕ ಶಾಲೆಯಿಂದ ಹೊರಟಾಗ ಸುತ್ತಮುತ್ತ ಸಂಭ್ರಮದ ವಾತಾವರಣವಿತ್ತು. ಅವರನ್ನು ನೋಡಲು ನೂರಾರು ಜನ ಕೂಡ ಜಮಾಯಿಸಿ ದ್ದರು.ತಮ್ಮ ಮಗನ ಈ ಸರ್ ಪ್ರೈಸ್ ಉಡುಗೊರೆಯಿಂದ ತಾಯಿ ಸುಶೀಲಾ ಚೌಹಾಣ್ ತುಂಬಾ ಖುಷಿಯಾಗಿದ್ದಾರೆ.
ಮಗ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು ಅವನಿಗೆ ಒಬ್ಬ ಮಗಳು ಮತ್ತು ಮಗನಿದ್ದಾರೆ ಎಂದು ಹೇಳಿದರು.ನನ್ನ ಮಗನು ನನ್ನನ್ನು ಕೇಸರಪುರದಿಂದ ಅಜ್ಮೀರ್ ಹೆಲಿಕಾಪ್ಟರ್‌ಗೆ ಕರೆದೊಯ್ಯಲು ಬಯಸಿದನು. ಇದು ನನಗೆ ಅಂತಹ ಸಂತೋಷವನ್ನು ನೀಡಿದೆ ಅದನ್ನು ಪದಗಳಲ್ಲಿ ವಿವರಿಸಲು ಕಷ್ಟ ಎಂದು ತಿಳಿಸಿದರು



























