ಕಲಘಟಗಿ –
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕುರುವಿನ ಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್. ಎಫ್ ಪಾಟೀಲ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿದೆ.ಇನ್ನೂ ಮಹಿಳಾ ಶಿಕ್ಷಕಿಗೆ ನ್ಯಾಯ ದೊರಕಿ ಸಿಕೊಡಲು ಸಮಾಜ ಸೇವಕ ಶಂಕರ ಹುದ್ದಾರ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯ ಕಂಡಿದೆ.ಇನ್ನೂ ಈ ಒಂದು ವಿಚಾರ ತಿಳಿದು ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾ ಉಪನಿರ್ದೇಶಕ ಕೆಳದಿಮಠ ಭೇಟಿ ನೀಡಿದ್ದರು.ಕುರುವಿನಕೊಪ್ಪ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಪುಷ್ಪಲತಾ ಕಣವಿ ಅವರನ್ನು ಯಾರೂ ವಿಚಾರಣೆ ಮಾಡದೆ ಕೆಲವರ ಒತ್ತಡಕ್ಕೆ ಮಣಿದು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿದೆ ಎಂದು ಆಪಾದಿಸಿ ಹುದ್ದಾರ ನಾಲ್ಕು ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದರು.
ಕೆಳದಿಮಠ ಅವರು ಪಾಟೀಲ ಅವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡುವಂತೆ ಸೂಚಿಸಿದರು.ಇನ್ನೂ ಈ ಒಂದು ಪ್ರಕರಣದ ಕುರಿತು ತನಿಖೆ ನಡೆಸಲು ಮುಂಬರುವ ದಿನಗಳಲ್ಲಿ ಸಮಿತಿ ರಚನೆ ಮಾಡಿ.ಶಾಲೆಗೆ ಭೇಟಿ ನೀಡಿ ಕ್ರಮ ಕೈಗೊಳ್ಳುವೆ ಎಂದು ಕೆಳದಿಮಠ ಭರವಸೆ ನೀಡಿದರು ತಾಲ್ಲೂಕು ಪಂಚಾಯಿತಿ ಇಒ ಶಿವಪುತ್ರಪ್ಪ ಮಠಪತಿ ಬಿಇಒ ಉಮಾದೇವಿ ಬಸಾಪುರ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ್ ಕೆ.ಎಫ್,ಪುಟ್ಟಪ್ಪ ಭಜಂತ್ರಿ,ಶ್ರೀಧರ ಪಾಟೀಲ ಕುಲಕರ್ಣಿ,ಎಂ.ಆರ್ ತೋಟಗಂಟಿ ಇದ್ದರು.