ಬೆಂಗಳೂರು –
ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಆಯುಕ್ತರಾಗಿದ್ದ ವಿಶಾಲ್ ಅವರನ್ನು ವರ್ಗಾವಣೆ ಮಾಡಿ ಇವರ ಸ್ಥಳಕ್ಕೆ ಬಿ.ಬಿ ಕಾವೇರಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ
ಹೌದು ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೊಸ ಹೊಸ ಕೆಲಸ ಕಾರ್ಯಗಳ ಮೂಲಕ ಮುನ್ನುಡಿ ಬರೆದು ಉತ್ತಮ ರೀತಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಡಾ.ವಿಶಾಲ್ ಆರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕಾವೇರಿ ಬಿ.ಬಿ ಅವರನ್ನು ನಿಯೋಜಿಸಲಾಗಿದೆ. ಈ ಕುರಿತಂತೆ ಇಂದು ರಾಜ್ಯ ಸರ್ಕಾರ ಅಧಿಸೂ ಚನೆ ಹೊರಡಿಸಿದ್ದು 2008ನೇ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಕಾವೇರಿ ಬಿ.ಬಿ ಅವರನ್ನು ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಇಲ್ಲಿಂದ ವರ್ಗಾವಣೆ ಮಾಡಿದೆ.
ಐಎಎಸ್ ಅಧಿಕಾರಿ ಬಿ.ಬಿ ಕಾವೇರಿ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.ಇನ್ನೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿ ದ್ದ ಡಾ.ವಿಶಾಲ್ ಆರ್ ಅವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಐಎಎಸ್ ಅಧಿಕಾರಿಯಾಗಿದ್ದಂತ ಡಾ.ವಿಶಾಲ್ ಆರ್ ಅವರು ಶೈಕ್ಷಣಿಕ ಪ್ರಗತಿಯ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದರು.ಶಿಕ್ಷಣ ಇಲಾಖೆ ಯಲ್ಲಿ ಯಾವುದೇ ದೂರುಗಳು ಬಂದರೂ ಅದಕ್ಕೆ ಪ್ರತಿ ಸ್ಪಂದಿಸಿ ಸಕಾರಾತ್ಮಕವಾಗಿಯೇ ಕ್ರಮ ಕೈಗೊಂಡು ಸರಿ ಪಡಿಸುತ್ತಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು….