ಬೆಂಗಳೂರು –
ಪಿಂಚಣಿ ಪಡೆಯಬೇಕೆಂದರೆ ಈವರೆಗೆ ಅದೊಂದು ಹರಸಾಹಸದ ಕಾರ್ಯವಾಗಿತ್ತು.ವಯೋವೃದ್ಧರು, ವಿಧವೆ ಯರು ಪಿಂಚಣಿ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿ ಹೋಗುತ್ತಿದ್ದರು.ಈ ಹಿನ್ನೆಲೆ ಯಲ್ಲಿ ಪಿಂಚಣಿ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ.ಜನರಿಗೆ ಮನೆಬಾ ಗಿಲಲ್ಲಿ ಪಿಂಚಣಿ ನೀಡಲು ಫೋನ್ ಮೂಲಕ ಪೆನ್ಷನ್ ಎಂಬ ಯೋಜನೆಯನ್ನು ಆರಂಭಿಸಿದ್ದು ಪಿಂಚಣಿ ಪಡೆಯ ಲು ಅರ್ಹರಾದವರು 4 ಅಂಕಿಯ ಸಹಾಯವಾಣಿಗೆ ಕರೆ ಮಾಡಿ ಅವರ ಹೆಸರು,ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ತಿಳಿಸಿದರೆ ಸಾಕು ಸಮಸ್ಯೆ ಗೆ ಪರಿಹಾರ ಮನೆ ಬಾಗಿಲಲ್ಲೇ ಸಿಗುತ್ತದೆ.
.
ಇದಾದ ಹತ್ತು ನಿಮಿಷದಲ್ಲಿ ಕರೆ ಮಾಡಿದವರ ಸಂಪೂರ್ಣ ವಿವರ ಜಿಲ್ಲಾಧಿಕಾರಿ,ತಹಶೀಲ್ದಾರ್ ಅವರುಗಳಿಗೆ ತಲುಪ ಲಿದ್ದು,ನಂತರ ಗ್ರಾಮಲೆಕ್ಕಾಧಿಕಾರಿ ಫಲಾನುಭವಿಯ ಮನೆಗೆ ತೆರಳಿ ಅವರು ಪಿಂಚಣಿ ಪಡೆಯಲುಅರ್ಹರಿದ್ದಾರಾ ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ.ಫಲಾನುಭವಿ ಅರ್ಹರಾಗಿದ್ದ ಪಕ್ಷದಲ್ಲಿ ಗ್ರಾಮ ಲೆಕ್ಕಾಧಿಕಾರಿ,ಉಪ ತಹಶೀ ಲ್ದಾರ್ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ.ಬಳಿಕ ಉಪತಹಶೀಲ್ದಾರ್ ಅವರು ಅನುಮೋದಿಸಲಿದ್ದು, ಹೀಗಾಗಿ ಕರೆ ಮಾಡಿದ 72 ತಾಸಿನಲ್ಲಿ ಫಲಾನುಭವಿಗಳಿಗೆ ಪಿಂಚಣಿ ಸಿಗಲಿದೆ.