ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಉತ್ತೀರ್ಣರಾಗುವ ವಿಚಾರದಲ್ಲಿ ಮತ್ತೊಮ್ಮೆ ಖಡಕ್ ಆದೇಶವನ್ನು ಮಾಡಿದೆ ಹೌದು ಸರ್ಕಾರಿ ನೌಕರರಿಗೆ ಈ ಒಂದು ಪರೀಕ್ಷೆ ಯನ್ನು ಪಾಸ್ ಮಾಡಲು ಕಡ್ಡಾಯಗೊಳಿಸಲಾಗಿದೆ.ಈ ಪರೀಕ್ಷೆ ಉತ್ತೀ ರ್ಣಕ್ಕೆ ಹತ್ತು ವರ್ಷಗಳ ಅವಧಿಯೊಳಗೆ ಪಾಸ್ ಆಗು ವುದು ಕಡ್ಡಾಯಗೊಳಿಸಲಾಗಿತ್ತು.ಆದ್ರೇ ಇದೀಗ ದಿನಾಂಕ 31-12-2022ರೊಳಗೆ ಉತ್ತೀರ್ಣಗೊಳಿಸೋದನ್ನು ಕಡ್ಡಾ ಯಗೊಳಿಸಿದೆ.ಈ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡಿದೆ.
ಹೌದು ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂ ಚನೆ ಹೊರಡಿಸಿದ್ದು ಯಾವುದೇ ಸರ್ಕಾರಿ ನೌಕರನು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗು ವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ
ಈ ನಿಯಮ ಪ್ರಾರಂಭವಾದ ದಿನಾಂಕದಿಂದ ಹತ್ತು ವರ್ಷ ಗಳ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿಗೆ ಅರ್ಹನಾಗತಕ್ಕದ್ದಲ್ಲ ಎಂಬುದಾಗಿ ತಿಳಿಸಿತ್ತು.ಜೊತೆಗೆ ಯಾವುದೇ ಸರ್ಕಾರಿ ನೌಕರನು ಈ ನಿಯಮಗಳ ಪ್ರಾರಂಭದ ದಿನಾಂಕದಿಂದ ಹನ್ನೊಂದು ವರ್ಷಗಳ ಅವಧಿಯೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾ ಗದೇ ಇದ್ದಲ್ಲಿ ವಾರ್ಷಿಕ ವೇತನ ಬಡ್ತಿ ಗಳಿಸಲು ಅರ್ಹನಾಗ ತಕ್ಕದ್ದಲ್ಲ ಎಂದಿತ್ತು ಆದರೆ ಈಗ ಮಾರ್ಪಾಡು ಮಾಡಿ ಪರಿಷ್ಕೃತ ಆದೇಶವನ್ನು ಮಾಡಲಾಗಿದೆ
ಇದೀಗ ಇದರ ಬದಲಾಗಿ ಯಾವುದೇ ಸರ್ಕಾರಿ ನೌಕರನು ವಾರ್ಷಿಕ ವೇತನ ಬಡ್ತಿಯನ್ನು ಪಡೆಯಲು ದಿನಾಂಕ 31-12-2022ರೊಳಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗದೇ ಇದ್ದಲ್ಲಿ ಮುಂಬಡ್ತಿ ಮತ್ತು ವಾರ್ಷಿಕ ವೇತನ ಬಡ್ತಿ ಗಳಿಸಲು ಅರ್ಹನಾಗತಕ್ಕದ್ದಲ್ಲ ಎಂಬುದಾಗಿ ತಿಳಿಸಿದೆ.ಈ ನಿಯಮ ಪ್ರಾರಂಭದ ದಿನಾಂಕದಿಂದ ಹತ್ತು ವರ್ಷಗಳ ಅವಧಿಯೊ ಳಗೆ ಎಂಬ ಪದಗಳ ಬದಲಿಗೆ ದಿನಾಂಕ 31-12-2022 ರೊಳಗೆ ಎಂಬ ಪದ ಮತ್ತು ಅಂಕಿಗಳನ್ನು ಪ್ರತಿಷ್ಠಾಪಿಸತ ಕ್ಕದ್ದು ಎಂದು ತಿಳಿಸಿದೆ.