ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ರಚನೆಯ ಆದೇಶದ ಬೆನ್ನಲ್ಲೇ ರಾಜ್ಯದ ಸರ್ಕಾರಿ ನೌಕರರು ಹೊಸದೊಂದು ಬೇಡಿಕೆ ಯನ್ನು ಇಟ್ಟಿದ್ದಾರೆ. ಹೌದು ಶೇ 40ರಷ್ಟು ಫಿಟ್ಮೆಂಟ್ಗೆ ಸರ್ಕಾರಿ ನೌಕರರ ಸಂಘ ಮನವಿಯನ್ನು ಮಾಡಿದೆ ಹೌದು ವೇತನ ಪರಿಷ್ಕರಣೆ ವೇಳೆ ಶೇ 40ರಷ್ಟು ಫಿಟ್ಮೆಂಟ್ ನೀಡಲು ಏಳನೇ ವೇತನ ಆಯೋಗಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಶಿವಮೊಗ್ಗ ದಲ್ಲಿ ಮಾತನಾಡಿದ ಅವರು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಶೇ 22ರಷ್ಟು ಹಾಗೂ ಸಿದ್ದರಾಮಯ್ಯ ಅವರು ಶೇ 30ರಷ್ಟು ಫಿಟ್ಮೆಂಟ್ ನೀಡಿದ್ದರು ಆಯೋಗದ ವರದಿ ಮೂರು ತಿಂಗಳಿಗೆ ಸಲ್ಲಿಕೆ ಯಾಗಿ ಚುನಾವಣೆಗೆ ಮುನ್ನವೇ ಅದರ ಶಿಫಾರಸು ಜಾರಿ ಆಗುವ ವಿಶ್ವಾಸವಿದೆ.ವೇತನ ಆಯೋಗ ಬೇಡಿಕೆ ಈಡೇರಿದೆ.ಹಳೆಯ ಪಿಂಚಣಿ ಯೊಜನೆ ಜಾರಿ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗು ತ್ತೇವೆ ಎಂದರು.
ಇನ್ನೂ ಸರ್ಕಾರದ ಪುಣ್ಯಕೋಟಿ ಯೋಜನೆಗೆ ವೇತನ ನೀಡಿಕೆಗೆ ನೌಕರ ಸಮೂಹದಿಂದ ಒಕ್ಕೊರಲ ಬೆಂಬಲ ದೊರೆತಿದೆ.6 ಲಕ್ಷ ನೌಕರರಲ್ಲಿ ಯಾರೋ 100 ಮಂದಿ ವಿರೋಧಿಸಿದರು ಅಂದರೆ ಅದು ಲೆಕ್ಕಕ್ಕೆ ಇಲ್ಲ ಎಂದರು.
ನೌಕರರ ಸಾಮಾಜಿಕ ಕಳಕಳಿ ಮಾನವೀಯತೆ ಮೆರೆಯಲು ಈ ಯೋಜನೆ ವೇದಿಕೆಯಾಗಿದೆ. ಮುಂದೆ ಸಂಘದಿಂದ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗುವುದು ಎಂದರು.
ಸುದ್ದಿ ಸಂತೆ ನ್ಯೂಸ್…..