ಹುಬ್ಬಳ್ಳಿ –
ನಿನ್ನೆ ಮಧ್ಯಾಹ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ವನ್ನುಕಳ್ಳತನ ಮಾಡಿದ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದೆ.ಹೌದು ನಿನ್ನೆ ಆಸ್ಪತ್ರೆಯಿಂದ ತಗೆದು ಕೊಂಡು ಹೋಗಿದ್ದ ಈ ಒಂದು ಮಗುವನ್ನು ಬೆಳಗಾಗುವ ಷ್ಟರಲ್ಲಿಯೇ ಆಸ್ಪತ್ರೆಯ ಪಿಎಮ್‌ಎಸ್‌ಎಸ್‌ವೈ ಬಿಲ್ಡಿಂಗ್ ಬಳಿ ಮಗುವನ್ನು ಬಿಟ್ಟು ಹೋಗಿದ್ದಾರೆ ಕಳ್ಳರು.ಇಂದು ಬೆಳಿಗ್ಗೆ ಮಗು ಇಟ್ಟು ಹೋಗಿದ್ದಾರೆ ಅಪರಿಚಿತ.ಪೊಲೀಸ್ ತನಿಖೆಗೆ ಭಯಗೊಂಡು ಮಗುವನ್ನ ಬಿಟ್ಟು ಹೋದ್ನಾ ಕಳ್ಳರು ಎಂಬ ಅನುಮಾನದ ಮಾತುಗಳು ಆಸ್ಪತ್ರೆಯ ಆವರಣದಲ್ಲಿ ಕೇಳಿ ಬರುತ್ತಿದ್ದು ಮಗುವನ್ನ ಕೂಡಲೇ ಚಿಕಿತ್ಸಿಗೆ ದಾಖಲಿಸಿದ್ದಾರೆ ಕಿಮ್ಸ್ ಸೆಕ್ಯುರಿಟಿ ಸಿಬ್ಬಂದಿಗಳು

ಮಗು ಬಿಟ್ಟು ಹೋದವನಿಗಾಗಿ ಸಿಸಿ ಟಿವಿಯಲ್ಲಿ ಶೋಧ ವನ್ನು ಮಾಡಲಾಗುತ್ತಿದೆ.ಇನ್ನೂ ಈ ಒಂದು ಪ್ರಕರಣ ಹಿಂದೆ ಹುಟ್ಟುತ್ತಿವೆ ಹಲವು ಅನುಮಾನಗಳು.ಕಿಮ್ಸ್ ನಲ್ಲಿರೋ 300 ಸಿಸಿಟಿವಿ ಕ್ಯಾಮೆರಾ ಜಾಲಾಡಿದರು ಕೂಡಾ ಕಳ್ಳತನ ದ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಸಿಕ್ಕಿಲ್ಲ.ಮಗು ಪೋಷಕರ ಗೊಂದಲದ ಹೇಳಿಕೆಯಿಂದ ತನಿಖೆಗೆ ಅಡ್ಡಿ ಯಾಗಿದೆ.ಮಗು ಕೈಯಲ್ಲಿದ್ದಾಗಲೇ ಕಸಿದುಕೊಂಡು ಹೋದರು ಎಂದು ಒಮ್ಮೆ ಹೇಳಿಕೆ.ಬೆಡ್ ಮೇಲೆ ಹಾಕಿದಾಗ ಎತ್ತಿಕೊಂಡು ಹೋದರು ಎಂದು ಮತ್ತೊಮ್ಮೆ ಹೇಳಿಕೆ. ಬೆಡ್ ಮೇಲಿಂದ ಅಥವಾ ಕೈಯಲ್ಲಿದ್ದಾಗ ಆಗಿಯೇ ಇಲ್ಲ ಕಳ್ಳತನ.ಮಗುವನ್ನೆತ್ತಿಕೊಂಡು ವಾರ್ಡ್ ನಿಂದ ಕಾರಿಡಾರ್ ಗೆ ಬಂದಿದ್ದ ತಾಯಿ.ಮಗು ಎತ್ತಿಕೊಂಡು ಕಾರಿಡಾರ್ ಗೆ ಬಂದಿರುವದನ್ನು ಖಚಿತ ಪಡಿಸಿದ ಕಿಮ್ಸ್ ಅಧಿಕಾರಿಗಳು
ಮಗು ಕಳುವಾದ ನಂತರ ಗದ್ದಲ ಗಲಾಟೆ ಆಕ್ರಂದನ ಮಾಡದ ತಾಯಿ ಹಾಗೂ ಪೋಷಕರು.ಮಗು ಕಳ್ಳತನದ ಕುರಿತು ಸಾಮಾನ್ಯ ದೂರು ನೀಡಿದ ತಾಯಿ ಹಾಗೂ ಅಜ್ಜಿ.ಕಿಮ್ಸ್ ಸೆಕ್ಯೂರಿಟಿ ಸಿಬ್ಬಂಧಿಗೆ ಸಾಮಾನ್ಯವಾಗಿಯೇ ದೂರು.ಪೋಷಕರ ಈ ನಡೆಯಿಂದ ಪೊಲೀಸರಲ್ಲಿ ಮೂಡಿವೆ ಹಲವು ಅನುಮಾನಗಳು.ತಾಯಿ ಹಾಗೂ ಅಜ್ಜಿ ಯನ್ನು ಎದುರಿಗೆ ಕೂಡಿಸಿಕೊಂಡು ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ ಪೊಲೀಸರು.ಆರೋಪಿಯನ್ನ ಗುರುತಿಸುವಲ್ಲಿ ಪೋಷಕರಲ್ಲಿ ಗೊಂದಲ.ಆರೋಪಿಯ ಗುರುತನ್ನು ಪೊಲೀ ಸರ ಎದುರಿಗೆ ಪೋಷಕರು ಪದೇ ಪದೇ ಬದಲಿಸಿದ್ದು ಹೀಗಾಗಿ ಒಂದು ಕಡೆಗೆ ಗೊಂದಲ ಮತ್ತೊಂದೆಡೆ ಇದರಿಂ ದಾಗಿ ಹಲವು ಅನುಮಾನಗಳು ಮೂಡಿವೆ.ನಿನ್ನೆ ಮಧ್ಯಾಹ್ನ 1ಗಂಟೆಯಿಂದ 1.30 ನಿಮಿಷದ ಅವಧಿಯಲ್ಲಿ ಮಗು ಕಳ್ಳತನದ ದೂರು ದಾಖಲಾಗಿದೆ.ಕಿಮ್ಸ್ ಗೆ ಮಗುವಿನ ಚಿಕಿತ್ಸೆಗಾಗಿ ಬಂದಿದ್ದ ಕುಂದಗೋಳದ ಸಲ್ಮಾ.ವಾಂತಿ ಯಿಂದ ಬಳಲುತ್ತಿದ್ದ 40 ದಿನದ ಮಗು.ನಾಲ್ಕು ದಿನದ ಹಿಂದೆ ಕಿಮ್ಸ್ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.ವಾಂತಿ ಕಡಿಮೆಯಾದ ಕಾರಣ ನಿನ್ನೆ ಡಿಸ್ಚಾರ್ಜ್ ಮಾಡುವದಾಗಿ ಹೇಳಿದ್ದರು ವೈದ್ಯರು.ನಿನ್ನೆ ಮಗುವಿಗೆ ನಾಮಕರಣ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿತ್ತು.ಇವೆಲ್ಲದರ ನಡುವೆ ಈ ಒಂದು ಕಳ್ಳತನದ ಪ್ರಕರಣದ ತನಿಖೆಗಾಗಿ ಮೂರು ತಂಡಗಳ ರಚನೆ ಮಾಡಿದ್ದರು ಪೊಲೀಸ್ ಆಯು ಕ್ತರು.ಇವೆಲ್ಲದರ ನಡುವೆ ಸಧ್ಯ ಮಗುವನ್ನು ಆಸ್ಪತ್ರೆಯಲ್ಲಿ ಇಟ್ಟು ಹೋಗಿದ್ದು ಹೀಗಾಗಿ ಇನ್ನೂ ಮೇಲೆ ಬದಲಾಗುತ್ತಾ ತನಿಖೆಯ ದಿಕ್ಕು ಎಂಬ ಮಾತುಗಳು ಕೇಳಿ ಬರುತ್ತಿದ್ದು ಸಧ್ಯ ಪೊಲೀಸರು ಮುಂದೇನು ಮಾಡ್ತಾರೆ ಈ ಒಂದು ಘಟನೆಯ ಹಿಂದೆ ಯಾರ ಕೈವಾಡ ಇದೆ ಎಂಬ ಕುರಿತಂತೆ ವಿದ್ಯಾನಗರ ಪೊಲೀಸರು ತನಿಖೆಯಿಂದಾಗಿ ಉತ್ತರ ನೀಡಬೇಕಿದೆ.