ಬೆಂಗಳೂರು –
ಸರ್ಕಾರಿ ನೌಕರರ ದಶಕಗಳ ಬೇಡಿಕೆ ಈಡೇರಿಸಿದ ರಾಜ್ಯ ಸರ್ಕಾರ – ಶೀಘ್ರದಲ್ಲೇ ಪರಿಹಾರವಾಗ ಲಿದೆ ತೊಡಕು ಈಡೇರಲಿದೆ ಬಹುದಿನಗಳ ರಾಜ್ಯ ಸರ್ಕಾರಿ ನೌಕರರ ಬೇಡಿಕೆ ಹೌದು ರಾಜ್ಯ ಸರ್ಕಾರಿ ನೌಕರರು ಆಸ್ತಿ ಖರೀದಿಸಬೇಕೆಂದರೆ ದೊಡ್ಡ ಸವಾಲಾಗಿತ್ತು.
ಇದೊಂದು ಸಮಸ್ತ ಸರ್ಕಾರಿ ನೌಕರರಿಗೆ ದೊಡ್ಡ ಸಮಸ್ಯೆಯಾಗಿದ್ದಲ್ಲದೇ ಹರಸಾಹಸದ ಕೆಲಸವಾ ಗಿತ್ತು.ಹೀಗಿರುವಾಗ ಈ ಒಂದು ಸಮಸ್ಯೆಯನ್ನು ಸಧ್ಯ ರಾಜ್ಯ ಸರ್ಕಾರ ನಿವಾರಣೆ ಮಾಡುವ ನಿಟ್ಟಿ ನಲ್ಲಿ ಮುಂದಾಗಿದೆ.ಸಮಸ್ಯೆಯಾಗಿದ್ದ ಈ ಒಂದು ಆಸ್ತಿ ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳ ಗೊಳಿಸಲು ಮುಂದಾಗಿದ್ದು
ಶೀಘ್ರದಲ್ಲೇ ಈ ಒಂದು ವಿಚಾರ ಕುರಿತಂತೆ ಆದೇಶವೊಂದು ಹೊರಬೀಳಲಿದೆ. ಕರ್ನಾಟಕ ದಲ್ಲಿ ಸರ್ಕಾರಿ ನೌಕರಿಯಲ್ಲಿರುವವರು ಆಸ್ತಿ ಖರೀದಿ ಮಾಡಲು ಹರಸಾಹಸವನ್ನೇ ಪಡಬೇ ಕಿತ್ತು.ಆದರೆ ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಸಧ್ಯ ಗಂಭೀರವಾಗಿ ಪರಗಣಿಸಿ ನಿವಾರಿಸಲು ಮುಂದಾಗಿದೆ.
ಶೀಘ್ರದಲ್ಲಿಯೇ ಸರ್ಕಾರಿ ನೌಕರರ ಆಸ್ತಿ ಖರೀದಿ ಪ್ರಕ್ರಿಯೆಯನ್ನು ಸರಳೀಕರಿಸುವತ್ತ ಹೆಜ್ಜೆಯನ್ನಿ ಟ್ಟಿದೆ ಈ ನಿಟ್ಟಿನಲ್ಲಿ ಆದೇಶ ಹೊರಬಿದ್ದಲ್ಲಿ ನೌಕ ರರ ದಶಕಗಳ ಬೇಡಿಕೆ ಈಡೇರಿದಂತೆ ಆಗಲಿದೆ ರಾಜ್ಯ ಮಟ್ಟದ ಜಂಟಿ ಸಮಾಲೋಚನಾ ಸಭೆ ಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ.
ಹೀಗಾಗಿ ಸರ್ಕಾರಿ ನೌಕರರಿಗೆ ಆಸ್ತಿ ಖರೀದಿ ವಿಚಾರದಲ್ಲಿ ಇದ್ದ ತೊಡಕು ಶೀಘ್ರವೇ ಪರಿಹಾರ ವಾಗಲಿದ್ದು ಶೀಘ್ರದಲ್ಲೇ ಈ ಒಂದು ವಿಚಾರ ಕುರಿತಂತೆ ರಾಜ್ಯ ಸರ್ಕಾರವು ಆದೇಶವನ್ನು ಹೊರಡಿಸಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..