ಬೆಂಗಳೂರು –
ರಾಜಧಾನಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದ ರಾಜ್ಯ ಸರ್ಕಾರಿ ನೌಕರರು – ಮೂರು ಪ್ರಮುಖ ಬೇಡಿಕೆ ಗಳಿಗಾಗಿ ರಾಜ್ಯಾಧ್ಯಕ್ಷ ಷಡಾಕ್ಷರಿಯವರ ನೇತ್ರತ್ವದಲ್ಲಿ ನಡೆಯಿತು ಪ್ರತಿಭಟನೆ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಕೆ ಹೌದು
7ನೇ ವೇತನ ಆಯೋಗ ಅನುಷ್ಠಾನ ಸೇರಿದಂತೆ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿ ಕರೆ ನೀಡಲಾಗಿದ್ದ ರಾಜ್ಯ ಸರ್ಕಾರಿ ನೌಕರರ ಹೋರಾಟ ಬೆಂಗಳೂರಿನಲ್ಲಿ ಯಶಶ್ವಿಯಾಗಿ ನಡೆಯಿತು.ಹೌದು ರಾಜ್ಯ 7ನೇ ವೇತನ ಆಯೋಗದ ಅನುಷ್ಠಾನ,ಹಳೆಯ ಪಿಂಚಣಿ ಯೋಜನೆ
(ಒಪಿಎಸ್)ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಜಾರಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈ ಒಂದು ಪ್ರತಿಭಟನೆ ನಡೆಯಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,ವಿಧಾನಸಭಾ ನೌಕರರ,ವಿಧಾನ ಪರಿಷತ್ ನೌಕರರ ಸಂಘದ ಆಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗದಲ್ಲಿ ಈ ಒಂದು ಹೋರಾಟ ನಡೆಯಿತು.
ಮೊದಲ ಹಂತವಾಗಿ ತಹಸೀಲ್ದಾರ್, ಜಿಲ್ಲಾಧಿಕಾರಿ ಗಳು, ಸ್ಥಳೀಯ ಶಾಸಕರು ಮತ್ತು ಸಚಿವರಿಗೆ ಮನವಿ ಪತ್ರ ನೀಡುವ ಮೂಲಕ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆಯಲಾ ಗುತ್ತಿದೆ.ಮುಂದುವರೆದ ಭಾಗವಾಗಿ ಬೆಂಗಳೂರು ನಗರದ ಎಲ್ಲಾ ಇಲಾಖೆಗಳ ಸುಮಾರು 3000ಕ್ಕೂ ಹೆಚ್ಚು ನೌಕರರು ವಿಧಾನಸೌಧದ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿದರು
ನಂತರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯವನ್ನು ಮಾಡಿದರು.ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಬಿ.ಬಿ.ಎಂ.ಪಿ. ಅಧಿಕಾರಿ-ನೌಕರರ ಸಂಘದ ಅಧ್ಯಕ್ಷರಾದ ಅಮೃತರಾಜ್,
ಕೆ.ಪಿ.ಟಿ.ಸಿ.ಎಲ್. ಅಧಿಕಾರಿ-ನೌಕರರ ಸಂಘದ ಅಧ್ಯಕ್ಷರಾದ ಬಲರಾಂ ಭಜಂತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಡಾ.ಎಲ್. ಭೈರಪ್ಪ ಹಾಗೂ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ, ಟಿ. ಶ್ರೀನಿವಾಸ್,
ಖಜಾಂಚಿಗಳಾದ ಡಾ. ಸಿದ್ದರಾಮಣ್ಣ, ಹಿರಿಯ ಉಪಾಧ್ಯಕ್ಷರಾದ ಎಂ.ವಿ. ರುದ್ರಪ್ಪ, ಎಸ್. ಬಸವರಾಜು, ರಾಜ್ಯ ಕಾರ್ಯದರ್ಶಿಗಳಾದ ಡಾ. ನೆಲ್ಯುದ್ರಿ ಸದಾನಂದ ಹಾಗೂ ರಾಜ್ಯ ಸಂಘದ ರಾಜ್ಯ ಸಂಘದ ಉಪಾಧ್ಯಕ್ಷರುಗಳು, ಪದಾಧಿ ಕಾರಿಗಳು ಹಾಗೂ ರಾಜ್ಯ ಪರಿಷತ್ ಸದಸ್ಯರು ಗಳು ಸೇರಿದಂತೆ ಹಲವು ನೌಕರರು ಸಂಘಟನೆ ಗಳ ಮುಖಂಡರು ಹಾಜರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..