ಧಾರವಾಡದಲ್ಲಿ ಹೈ ಅಲರ್ಟ್ ಪೊಲೀಸ್ ಕಣ್ಗಾವಲು – ಪೊಲೀಸ್ ಆಯುಕ್ತರ ಸಂದೇಶದ ಬೆನ್ನಲ್ಲೇ ಹಿರಿಯ ಅಧಿಕಾರಿಗಳ ನೇತ್ರತ್ವದಲ್ಲಿ ಶುರವಾಯ್ತು ಪೊಲೀಸ್ ಗಸ್ತು ನಗರದಲ್ಲಿ ಹೇಗಿದೆ ಪೊಲೀಸ್ ಗಸ್ತು ನೋಡಿ
ಹೌದು ಧಾರವಾಡದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.ಒಂದೇ ವಾರದಲ್ಲಿ ಐದು ಕೊಲೆ ನಡೆದ ಬೆನ್ನಲ್ಲೇ ಇದನ್ನು ಗಂಭೀರವಾಗಿ ತಗೆದುಕೊಂಡಿ ರುವ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಪೊಲೀಸ್ ಬೀಟ್ ಹೆಚ್ಚಿಸುವ ಕುರಿತಂತೆ ಹೇಳಿದ್ದರು.
ಈ ಒಂದು ಸೂಚನೆಯ ಸಂದೇಶದ ಬೆನ್ನಲ್ಲೇ ಧಾರವಾಡದಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.ವಿದ್ಯಾಕಾಶಿ ಧಾರವಾಡದಲ್ಲಿ ಅಲರ್ಟ್ ಆಗಿದ್ದಾರೆ ಪೊಲೀಸರು.ನಗರದಲ್ಲಿ ಜೋರಾಗಿದೆ ಪೊಲೀಸ್ ಗಸ್ತು.ಹಿರಿಯ ಅಧಿಕಾರಿಗಳ ನೇತೃತ್ವ ದಲ್ಲಿ ನೈಟ್ಸ್ ರೌಂಡಿಂಗ್ಸ್ ಆರಂಭಗೊಂ ಡಿದ್ದು
ಎಲ್ಲೇಂದರಲ್ಲಿ ಅನಾವಶ್ಯಕವಾಗಿ ಕುಳಿತುಕೊಂಡ ವರಿಗೆ ತಿರುಗಾಡುತ್ತಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಾ ಚೇಕಿಂಗ್ ಮಾಡ್ತಾ ಇದ್ದಾರೆ. ಜನನಿ ಬಿಡ್ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಆರಂಭ ಗೊಂಡಿದೆ.ಸಪ್ತಾಪುರ, ಜಯನಗರ, ಕಾಲೇಜ್ ರಸ್ತೆಗಳಲ್ಲಿ ಪೊಲೀಸ್ ಗಸ್ತು ಹೆಚ್ಚಾಗಿದ್ದು ನಗರದ ವಿವಿಧ ಬಡಾವಣೆಗಳಲ್ಲಿ ಕೂಡಾ ಪೊಲೀಸ್ ಪೆಟ್ರೊಲಿಂಗ್ ನಡೆಯುತ್ತಿದೆ.
ಎಸಿಪಿ ಸಿದ್ದನಗೌಡರ ನೇತೃತ್ವದಲ್ಲಿ ಪೆಟ್ರೋಲಿಂಗ್ ಆಗುತ್ತಿದ್ದು ಎಲ್ಲಾ ಠಾಣೆಗಳ ಪೊಲೀಸ್ ಅಧಿಕಾರಿ ಗಳು ಸಿಬ್ಬಂದಿಗಳು ಈ ಒಂದು ಪೆಟ್ರೊಲಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.ಕಳೆದ ಒಂದು ವಾರದಲ್ಲಿ ನಡೆದಿರೊ ಐದು ಕೊಲೆಗಳಿಂದ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಖಡಕ್ ಸೂಚನೆಯನ್ನು ನೀಡಿದ್ದರು.ಈ ಹಿನ್ನಲೆಯಲ್ಲಿ ಅಲರ್ಟ್ ಆಗಿದ್ದಾರೆ ಪೊಲೀಸರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..