ಇಂದು ಸಚಿವಾಲಯ ಬಂದ್ ಮಾಡಿ ನೌಕರರ ಪ್ರತಿಭಟನೆ ಹೋರಾಟ ಮಾಡಿದರೆ ಕಠಿಣ ಕ್ರಮವನ್ನು ಕೈಗೊಳ್ಳುವ ಎಚ್ಚರಿಕೆ ನೀಡಿದ ರಾಜ್ಯ ಸರ್ಕಾರ…..

Suddi Sante Desk

ಬೆಂಗಳೂರು –

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಚಿವಾಲಯದ ನೌಕರರು ಇಂದು ಬಂದ್‍ಗೆ ಕರೆ ನೀಡಿ ದ್ದಾರೆ ಇದರಿಂದಾಗಿ ದಿನನಿತ್ಯದ ಕೆಲಸ ನಿರ್ವಹಣೆಯಲ್ಲಿ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.ಸಚಿವಾಲಯದ 542 ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾ ವನೆ ಸೇರಿದಂತೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಒಂದು ದಿನದ ಮಟ್ಟಿಗೆ ಸಚಿವಾಲಯದ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ತಿಳಿಸಿದ್ದಾರೆ.

ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಹಲವು ದಿನಗ ಳಿಂದ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.ಸೇವೆಯಿಂದ ನಿವೃತ್ತಿಯಾದ ನೌಕರರನ್ನು ಮರು ನೇಮಕ ಮಾಡುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೆವು.ಆದರೆ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು

ಕಂದಾಯ ಸಚಿವ ಆರ್.ಅಶೋಕ್ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯು ಅವೈಜ್ಞಾ ನಿಕವಾಗಿ ಶಿಫಾರಸು ಮಾಡಿರುವ ಅಂಶಗಳನ್ನು ಕೈ ಬಿಡ ಬೇಕು ನಿವೃತ್ತ ಮುಖ್ಯಕಾರ್ಯದರ್ಶಿ ಟಿ.ಎಂ ವಿಜಯ ಭಾಸ್ಕರ್ ಅಧ್ಯಕ್ಷತೆಯಲ್ಲಿ ರಚಿಸಿರುವ ಆಡಳಿತಾ ಸುಧಾ ರಣಾ ಆಯೋಗದ 2ರಲ್ಲಿ ಸಚಿವಾಲಯದ ಕುರಿತು ನೀಡಿ ರುವ ಶಿಫಾರಸುಗಳು ಸಚಿವಾಲಯಗಳಲ್ಲಿ ನಿಯೋಜನೆ ಅನ್ಯ ಕಾರ್ಯನಿಮಿತ್ತ ಕಾರ್ಯ ನಿರ್ವಹಿಸುತ್ತಿರುವವರನ್ನು ಕೂಡಲೇ ಮಾತೃ ಇಲಾಖೆಗೆ ಕಳುಹಿಸಿಕೊಡಬೇಕೆಂದು ಒತ್ತಾಯಿಸಿದರು.

ಸಚಿವಾಲಯದ ಯಾವುದೇ ಇಲಾಖೆ ಹುದ್ದೆಗಳ ಕಡಿತದ ಪ್ರಸ್ತಾನೆಯನ್ನು ಕೈ ಬಿಡಬೇಕು.ಜನಸ್ಪಂದನೆ ಇಲಾಖೆ ರದ್ದುಗೊಳಿಸಿರುವುದನ್ನು ಹಿಂಪಡೆಯುವುದು.ಖಾಲಿ ಇರುವ ಗ್ರೂಪ್ ಡಿ ಮತ್ತು ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದು, ಎನ್‍ಕೇ ಡರ್ ಹುದ್ದೆಗಳನ್ನು ಸಿಆಸು ಮೂಲಕವೇ ತುಂಬ ಬೇಕೆಂದು ಗುರುಸ್ವಾಮಿ ಮನವಿ ಮಾಡಿದರು.ಸಚಿವಾಲಯದ ಆಪ್ತ ಶಾಖೆಗಳಲ್ಲಿ ಆಪ್ತ ಕಾರ್ಯದರ್ಶಿ,ಆಪ್ತಸಹಾಯಕರ ಸೇವೆ ಗಳನ್ನು ಹೊರತುಪಡಿಸಿ ಹೊರಗುತ್ತಿಗೆ ನೌಕರರ ಸೇವೆ ಯನ್ನು ತಕ್ಷಣವೇ ರದ್ದುಗೊಳಿಸಬೇಕು.ನೌಕರರ ಸೇವೆಗ ಳನ್ನು ಸಚಿವರು ಆಪ್ತ ಶಾಖೆಗಳಲ್ಲಿ ಕಡ್ಡಾಯವಾಗಿ ಬಳಸಿ ಕೊಳ್ಳುವುದು ವಿಧಾನಸೌಧ,ವಿಕಾಸಸೌಧ ಮತ್ತು ಬಹು ಮಹಡಿ ಕಟ್ಟಡಗಳಲ್ಲಿಯೇ ಇಲಾಖೆಗಳನ್ನು ತರುವುದು ಬಹುಮಹಡಿ ಕಟ್ಟಡದ ಆವರಣದ ರಸ್ತೆಯನ್ನು ಸಾರ್ವ ಜನಿಕ ರಸ್ತೆಯನ್ನಾಗಿ ಮಾಡಿರುವ ಕ್ರಮವನ್ನು ರದ್ದುಗೊಳಿ ಸಬೇಕೆಂದು ಆಗ್ರಹಿಸಿದರು.ಇನ್ನೂ ಇದರ ನಡುವೆ ಈ ಒಂದು ಹೋರಾಟ ಮಾಡಿದರೆ ಅವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದು ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕಚೇರಿಗೆ ರಜೆ ಹಾಕಿ ಸಚಿವಾಲಯ ಬಂದ್ ಮಾಡುತ್ತೇವೆ. ಸರ್ಕಾರ ನೌಕರರ ವಿರೋಧ ದೋರಣೆಯನ್ನು ಕೈ ಬಿಡಬೇಕೆಂದು ಅವರು ಮನವಿ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.